• Home  
  • ಎರ್ಮಾಳು : ಉಡುಪಿ ವಲಯ ಮಟ್ಟದ ಕುಸ್ತಿ ಪಂದ್ಯಾಟ (Yermalu; Udupi zone level wrestling tournament)
- ಕ್ರೀಡೆ - ಶಾಲಾ ಕಾಲೇಜು

ಎರ್ಮಾಳು : ಉಡುಪಿ ವಲಯ ಮಟ್ಟದ ಕುಸ್ತಿ ಪಂದ್ಯಾಟ (Yermalu; Udupi zone level wrestling tournament)

Share: ಎರ್ಮಾಳು : ಉಡುಪಿ ವಲಯ ಮಟ್ಟದ ಕುಸ್ತಿ ಪಂದ್ಯಾಟ (yermal) ಎರ್ಮಾಳು; ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎರ್ಮಾಳು ತೆಂಕ ಕಿನಾರಾ  ಆಂಗ್ಲ ಮಾಧ್ಯಮ ಶಾಲೆ ಇವರ ಆಶ್ರಯದಲ್ಲಿ ಉಡುಪಿ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟವು ಬುಧವಾರ ತೆಂಕ ಎರ್ಮಾಳಿನ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನೆರವೇರಿತು.  ಎರ್ಮಾಳು ತೆಂಕ ಮೊಗವೀರ ಸಭಾದ ಅಧ್ಯಕ್ಷರಾದ  ಲಿಂಗಪ್ಪ ಪುತ್ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.   ದೈಹಿಕ ಶಿಕ್ಷಣ ತಾಲೂಕು ಪರಿವೀಕ್ಷಣಾಧಿಕಾರಿ […]

ಎರ್ಮಾಳು : ಉಡುಪಿ ವಲಯ ಮಟ್ಟದ ಕುಸ್ತಿ ಪಂದ್ಯಾಟ

(yermal) ಎರ್ಮಾಳು; ಉಡುಪಿ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಎರ್ಮಾಳು ತೆಂಕ ಕಿನಾರಾ  ಆಂಗ್ಲ ಮಾಧ್ಯಮ ಶಾಲೆ ಇವರ ಆಶ್ರಯದಲ್ಲಿ ಉಡುಪಿ ತಾಲೂಕು ಮಟ್ಟದ ಕುಸ್ತಿ ಪಂದ್ಯಾಟವು ಬುಧವಾರ ತೆಂಕ ಎರ್ಮಾಳಿನ ಕಿನಾರಾ ಆಂಗ್ಲ ಮಾಧ್ಯಮ ಶಾಲೆಯ ಮೈದಾನದಲ್ಲಿ ನೆರವೇರಿತು.

 ಎರ್ಮಾಳು ತೆಂಕ ಮೊಗವೀರ ಸಭಾದ ಅಧ್ಯಕ್ಷರಾದ  ಲಿಂಗಪ್ಪ ಪುತ್ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

  ದೈಹಿಕ ಶಿಕ್ಷಣ ತಾಲೂಕು ಪರಿವೀಕ್ಷಣಾಧಿಕಾರಿ  ಚಂದ್ರಶೇಖರ್ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಎರ್ಮಾಳು ತೆಂಕ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಕಿಶೋರ್ ಕುಮಾರ್  ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸಂಘದ ಅಧ್ಯಕ್ಷರಾದ  ಸತೀಶ್ ಸಾಲಿಯನ್, ಎರ್ಮಾಳು ತೆಂಕ  ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಪ್ರಭಾಕರ್ ಪುತ್ರನ್, ಪಡುಬಿದ್ರಿ ಪೊಲೀಸ್ ಠಾಣೆಯ  ಅಧಿಕಾರಿಗಳಾದ ರಾಜೇಶ್ ಕೆ, ಶರಣ್, ಯೋಗೀಶ್, ಆಡಳಿತ ಮಂಡಳಿಯ ಸದಸ್ಯರು, ಉಡುಪಿ ವಲಯ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಶಾಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ  ಉಪಸ್ಥಿತರಿದ್ದರು.

 ಉಡುಪಿ ವಲಯದ 11 ಶಾಲೆಯ 101 ಬಾಲಕ ಬಾಲಕಿಯರು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದರು.

 ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಪ್ರೀತಿ ಸುವರ್ಣ ಸ್ವಾಗತಿಸಿದರು.

 ಶಿಕ್ಷಕಿ ಶ್ರೀಮತಿ ಭವ್ಯ ಹಾಗೂ ವಿದ್ಯಾರ್ಥಿ ಅಪ್ಪಾಜಿ ಬಿ ಎಂ ನಿರೂಪಿಸಿದರು.

 ಶ್ರೀಮತಿ ಕವಿತಾ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.