• Home  
  • ಓಮನ್ ಬಿಲ್ಲವಾಸ್  2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ (Oman Billawas Swearing-in Ceremony of New Committee for 2025-2026)
- ಸಂಘ, ಸಂಸ್ಥೆಗಳು

ಓಮನ್ ಬಿಲ್ಲವಾಸ್  2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ (Oman Billawas Swearing-in Ceremony of New Committee for 2025-2026)

Share: ಓಮನ್ ಬಿಲ್ಲವಾಸ್  2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ (Oman) ಓಮನ್‌ : ಓಮನ್ ಬಿಲ್ಲವಾಸ್ ಕೂಟದ 2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ ಇತ್ತೀಚೆಗೆ ಮಸ್ಕತ್ ನಗರದ ಅಝೈಬ ಪ್ರದೇಶದಲ್ಲಿರುವ “ಅಝೈಬ ಗಾರ್ಡನ್, ಮಲ್ಟಿ ಪರ್ಪಸ್‌ ಹಾಲ್‌” ನಲ್ಲಿ ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿಯವರ ಅನುಗ್ರಹದೊಂದಿಗೆ ನೆರವೇರಿತು.    2025-2026  ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಓಮನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರಾಗಿರುವ […]

ಓಮನ್ ಬಿಲ್ಲವಾಸ್  2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ

(Oman) ಓಮನ್‌ : ಓಮನ್ ಬಿಲ್ಲವಾಸ್ ಕೂಟದ 2025-2026 ನೇ ಸಾಲಿನ ನೂತನ ಸಮಿತಿಯ ಪ್ರಮಾಣ ವಚನ ಸಮಾರಂಭ ಇತ್ತೀಚೆಗೆ ಮಸ್ಕತ್ ನಗರದ ಅಝೈಬ ಪ್ರದೇಶದಲ್ಲಿರುವ “ಅಝೈಬ ಗಾರ್ಡನ್, ಮಲ್ಟಿ ಪರ್ಪಸ್‌ ಹಾಲ್‌” ನಲ್ಲಿ ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿಯವರ ಅನುಗ್ರಹದೊಂದಿಗೆ ನೆರವೇರಿತು.  

 2025-2026  ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಓಮನ್ ಬಿಲ್ಲವಾಸ್ ಕೂಟದ ಸ್ಥಾಪಕ ಸದಸ್ಯರಾಗಿರುವ  ಉಮೇಶ್ ಬಂಟ್ವಾಳ್ ರವರು ಅವಿರೋಧವಾಗಿ ಆಯ್ಕೆಯಾದರು.

 ಉಪಾಧ್ಯಕ್ಷರುಗಳಾಗಿ ಹರೀಶ್ ಸುವರ್ಣ ಹಾಗೂ ಶ್ರೀಮತಿ ಪ್ರಫುಲ್ಲ ಶಂಕರ ಪೂಜಾರಿಯವರು ಪುನರಾಯ್ಕೆಯಾದರು.

ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರುಗಳಾದ  ಎಸ್. ಕೆ ಪೂಜಾರಿ ಮತ್ತು ಡಾ. ಸಿ.ಕೆ. ಅಂಚನ್ ಹಾಗೂ ನಿರ್ಗಮನ ಅಧ್ಯಕ್ಷರಾದ ಸುಜಿತ್ ಅಂಚನ್  ಉಪಸ್ಥಿತರಿದ್ದು, ನೂತನ ಸದಸ್ಯರಿಗೆ ಹಾಗೂ ಸಮಸ್ತ ಓಮನ್ ಬಿಲ್ಲವರಿಗೆ ಭರವಸೆಯ ಮಾತುಗಳಿಂದ ಮಾರ್ಗದರ್ಶನವನ್ನು ನೀಡಿದರು.

  ಇನ್ನೋರ್ವ ಸಂಸ್ಥಾಪಕ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಅಶೋಕ್ ಸುವರ್ಣರವರು ಹೊಸ ಸಮಿತಿಗೆ    ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿ, ಇನ್ನಷ್ಟು ಹೆಚ್ಚಿನ ಸಮಾಜಮುಖಿ ಸೇವೆ ಮಾಡುವಂತೆ ಸಲಹೆ ನೀಡಿದರು.

 ಕಾರ್ಯಕ್ರಮವು ಉತ್ಸಾಹಿ ನೂತನ  ಸದಸ್ಯರಿಗೆ ಪ್ರೇರಣೆದಾಯಕವಾಗಿ ಜರಗಿತು.

ಕಾರ್ಯದರ್ಶಿಯಾಗಿ ಶಿವಾನಂದ ಕೋಟ್ಯಾನ್ ಸ್ವಾಗತಿಸಿ,   ಪ್ರಸ್ತುತ ಚುನಾವಣಾ ಸಮಿತಿ ಸದಸ್ಯರಾದ  ಸುರೇಂದ್ರ ಅಮಿನ್, ಹಾಗೂ ಸುರೇಂದ್ರ ಅಂಚನ್‌ರವರಿಗೆ ಅಭಿನಂದನೆ ಸಲ್ಲಿಸಿದರು.

  ಹೊಸ ಸಮಿತಿಯ ಎಲ್ಲಾ ಸದಸ್ಯರು ತಮ್ಮನ್ನು ಪರಿಚಯಿಸಿಕೊಂಡರು. ಮುಂದಿನ ಎರಡು ವರ್ಷಗಳ ಕಾಲ ತಮ್ಮ ದೃಷ್ಟಿಕೋನ ಮತ್ತು ಕಾರ್ಯಸೂಚಿಯನ್ನು ಹಂಚಿಕೊಂಡರು. ಸಮುದಾಯದ ಬೆಳವಣಿಗೆ ಮತ್ತು ಕಲ್ಯಾಣಕ್ಕಾಗಿ ತಮ್ಮ ಬದ್ಧತೆಯನ್ನು ಒತ್ತಿ ಹೇಳಿದರು.

 ಮಹಿಳಾ ಮುಖಿಯಾಗಿ ಶ್ರೀಮತಿ ದೀಪಿಕಾ ಪ್ರಸಾದ್ ಮಾತನಾಡಿ, ಮಹಿಳೆಯರು ಸಂಪೂರ್ಣವಾಗಿ ಕೂಟದ ಮೂಲಕ ತಮ್ಮ ಪ್ರತಿಭೆ ಹಾಗೂ ಮನೋಭಿವೃದ್ಧಿ ಕಾರ್ಯಕ್ಕೆ ಚಾಲನೆ  ನೀಡಬೇಕೆಂಬ ಹಂಬಲ ವ್ಯಕ್ತಪಡಿಸಿದರು. 

 ಕಡಲಾಚೆ ಸಮುದಾಯಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನೀಡುತ್ತಾ ಬಂದಿರುವ ಓಮಾನ್ ಬಿಲ್ಲವಾಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆಯನ್ನು ನೀಡುವಲ್ಲಿ ತನ್ನ ಸೇವೆಯನ್ನು ಒದಗಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

  ಅಧ್ಯಕ್ಷರಾದ ಉಮೇಶ್ ಬಂಟ್ವಾಳ್ ಸ್ಥಾಪಕ ಸದಸ್ಯರನ್ನು ಸ್ಮರಿಸಿದರು. ದಿವಂಗತ  ಪೀತಾಂಬರ ಅಲ್ಕೆ, ಅರುಣ್  ಸನಿಲ್‌ರವರು ಒಮಾನ್ ಬಿಲ್ಲವಾಸ್‌ನ ಆರಂಭದಿಂದಲೂ ಸೇವೆ ಸಲ್ಲಿಸಿದ್ದಾರೆ. ಮಾಜಿ ಸಮಿತಿಯ ಸದಸ್ಯರಿಗೆ ತಮ್ಮ ಅಮೂಲ್ಯವಾದ ಸಮುದಾಯ ಸೇವೆಗಾಗಿ ಧನ್ಯವಾದಗಳನ್ನು ಸಮರ್ಪಿಸಿದರು.

  ಕಳೆದ ಎರಡು ವರ್ಷಗಳಲ್ಲಿ ನಡೆದಿರುವ ನಿರ್ಗಮನ ಸಮಿತಿಯ ಅದ್ಭುತ ಕೊಡುಗೆಗಾಗಿ ಸಮಿತಿಯನ್ನು ಅವರು ವಿಶೇಷವಾಗಿ ಉಲ್ಲೇಖಿಸಿದರು. ಎಲ್ಲಾ ಸದಸ್ಯರ ನಿರಂತರ ಬೆಂಬಲವನ್ನು ಶ್ಲಾಘಿಸಿ, ಮುಂಬರುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

  ಕೋಶಾಧಿಕಾರಿ ಸುಕುಮಾರ್ ಅಂಚನ್ ತಂಡದ ಕೆಲಸದ ಮಹತ್ವವನ್ನು ಎತ್ತಿ ತೋರಿಸಿ, ಒಮಾನ್ ಬಿಲ್ಲವಾಸ್‌ನ ಸುಧಾರಣೆಗಾಗಿ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು.

  ಶ್ರೀನಿವಾಸ್ ಬರ್ಕ ನಿರುಪಿಸಿದರು. ಉಪಾಧ್ಯಕ್ಷ ಹರೀಶ್ ಸುವರ್ಣ ವಂದಿಸಿದರು.

 ಕಾರ್ಯಕ್ರಮವು ಬಿಲ್ಲವ ಸಮುದಾಯದ ಸಾಮಾಜಿಕ ಹಾಗೂ ಏಕತೆ ಮೌಲ್ಯಗಳನ್ನು ಮತ್ತೊಮ್ಮೆ ಉಜ್ವಲಗೊಳಿಸಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.