ಉದ್ಯಾವರ : ಚರಂಡಿಗೆ ಬಿದ್ದು ಮದ್ಯ ವಯಸ್ಕ ಸಾವು
(Udyavara) ಉದ್ಯಾವರ: ಉದ್ಯಾವರ ಕೇದಾರ್ ಎಂಬಲ್ಲಿ ಮದ್ಯವಯಸ್ರೋರ್ವರು ಮನೆ ಹಿಂಭಾಗದ ಚರಂಡಿಗೆ ಬಿದ್ದು ಮೃತಪಟ್ಟ ಗಟನೆ ಭಾನುವಾರ ಸಂಜೆ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ನಿವಾಸಿ ಉದ್ಯಾವರ ಕೇದಾರ್ ರೊನಾಲ್ಡ್ ಫೆರ್ನಾಂಡಿಸ್ (52) ಎಂದು ಗುರುತಿಸಲಾಗಿದೆ.
ರೋನಾಲ್ಡ್‌ರವರು ಕೆಲಸ ಮುಗಿಸಿ ಮನೆ ಬಳಿ ಬರುತ್ತಿದ್ದಾಗ, ಮನೆ ಹಿಂಬದಿಯ ತೋಡಿಗೆ ಆಕಸ್ಮಿಕವಾಗಿ ಬಿದ್ದು ಮೃತ ಪಟ್ಟಿದ್ದಾರೆ.
ಮೃತರು ಅವಿವಾಹಿತರಾಗಿದ್ದು, ತಾಯಿ ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಕಾಪು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

