ಉತ್ತರಾಖಂಡ: ಸುರಂಗದ ಮೇಲಿನಿಂದ ಡ್ರಿಲ್ಲಿಂಗ್ ಆರಂಭ – ಕೈ ಜೋಡಿಸಿದ ಭಾರತೀಯ ಸೇನೆ
(Uttarakhand) ಉತ್ತರಕಾಶಿ (ಉತ್ತರಾಖಂಡ) : ಸತತ 15 ದಿನಗಳಿಂದ ಸಿಲ್ಮಾರ್ (Silkyar tunnel) ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯ ಅಂತೂ ಮತ್ತೆ ಆರಂಭವಾಗಿದೆ. ಮೂರು ಬಾರಿ ತಾಂತ್ರಿಕ (Technical issue) & ರಕ್ಷಣಾ ಕಾರ್ಯ ಸ್ಥಗಿತಗೊಂಡಿದ್ದು ಆತಂಕ ಮೂಡಿಸಿತ್ತು.
ಅಡ್ಡವಾಗಿ ಸುರಂಗವನ್ನು ಕೊರೆಯುತ್ತಿದ್ದ ಔಗರ್ ಮಷೀನ್ ಬೇಡ್‌ಗಳು ಸಿಕ್ಕಿಬಿದ್ದು ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಈಗಲೂ ಕೂಡ ಮಷೀನ್‌ನ ಬೇಡ್‌ಗಳನ್ನು ಕತ್ತರಿಸುವ ಕಾರ್ಯ ನಡೆಯುತ್ತಿದೆ. ಇದರ ಜೊತೆಗೆ ಈಗ ವರ್ಟಿಕಲ್ ಡ್ರಿಲ್ಲಿಂಗ್ ಮಷೀನ್ ಸ್ಥಳಕ್ಕೆ ತರಲಾಗಿದ್ದು, ಸುರಂಗದ ಮೇಲಿನಿಂದ ಲಂಬವಾಗಿ ಕೊರೆಯುವ ಕಾರ್ಯ ಆರಂಭಗೊಂಡಿದೆ.
ಇದರ ಜೊತೆಗೆ ಮಾನ್ಯುವಲ್ ಡ್ರಿಲ್ಲಿಂಗ್‌ಗೆ ಕೂಡ ರಕ್ಷಣಾ ತಂಡ ಮುಂದಾಗಿದೆ. ಸುಮಾರು 18 ಗಂಟೆಗಳ ಕಾಲ ಸತತ ಕಾರ್ಯದಿಂದ ಮಾತ್ರ ಮಾನ್ಯುವಲ್ ಡ್ರಿಲ್ಲಿಂಗ್ ಮೂಲಕ ಸುರಂಗದ 10-15 ಮೀಟರ್ ಭೇದಿಸಲು ಸಾಧ್ಯವಿದೆ ಎಂದು ಹೇಳಲಾಗಿದೆ.
ಸುರಂಗ ಸ್ಥಳಕ್ಕೆ ಭಾರತೀಯ ಸೇನೆ
ಕೇಂದ್ರ ಹಾಗೂ ರಾಜ್ಯ ರಕ್ಷಣಾ ತಂಡಗಳು ನಡೆಸುತ್ತಿರುವ ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆ ಕೂಡ ಆಗಮಿಸಿದ್ದು ಡಿಆರ್‌ಡಿಒ ಪ್ರಮುಖ ಸಲಕರಣೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ನೆರವಾಗಿದೆ. ಈ ಬಗ್ಗೆ ಐಎಫ್ ಅಧಿಕೃತ ಮಾಹಿತಿ ನೀಡಿದೆ. ಮಡ್ರಾಸ್ ಸಾಪರ್ಸ್, ಭಾರತೀಯ ಸೇನೆಯ ಇಂಜಿನಿಯರ್‌ಗಳು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ಸುರಕ್ಷಿತವಾಗಿದ್ದು, ಅವರಿಗೆ ಬೇಕಾದ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡಲಾಗಿದೆ, ಆಕ್ಸಿಜನ್, ನೀರು, ಆಹಾರ, ಔಷಧಗಳನ್ನು ಪೈಪ್ ಮೂಲಕ ಸರಬರಾಜು ಮಾಡಲಾಗಿದ್ದು, ರಕ್ಷಣಾ ಕಾರ್ಯ ಒಂದು ವಾರಕ್ಕೂ ಹೆಚ್ಚು ಸಮಯ ತಗುಲಬಹುದು ಎಂದು ಹೇಳಲಾಗಿದೆ.

