ಡಾ. ಸುಧೀರ್ ರಾಜ್ ಕೆ ಅವರಿಗೆ ಜೀವಮಾನ ಸಾಧನೆಗಾಗಿ “ಕರ್ನಾಟಕ ರಾಜ್ಯ ಎಕ್ಸೆಲೆನ್ಸ್ ಅವಾರ್ಡ್ -2026″
ಬೆಂಗಳೂರಿನ ಸ್ವರ್ಣ ಭಾರತ ಪ್ರತಿಷ್ಠಾನ ನೀಡುವ ಪ್ರಶಸ್ತಿ
(Bengaluru) ಬೆಂಗಳೂರು: ಪ್ರೊಫೆಸರ್ ಡಾ. ಸುಧೀರ್ ರಾಜ್ ಕೆ ಅವರಿಗೆ ಪ್ರತಿಷ್ಠಿತ ಸ್ವರ್ಣ ಭಾರತ ಪ್ರತಿಷ್ಠಾನ ಬೆಂಗಳೂರು ವತಿಯಿಂದ ಜೀವಮಾನ ಸಾಧನೆಗಾಗಿ ನೀಡುವ “ಕರ್ನಾಟಕ ರಾಜ್ಯ ಎಕ್ಸೆಲೆನ್ಸ್ ಅವಾರ್ಡ್ -2026” ಪ್ರಶಸ್ತಿ ನೀಡಿ ಗೌರವಿಸಿದೆ.
ಇತ್ತೀಚೆಗೆ ಬೆಂಗಳೂರಿನ ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರೊಫೆಸರ್ ಡಾ ಸುಧೀರ್ ರಾಜ್ ಕೆ ಅವರ ಶಿಕ್ಷಣ, ತರಬೇತಿ, ವಿದ್ಯಾರ್ಥಿಗಳ ಸರ್ವಾಂಗೀಣ ಯಶಸ್ಸಿಗೆ ಸಂಬಂಧಿಸಿದ ಮಾರ್ಗದರ್ಶನ, ಸಾಂಸ್ಕೃತಿಕ ಕೊಡುಗೆಗಳಿಗಾಗಿ ಮತ್ತು ಈ ಕ್ಷೇತ್ರಗಳಲ್ಲಿನ ಕಳೆದ 42 ವರುಷಗಳ ಸುದೀರ್ಘ “ಜೀವಮಾನ ಸೇವೆ”ಗಳಿಗಾಗಿ ಸ್ವರ್ಣ ಭಾರತ ಪ್ರತಿಷ್ಠಾನ ಪ್ರಶಸ್ತಿ ನೀಡಿದೆ.
ಇದು ಪ್ರೊ. ಡಾ ಸುಧೀರ್ ರಾಜ್ ಕೆ ಅವರ 14 ನೆಯ ಪ್ರಶಸ್ತಿಯಾಗಿದೆ.

