ಎಎಸ್‌ಐ ಆಗಿ ಪದೋನ್ನತಿ ಹೊಂದಿದ ನರೇಶ್ ಎನ್ಕೆ
ಎಎಸ್‌ಐ ಆಗಿ ಕೊಲ್ಲೂರು ಠಾಣೆಗೆ ಜನಸ್ನೇಹಿ ಪೊಲೀಸ್
(Padubidri) ಪಡುಬಿದ್ರಿ : ಸರಿ ಸುಮಾರು 30 ವರ್ಷಗಳ ಕಾಲ ಜನರೊಂದಿಗೆ ಬೆರೆತು ಜನಸ್ನೇಹಿ ಪೊಲೀಸ್ ಎಂಬುದನ್ನು ಸಾಬೀತು ಪಡಿಸಿದನರೇಶ್ ಎನ್ಕೆಯವರು ಹೆಡ್ ಕಾನ್ಸ್ಟೇಬಲ್ ಪದವಿಯಿಂದ ಈಗ ಎಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.
ನರೇಶ್ ಎನ್ಕೆಯವರು 1996ರ ಬ್ಯಾಚಿನಲ್ಲಿ ಬೈಂದೂರಿನಲ್ಲಿ ಪೊಲೀಸ್ ಹುದ್ದೆಗೆ ಸೇರಿದ್ದಾರೆ. ಆನಂತರ ಕಾರ್ಕಳ ಗ್ರಾಮಾಂತರದಲ್ಲಿ ಸೇವೆ, ಎಕ್ಸೈಸ್ ಮತ್ತು ಲಾಟರಿ ನಿಷೇಧ ದಳದಲ್ಲಿ ಸೇವೆ ಸಲ್ಲಿಸಿ, ಹೆಡ್ ಕಾನ್ಸ್ಟೇಬಲ್ ಹುದ್ದೆಗೇರಿದರು.
ಕಾಪು, ಪಡುಬಿದ್ರಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸಿದ ಬಳಿಕ ಈಗ ಕೊಲ್ಲೂರು ಪೊಲೀಸ್ ಠಾಣೆಗೆ ಎಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ.
ಮೂಲತ: ಕಾಸರಗೋಡಿನ ನಾಗರ ಕಟ್ಟೆಯವರಾದ ನರೇಶ್, ಈಗ ಮಂಗಳೂರಿನ ಕುಂಪಳ ತೊಕ್ಕೊಟ್ಟಿವಿನಲ್ಲಿ ಸ್ವಂತ ಮನೆ ಹೊಂದಿ ಪತ್ನಿ, ಮಗ, ಮಗಳೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.
ನರೇಶ್ ರವರ ಜೀವನ ಉಜ್ವಲವಾಗಲಿ. ಅವರು ಉನ್ನತ ಪದವಿಯನ್ನು ಪಡೆಯಲಿ. ಇನ್ನಷ್ಟು ಜನಸ್ನೇಹಿ ಪೋಲಿಸ್ ಆಗಲಿ ಎಂದು ನಮ್ಮ ಹಾರೈಕೆ.

