ಮಲ್ಲಾರು – ಮಜೂರು ಜುಮ್ಮಾ ಮಸೀದಿ ಆಯೋಜನೆಯಲ್ಲಿ ಕೂಟ್ ಝಿಯಾರತ್
ವಾಗ್ಮಿ ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಉಸ್ತಾದ್ ಮತ್ತು ಗಣ್ಯರ ಉಪಸ್ಥಿತಿ
(Mallaru) ಮಲ್ಲಾರು : ಮಲ್ಲಾರು-ಮಜೂರು ಬದ್ರಿಯಾ ಜುಮಅ ಮಸ್ಜಿದ್ ಇದರ ಆಶ್ರಯದಲ್ಲಿ ಕೂಟು ಝಿಯಾರತ್ ಪ್ರಯುಕ್ತ ಸಂಗಮ ಹಾಗೂ ಪ್ರಭಾಷಣ ನಡೆಯಿತು.
ವಾಗ್ಮಿ ಪೇರೋಡ್ ಅಬ್ದಲ್ ರಹ್ಮಾನ್ ಸಖಾಫಿ ಉಸ್ತಾದ್ ಮಾತನಾಡಿ, ಮನುಷ್ಯರಾದ ನಾವು ಜಾತಿ, ಮತ, ಧರ್ಮ, ಭಾಷೆ ಎಂಬ ಭೇದಭಾವಗಳನ್ನು ಮರೆತು ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸಹಕಾರದಿಂದ ಬದುಕಬೇಕು. ಪ್ರತಿಯೊಬ್ಬರನ್ನೂ ಅವರ ಧರ್ಮ ಅಥವಾ ಜಾತಿಯ ಆಧಾರದಲ್ಲಿ ನೋಡದೆ, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು. ಮನುಷ್ಯರಷ್ಟೇ ಅಲ್ಲದೆ, ಮೂಕ ಪ್ರಾಣಿಗಳ ಬಗ್ಗೆಯೂ ಕರುಣೆ ಮತ್ತು ದಯೆ ತೋರಬೇಕು ಎಂದು ಕುರ್‌ಆನ್ ಶ್ಲೋಕದೊಂದಿಗೆ ವಿವರಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸುಂದರ ವಾಸ್ತುಶಿಲ್ಪ ಹಾಗೂ ಆಕರ್ಷಕ ವಿನ್ಯಾಸದೊಂದಿಗೆ ಮಜೂರು ಮಸೀದಿಯನ್ನು ನಿರ್ಮಿಸಲಾಗಿದ್ದು, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಪೂರಕವಾಗಿ ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.
ಮಸೀದಿಯ ಸಮಗ್ರ ಅಭಿವೃದ್ಧಿಗೆ ಕಾರಣೀಕರ್ತರಾದ ಮಸೀದಿಯ ಸಮಿತಿಯ ಅಧ್ಯಕ್ಷ ಎಂ.ಫಾರೂಕ್ ಚಂದ್ರನಗರ ಅವರನ್ನು ಅನಿವಾಸಿ ಉದ್ಯಮಿ ಅನಿವಾಸಿ ಉದ್ಯಮಿಗಳಾದ ರಜಬ್ ಬ್ಯಾರಿ ಪರ್ಕಳ, ಅಶ್ರಫ್ ಪರ್ಕಳ, ಅವರು ಚಿನ್ನದ ಪದಕ ನೀಡಿ ಅಭಿನಂದಿಸಲಾಯಿತು. ಸದಸ್ಯರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಉಡುಪಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕೂಟ್ ಝಿಯಾರತ್ ನೇತೃತ್ವವನ್ನು ವಹಿಸಿದ್ದರು.
ದುವಾ ಆಶೀರ್ವಚನವನ್ನು ಕಾಪು ಖಾಝಿ ಪಿ.ಬಿ. ಅಹ್ಮದ್ ಮುಸ್ಲಿಯಾರ್ ಹಾಗೂ ಸಯ್ಯಿದ್ ಮುಹಮ್ಮದ್ ಶಹೀರ್ ತಂಙಳ್ ಅಲ್ ಹಿಕಾಮಿ ನೆರವೇರಿಸಿದರು.
ಮಸೀದಿಯ ಖತೀಬ್ ಎಂ.ಕೆ. ಅಬ್ದುಲ್ ರಶೀದ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು.
ಮಸೀದಿಯ ಉಪಾಧ್ಯಕ್ಷ ಹಸನಬ್ಬ ಮಜೂರು, ಪ್ರಧಾನ ಕಾರ್ಯದರ್ಶಿ ಅಶ್ರಫ್ ಮೂಸ, ಕೋಶಾಧಿಕಾರಿ ಪಿ.ಎಂ. ಇಬ್ರಾಹಿಂ ಪಾದೂರು, ಅಶ್ರಫ್ ಕರಂದಾಡಿ, ಮುಹಮ್ಮದ್ ತಾಜುದ್ದೀನ್ ಸಖಾಫಿ ಕೊಂಬಗುಡ್ಡೆ, ಹಾಫಿಳ್ ಮುಹಮ್ಮದ್ ಶರೀಫ್ ಕಾಮಿಲ್ ಸಖಾಫಿ, ಯಹ್‌ಕೂಬ್ ಸಅದಿ, ಯು.ಎ. ರಶೀದ್ ಕಟಪಾಡಿ, ಸುಲೈಮಾನ್ ಸಅದಿ ಅಫ್ಳಲಿ ಹೊಸ್ಮಾರ್, ಬಾವಾ ಶೌಕತ್ ಅಲಿ, ಅಬ್ದರಹೀಂ, ಮೊಹಿದ್ದೀನ್ ಸುಲ್ತಾನ್ ನಗರ, ಶಅಬಾನ್ ಕರಂದಾಡಿ, ಸಾದಿಕ್ ಕೆ.ಪಿ. ಮಲ್ಲಾರು, ಅಬೂಬಕರ್ ಸಿದ್ದೀಕ್ ಸಅದಿ, ಕೆ.ಎಂ. ಮುಹಮ್ಮದ್ ಕರಂದಾಡಿ, ಸಾದಿಕ್ ದಿನಾರ್ ಕೊಂಬಗುಡ್ಡೆ, ಮುಹಮ್ಮದ್ ಅಲಿ ಸಅದಿ, ಮುಹಮ್ಮದ್ ಸಾದಿಕ್ ಚಂದ್ರನಗರ, ಮುಹಮ್ಮದ್ ಹನೀಫ್ ಮದನಿ, ಮುಹಮ್ಮದ್ ಮುಸ್ತಫ ಸಖಾಫಿ, ಅಶ್ರಫ್ ಅಲ್ ಹಿಕಮಿ, ಮುಹಮ್ಮದ್ ಆರೀಫ್ ಮದನಿ, ಇಸ್ಮಾಯಿಲ್ ಸಖಾಫಿ, , ಸಫಿಯಾ ಉಮರಬ್ಬ ಟ್ರಸ್ಟ್ ನ ಮುಹಮ್ಮದ್ ಸಾಧಿಕ್ ಚಂದ್ರನಗರ, ಮುಹಿಯುದ್ದೀನ್ ಸಖಾಫಿ, ಅಬ್ದುಲ್ ಮಜೀದ್ ಹನೀಫಿ ಮಲ್ಲಂಗೋಳಿ, ಆಸಿಫ್ ಅಯಾನ್ ಮಜೂರು, ಸೂಫಿ ಹಾಜಿ ಮಲ್ಲಾರುಸ್ವಾದಿಖ್ ಮುಈನಿ ಎಲ್ಲೂರು, ಉದ್ಯಮಿ ಅಬೂಬಕರ್ ಪಾದೂರು ಉಪಸ್ಥಿತರಿದ್ದರು.
ಮಸೀದಿಯ ಕಾರ್ಯದರ್ಶಿ ಅಶ್ರಫ್ ಕರಂದಾಡಿ ಸ್ವಾಗತಿಸಿದರು. ರಜಬ್ ಇಸ್ಮಾಯಿಲ್ ನೌಫಲ್ ಕೆ.ಬಿ.ಎಸ್ ಕಾರ್ಯಕ್ರಮ ನಿರ್ವಹಿಸಿದರು.

