ಉಡುಪಿ ಶ್ರೀ ಕೃಷ್ಣಮಠದ ಭಾವೀ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಸ್ವಾಮಿಗೆ ಕಾಪುವಿನಲ್ಲಿ ತುಲಾಭಾರ ಸೇವೆ

(Kaup) ಕಾಪು : ಉಡುಪಿ ಶ್ರೀ ಕೃಷ್ಣಮಠದ ಭಾವೀ ಪರ್ಯಾಯ ಪೀಠಾಧಿಪತಿ, ನಾಲ್ಕನೇ ಬಾರಿಗೆ ಪರ್ಯಾಯ ಪೀಠಾರೋಹಣಗೈಯ್ಯಲಿರುವ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು (Sugunendra Theertha Swamiji) ಮಹತೋಭಾರ ಕಾಪು ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿದರು.
ಪರ್ಯಾಯ ಪೂರ್ವದಲ್ಲಿ ಶ್ರೀ ಜನಾರ್ದನ ದೇಗುಲಕ್ಕೆ ಭೇಟಿ ನೀಡಿದ ಪುತ್ತಿಗೆ ಶ್ರೀಗಳನ್ನು ಕಾಪು ಸಾವಿರ ಸೀಮೆಯ ಭಗವದ್ಭಕ್ತರು ಸ್ವಾಗತಿಸಿ, ಪಾದಪೂಜೆ ಸಹಿತವಾಗಿ ಮಹಾ ಮಂಗಳಾರತಿ ಬೆಳಗಿದರು.
ಬಳಿಕ ದೇಗುಲದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕೆ.ಪಿ. ಶ್ರೀನಿವಾಸ ತಂತ್ರಿ (KP Shrinivasa Thnthri)ಹಾಗೂ ಭಕ್ತಾದಿಗಳ ವತಿಯಿಂದ ತುಲಾಭಾರ ನೆರವೇರಿಸಲಾಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಅವರು, ಉಡುಪಿ ಪರ್ಯಾಯಕ್ಕೂ ಕಾಪುವಿಗೂ ಅವಿನಾಭಾವವಾದ ಸಂಬಂಧವಿದೆ. ತಮ್ಮಪರ್ಯಾಯಕ್ಕೆ ಪ್ರತೀ ವರ್ಷವೂ ಕಾಪುವಿನ ಬಹಳಷ್ಟು ಭಕ್ತರು, ಅಭಿಮಾನಿಗಳು ಸಹಕಾರ ನೀಡುತ್ತಾ ಬರುತ್ತಿದ್ದಾರೆ. ಕಾಪುವಿನ ಜನತೆ ಆಗಮಿಸಿ, ಪರ್ಯಾಯಕ್ಕೂ ಕೃಷ್ಣಸೇವೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿದರು.
ಕಾಪು ತಹಶೀಲ್ದಾರ್ ಡಾ. ಪ್ರತಿಭಾ ಆರ್.(Kaup Thashildar DR Prathibha R), ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ.(Arun Kumar BK), ಗೌರವ ಸಲಹೆಗಾರ ಕೆ.ಪಿ. ಆಚಾರ್ಯ (KP Acharya), ಕಾಪು ಹೊಸ ಮಾರಿಗುಡಿ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ (K Vasudeva Shetty)ಮೊದಲಾದವರು ಉಪಸ್ಥಿತರಿದ್ದರು.

