(Uttarakhand) ಉತ್ತರಾಖಂಡ: 400 ಗಂಟೆಗಳ ರಣರೋಚಕ ಕಾರ್ಯಾಚರಣೆ; 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಜೀವಗಳು ಬದುಕಿಬಂದಿದೆ.
ರಿಯಲ್ ಹೀರೋ ಮುನ್ನಾ ಖುರೇಷಿ ಮತ್ತು ವಕೀಲ್ ಖಾನ್
ಉತ್ತರಾಖಂಡ : ಸಿಲ್ಮಾರಾ ಸುರಂಗದಲ್ಲಿ 17 ದಿನಗಳ ಬೃಹತ್ ರಕ್ಷಣಾ ಕಾರ್ಯಾಚರಣೆಯು ಯಶಸ್ವಿಯಾಗಿ ಕೊನೆಗೊಂಡಿತು. ಎಲ್ಲಾ 41 ಕಾರ್ಮಿಕರು ಆರೋಗ್ಯವಂತರಾಗಿ ಹೊರಬಂದಿದ್ದಾರೆ.
ಇಡೀ ದೇಶವೇ ಆ 41ಜೀವಗಳು ಬದುಕಲು ಪ್ರಾರ್ಥನೆಯ ಮೊರೆ ಹೋಗಿದ್ದರು. ದೇವಾಲಯ, ಚರ್ಚ್, ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿತ್ತು. ಎಲ್ಲರ ಪ್ರಾರ್ಥನೆಯ ಫಲವೋ ಏನೋ ಆ ಬಡ ಜೀವಗಳು ಬದುಕಿ ಬಂದವು. ಭಾರತವೇ ಆ ಕಾರ್ಯಾಚರಣೆಯನ್ನು ಕೊಂಡಾಡಿತು. 17 ದಿನಗಳ ಕಾಲ ಸುರಂಗದಲ್ಲಿ ಸಿಲುಕಿದ್ದ 41 ಜೀವಗಳು ಬದುಕಿ ಬಂದವು. ಖುದ್ದು ಪ್ರಧಾನಿ ಮೋದಿ (ಆ ಸಾಹಸಿಗಳನ್ನು ಕೊಂಡಾಡಿದರು. 400 ಗಂಟೆಗಳ ರಣರೋಚಕ ಕಾರ್ಯಾಚರಣೆ ಹಿಂದಿನ ರಿಯಲ್ ಹೀರೋ ಆ ಇಬ್ಬರು ಆಗಿದ್ದರು. ಅವರೇ ಮುನ್ನಾ ಖುರೇಷಿ, ವಕೀಲ್ ಖಾನ್.
ಒಳಗೆ ಸಿಕ್ಕಿಬಿದ್ದ ಕಾರ್ಮಿಕರ ದೃಢತೆ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ರಕ್ಷಕರ ಅವಿಶ್ರಾಂತ ಶ್ರಮವನ್ನು ಇಡೀ ದೇಶವೇ ಶ್ಲಾಘಿಸಿದೆ.
ಇಲ್ಲಿದ್ದ ಎಲ್ಲರೂ ಸಂತೋಷದಿಂದ ಈ ಗಣಿಗಾರರನ್ನು ಎತ್ತಿಕೊಂಡು ಕುಣಿದಾಡಿದರು. ಅಲ್ಲಿದ್ದ ಬಾದಾಮಿ ನೀಡಿದರು. ಸಿಕ್ಕಿಬಿದ್ದ ಜನರನ್ನು ಹೊರಗೆ ಕರೆದೊಯ್ಯುವ ಕೆಲಸ ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ನಂತರದ ಅರ್ಧ ಗಂಟೆಯಲ್ಲಿ ನಡೆಯಿತು.
ಉತ್ತರಾಖಂಡ ಸುರಂಗ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದ ಕಾರ್ಮಿಕರನ್ನು ಮೊದಲು ತಲುಪಿದವನು ಬ್ಯಾಟ್ ಹೋಲ್ ಮೈನರ್ ಮುನ್ನಾ ಖುರೇಷಿ. ಹತ್ತಾರು ಮೀಟರ್‌ಗಳಷ್ಟು ದೂರದ ಅವಶೇಷಗಳ ಗುಡ್ಡವನ್ನು ಇಲಿಯಂತೆ ಕೊರೆದೂ ಕೊರೆದೂ ಕಡೆಗೂ ಕಾರ್ಮಿಕರನ್ನು ತಲುಪಿದಾತ ಮುನ್ನಾ ಖುರೇಷಿ, ವಕೀಲ್ ಖಾನ್ ಹಾಗೂ ಇವರ ಬಳಗ.
ಉತ್ತರಾಖಂಡದ ಸುರಂಗ ಕುಸಿತದ ಜಾಗದಲ್ಲಿ ಅನೇಕ ಸರ್ಕಾರಿ ಏಜೆನ್ಸಿಗಳು, ಭಾರಿ ಭಾರಿ ಯಂತ್ರಗಳು, ರಕ್ಷಣೆಯ ಪಡೆಯೇ ನಿಯೋಜಿಸಲ್ಪಟ್ಟಿದ್ದರೂ, ಕೊನೆಯ ಹಂತವನ್ನು ಯಶಸ್ವಿಯಾಗಿ ಮುಗಿಸಿದವರು ಈ ಇಲಿ- ಕುಳಿ ಗಣಿಗಾರರು. ಕಾರ್ಮಿಕರನ್ನು ಮೊದಲು ತಲುಪಿದ ಮುನ್ನಾ ಖುರೇಷಿ ಕಾರ್ಯಾಚರಣೆಯ ನಾಯಕ ಎಂದು ಪ್ರಶಂಸಿಸಲ್ಪಟ್ಟಿದ್ದಾರೆ.
ಮುನ್ನಾ ಖುರೇಷಿ 29 ವರ್ಷ ವಯಸ್ಸಿನ ಕ್ಯಾಟ್ ಹೋಲ್ ಮೈನರ್. ಚರಂಡಿ ಮತ್ತು ನೀರಿನ ಮಾರ್ಗಗಳನ್ನು ತೆರವುಗೊಳಿಸುವ ಎಂಜಿನಿಯರಿಂಗ್ ಸೇವೆಗಳ ಕಂಪನಿ – ದೆಹಲಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೊನೆಯ 12 ಮೀಟರ್ ಶಿಲಾಖಂಡರಾಶಿಗಳನ್ನು ಕೊರೆದು ತೆಗೆದುಹಾಕಲು ಸೋಮವಾರ ಉತ್ತರಾಖಂಡಕ್ಕೆ ಕರೆತರಲಾದ ಡಜನ್‌ಗಟ್ಟಲೆ ಇಲಿ-ಕುಳಿ ಗಣಿಗಾರರಲ್ಲಿ ಅವರು ಒಬ್ಬರು.
ಯುಎಸ್ ನಿರ್ಮಿತ ಆಗರ್ ಯಂತ್ರವು ಕೆಲಸ ಮುಗಿಸಲಾಗದೆ ಕೆಟ್ಟು ಹೋದ ನಂತರ ಇಲಿ-ಕುಳಿ ಗಣಿಗಾರರೇ ರಕ್ಷಣಾ ಕಾರ್ಯಾಚರಣೆಯ ಕೊನೆಯ ಭರವಸೆಯಾಗಿದ್ದರು.
ಇಲಿ-ರಂಧ್ರ ಗಣಿಗಾರಿಕೆಯೆಂದರೆ ಸಣ್ಣ ತೂತುಗಳನ್ನು ಉದ್ದಕ್ಕೆ ಅಗೆಯುವ ಮೂಲಕ ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನ. ಆದರೆ ಅವೈಜ್ಞಾನಿಕ ವಿಧಾನವೆಂದು 2014ರಲ್ಲಿ ಇದನ್ನು ನಿಷೇಧಿಸಲಾಗಿದೆ.

