ಎನ್.ಎಸ್.ಎ.ಎಂ ಕಾಲೇಜು ವಿದ್ಯಾರ್ಥಿನಿ ನಂದಿನಿಗೆ ಓಟದಲ್ಲಿ ಬೆಳ್ಳಿ ಪದಕ
ಗುಂಟೂರಿನ ನಾಗಾರ್ಜುನ ವಿಶ್ವವಿದ್ಯಾಲಯದ ಆಯೋಜನೆಯ ಕ್ರೀಡಾ ಕೂಟ
(Nitte) ನಿಟ್ಟೆ: ಗುಂಟೂರಿನ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ವಲಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 20 ವರ್ಷದೊಳಗಿನ ವಿಭಾಗದಲ್ಲಿ ಡಾ. ಎನ್.ಎಸ್.ಎ. ಎಂ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ನಂದಿನಿ 5,000 ಮೀಟರ್ ಓಟ ಮತ್ತು 3,000 ಮೀಟರ್ ಓಟದಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.
ಇದೇ ವಯೋವಿಭಾಗದಲ್ಲಿ 100 ಮೀಟರ್ ಓಟ ಮತ್ತು 4×100 ಮೀ ರಿಲೇಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸ್ತುತಿ ಪಿ ಶೆಟ್ಟಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.

