• Home  
  • ಎರ್ಮಾಳು ತೆಂಕದಲ್ಲಿ ಚಿರತೆ ಸಂಚಾರ:  ಗ್ರಾಮಸ್ಥರಲ್ಲಿ ಆತಂಕ.
- ಕರಾವಳಿ

ಎರ್ಮಾಳು ತೆಂಕದಲ್ಲಿ ಚಿರತೆ ಸಂಚಾರ:  ಗ್ರಾಮಸ್ಥರಲ್ಲಿ ಆತಂಕ.

Share: ಎರ್ಮಾಳು ತೆಂಕದಲ್ಲಿ ಚಿರತೆ ಸಂಚಾರ:  ಗ್ರಾಮಸ್ಥರಲ್ಲಿ ಆತಂಕ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳು ತೆಂಕ ಪುಂದಾಡು ಶಾಂತಿಬೆಟ್ಟು  ರೈಲ್ವೆ ಸೇತುವೆ  ಬಳಿ ಬುಧವಾರ ರಾತ್ರಿ ರಾತ್ರಿ ಚಿರತೆ ಕಂಡು ಬಂದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ಎರ್ಮಾಳು ಬಡಾದಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಚಿರತೆ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಕಂಡಿದ್ದಾರೆ. ಅನಂತರ ಅದು ಕಂಡುಬಂದಿಲ್ಲ. ಇದೀಗ ಬುಧವಾರ ರಾತ್ರಿ 10:00ಯ ಸುಮಾರಿಗೆ ಚಿರತೆ ಕಂಡು ಬಂದ ಬಗ್ಗೆ ಸ್ಥಳೀಯರ ಮನೆಯ ಸಿಸಿ […]

ಎರ್ಮಾಳು ತೆಂಕದಲ್ಲಿ ಚಿರತೆ ಸಂಚಾರ:  ಗ್ರಾಮಸ್ಥರಲ್ಲಿ ಆತಂಕ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಎರ್ಮಾಳು ತೆಂಕ ಪುಂದಾಡು ಶಾಂತಿಬೆಟ್ಟು  ರೈಲ್ವೆ ಸೇತುವೆ  ಬಳಿ ಬುಧವಾರ ರಾತ್ರಿ ರಾತ್ರಿ ಚಿರತೆ ಕಂಡು ಬಂದಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಎರ್ಮಾಳು ಬಡಾದಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಚಿರತೆ ನಡೆದುಕೊಂಡು ಹೋಗುವುದನ್ನು ಸ್ಥಳೀಯರು ಕಂಡಿದ್ದಾರೆ. ಅನಂತರ ಅದು ಕಂಡುಬಂದಿಲ್ಲ.

ಇದೀಗ ಬುಧವಾರ ರಾತ್ರಿ 10:00ಯ ಸುಮಾರಿಗೆ ಚಿರತೆ ಕಂಡು ಬಂದ ಬಗ್ಗೆ ಸ್ಥಳೀಯರ ಮನೆಯ ಸಿಸಿ ಕ್ಯಾಮರದಲ್ಲಿ ಚಿತ್ರ ಸೆರೆಯಾಗಿದೆ.

ಸ್ಥಳೀಯರು ಆತಂಕಗೊಂಡಿದ್ದು, ಅರಣ್ಯ ಇಲಾಖೆಗೆ ಸೂಕ್ತ ಕ್ರಮ  ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.