• Home  
  • ಐಸಿಸ್ ಉಗ್ರರೊಂದಿಗೆ ನಂಟು- ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಬಂಧನ
- ಅಪರಾಧ

ಐಸಿಸ್ ಉಗ್ರರೊಂದಿಗೆ ನಂಟು- ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯ ಬಂಧನ

Share: ನವದೆಹಲಿ,ಜು 21 : ನಿಷೇಧಿತ ಭಯೋತ್ಪಾದಕ ಐಎಸ್‍ಐಎಸ್‍ನೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಫೈಜಾನ್ ಅನ್ಸಾರಿ ಅಲಿಯಾಸ್ ಫೈಜ್ (19) ಎಂದು ಗುರುತಿಸಲಾಗಿದೆ.  ಈತನ ಮನೆಯನ್ನು ಶೋಧಿಸಿ ಪುರಾವೆಗಳು ದೊರೆತ ಬಳಿಕ ಪೋಲಿಸರು ಬಂಧಿಸಿದ್ದಾರೆ. ಫೈಜ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಜಾಖರ್ಂಡ್‍ನ ಲೋಹರ್ಡಗಾ ಜಿಲ್ಲೆಯ ಫೈಜ್ ಮನೆ ಮತ್ತು ಉತ್ತರ […]

ನವದೆಹಲಿ,ಜು 21 : ನಿಷೇಧಿತ ಭಯೋತ್ಪಾದಕ ಐಎಸ್‍ಐಎಸ್‍ನೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.

ಫೈಜಾನ್ ಅನ್ಸಾರಿ ಅಲಿಯಾಸ್ ಫೈಜ್ (19) ಎಂದು ಗುರುತಿಸಲಾಗಿದೆ.

 ಈತನ ಮನೆಯನ್ನು ಶೋಧಿಸಿ ಪುರಾವೆಗಳು ದೊರೆತ ಬಳಿಕ ಪೋಲಿಸರು ಬಂಧಿಸಿದ್ದಾರೆ. ಫೈಜ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಜಾಖರ್ಂಡ್‍ನ ಲೋಹರ್ಡಗಾ ಜಿಲ್ಲೆಯ ಫೈಜ್ ಮನೆ ಮತ್ತು ಉತ್ತರ ಪ್ರದೇಶದ ಅಲಿಗಢದಲ್ಲಿ ಬಾಡಿಗೆ ಕೊಠಡಿಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಅನುಮಾನಾಸ್ಪದ ವಸ್ತುಗಳು, ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳು, ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಸೋಶಿಯಲ್‌ ಮೀಡಿಯಾದಲ್ಲಿ ಗುಂಪು ರಚಿಸಿ ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಬೆಂಬಲಿಸಲು ಮಾಹಿತಿ ಹಂಚುತ್ತಿದ್ದ ಎಂದು ತಿಳಿದು ಬಂದಿದೆ. ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜನೆ ಹಾಕೊಂಡಿದ್ದ ಎಂದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಆತನ ಜೊತೆ ಹಲವು ಸಹಚರರು ಐಸಿಸ್ ಜೊತೆ ಕೈಜೊಡಿಸಿರುವುದು. ಅಲ್ಲದೇ ಫೈಜ್ ವಿದೇಶಿ ಮೂಲದ ಐಸಿಸ್ ಉಗ್ರರ ಸಂಪರ್ಕದಲ್ಲಿದ್ದು, ಉಗ್ರರ ಸೂಚನೆಯಂತೆ ಸಂಘಟನೆಗೆ ಯುವಕರನ್ನು ಸೆಳೆಯವ ಕಾರ್ಯದಲ್ಲಿ ಆರೋಪಿಯ ಪಾತ್ರವಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.