ಉದ್ಯಾವರ: ಬೃಹತ್ ವೈದ್ಯಕೀಯ ತಪಾಸಣಾ ಶಿಬಿರ
ಉದ್ಯಾವರ ಸೈಂಟ್ ಝೇವಿಯರ್ ಫ್ರಾನ್ಸಿಸ್ ಚರ್ಚ್ ಸಭಾಂಗಣದಲ್ಲಿ ನಡೆದ ಶಿಬಿರ
(Udyavara) ಉದ್ಯಾವರ: ಲೋಂಬಾಡ್೯ ಮೆಮೊರಿಯಲ್ ಆಸ್ಪತ್ರೆ, ವೈದ್ಯಕೀಯ ಪ್ರತಿನಿಧಿಗಳ ಸಂಘ, ಜೆಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಇವರ ಆಶ್ರಯದಲ್ಲಿ ಭಾನುವಾರ ಉದ್ಯಾವರ ಸೈಂಟ್ ಝೇವಿಯರ್ ಫ್ರಾನ್ಸಿಸ್ ಚರ್ಚ್ ಸಭಾಂಗಣದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸೈಂಟ್ ಫ್ರಾನ್ಸಿಸ್ ಝೆವಿಯರ್ ಚರ್ಚಿನ ಧರ್ಮ ಗುರುಗಳಾದ ಅನಿಲ್ ಡಿಸೋಜಾ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಯಾಥೋಲಿಕ್ ಸಭಾದ ಒಂಬತ್ತು ವರಾಡೋದ ಅಧ್ಯಕ್ಷರಾದ ಕಿರಣ್ ಲೂಯಿಸ್, ಬ್ರದರ್ ಕೆವಿನ್ ಡಿಸೋಜಾ, ಮಿಷನ್ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ಅಭಿನಯ್ ಅಶೋಕ್, ಸಾಮಾನ್ಯ ರೋಗ ತಜ್ಞರಾದ ಡಾ. ವೈಭವ್ ಎಸ್, ಡಾ. ಕೆವಿನ್ ಪಾಂಡ್ಯನ್, ಇ ಎನ್ ಟಿ ತಜ್ಞರಾದ ಡಾ. ರೆಬೆಕ್ಕಾ ವೈದ್ಯಕೀಯ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಪ್ರಸನ್ನ ಕಾರಂತ್, ರಾಘವೇಂದ್ರ ಪ್ರಭು ಕರ್ವಾಲು, ಮಿಷನ್ ಆಸ್ಪತ್ರೆ, ಪಿ ಆರ್ ಓ ರೋಹಿ ರತ್ನಾಕರ್, ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲೂವಿಸ್ ಉಪಸ್ಥಿತರಿದ್ದರು.
ಸಿಂಥಿಯಾ ಡಿಸಿಲ್ವ, ಹಿಲ್ದಾ ಬಾರ್ನಸ್ ನಿರೂಪಿಸಿದರು. ಅನಿತಾ ಡಿಸೋಜ ವಂದಿಸಿದರು.

