• Home  
  • ಎಸ್ ಎಂವಿಐಟಿಎಂ  ವಿದ್ಯಾರ್ಥಿಗಳಿಂದ ಇನ್ನಂಜೆ ಎಸ್ ವಿ ಎಚ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ (SMVITM Celebrated World Environment Day at SVH High School, Innanje)
- ಶಾಲಾ ಕಾಲೇಜು

ಎಸ್ ಎಂವಿಐಟಿಎಂ  ವಿದ್ಯಾರ್ಥಿಗಳಿಂದ ಇನ್ನಂಜೆ ಎಸ್ ವಿ ಎಚ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ (SMVITM Celebrated World Environment Day at SVH High School, Innanje)

Share:  ಎಸ್ ಎಂವಿಐಟಿಎಂ  ವಿದ್ಯಾರ್ಥಿಗಳಿಂದ ಇನ್ನಂಜೆ ಎಸ್ ವಿ ಎಚ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಬಂಟಕಲ್‌ ಕಾಲೇಜು, ಎನ್ ಎಸ್‌ ಎಸ್‌, ಎನ್‌ ಸಿಸಿ, ರೆಡ್‌ ಕ್ರಾಸ್‌ ಘಟಕ್‌ ಆಯೋಜನೆ (Bantakal)  ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್ ಸಿ ಸಿ ಘಟಕವು ಜಂಟಿಯಾಗಿ ವಿಶ್ವ ಪರಿಸರ ದಿನವನ್ನು  ಆಚರಿಸಲಾಯಿತು.    ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ […]

 ಎಸ್ ಎಂವಿಐಟಿಎಂ  ವಿದ್ಯಾರ್ಥಿಗಳಿಂದ ಇನ್ನಂಜೆ ಎಸ್ ವಿ ಎಚ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಂಟಕಲ್‌ ಕಾಲೇಜು, ಎನ್ ಎಸ್‌ ಎಸ್‌, ಎನ್‌ ಸಿಸಿ, ರೆಡ್‌ ಕ್ರಾಸ್‌ ಘಟಕ್‌ ಆಯೋಜನೆ

(Bantakal)  ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್ ಘಟಕ ಹಾಗೂ ಎನ್ ಸಿ ಸಿ ಘಟಕವು ಜಂಟಿಯಾಗಿ ವಿಶ್ವ ಪರಿಸರ ದಿನವನ್ನು  ಆಚರಿಸಲಾಯಿತು.

   ಕಾರ್ಯಕ್ರಮದ ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ನಡೆಸಲಾಯಿತು. ಅಲ್ಲದೆ ಪ್ರತಿ ತರಗತಿಗೆ ಒಂದು ಸಸಿಯ ಜವಾಬ್ದಾರಿಯನ್ನು ವಹಿಸಿ, ಅದರ ಪೋಷಣೆ ಮತ್ತು ಸಂರಕ್ಷಣೆ ಹೊಣೆಗಾರಿಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಯಿತು.

   ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಜೀವನ ಶೈಲಿಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಪರಿಸರ ಸ್ನೇಹಿ ಪೆನ್ಸಿಲ್‌ಗಳನ್ನು ವಿತರಿಸಲಾಯಿತು.

  ಈ ಸಂದರ್ಭ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಡೀನ್ ಡಾ. ಸುದರ್ಶನ್ ರಾವ್, ಪ್ರಾಧ್ಯಾಪಕರಾದ ಸಚಿನ್ ಪ್ರಭು, ಡಾ. ವಿಘ್ನೇಶ್ ಶೆಣೈ, ಎಸ್ ವಿ ಹೆಚ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಾಜೇಂದ್ರ ಪ್ರಭು ಹಾಗೂ ಎಸ್ ವಿ ಹೆಚ್ ಕನ್ನಡ ಮಾದ್ಯಮದ ಮುಖ್ಯೋಪಾಧ್ಯಾಯರಾದ ನಟರಾಜ್ ಉಪಾಧ್ಯಾಯ ಉಪಸ್ಥಿತರಿದ್ದರು.

  ಸುಮಾರು 150 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಪರಿಸರ ಸಂರಕ್ಷಣೆ ಮತ್ತು ಹಸಿರು ಭವಿಷ್ಯದತ್ತ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.