• Home  
  • ಓಸ್ಕರ್‌ರಂತಹ ಸಜ್ಜನ ರಾಜಕಾರಣಿ ದುರ್ಲಭ – ಪಾಂಗಾಳ ಹರೀಶ್ ಶೆಟ್ಟಿ (A gentleman politician like Oscar is rare – Pangala Harish Shetty)
- ರಾಜಕೀಯ

ಓಸ್ಕರ್‌ರಂತಹ ಸಜ್ಜನ ರಾಜಕಾರಣಿ ದುರ್ಲಭ – ಪಾಂಗಾಳ ಹರೀಶ್ ಶೆಟ್ಟಿ (A gentleman politician like Oscar is rare – Pangala Harish Shetty)

Share: ಓಸ್ಕರ್‌ರಂತಹ ಸಜ್ಜನ ರಾಜಕಾರಣಿ ದುರ್ಲಭ – ಪಾಂಗಾಳ ಹರೀಶ್ ಶೆಟ್ಟಿ ಉದ್ಯಾವರದಲ್ಲಿ ಓಸ್ಕರ್ ಫೆರ್ನಾಂಡಿಸ್ ರವರ  ನಾಲ್ಕನೇ ಪುಣ್ಯತಿಥಿ ಆಚರಣೆ (Udupi) ಉಡುಪಿ : ಇಂದಿನ ರಾಜಕೀಯ ಕ್ಷೇತ್ರದಲ್ಲಿ  ಓಸ್ಕರ್ ಫೆರ್ನಾಂಡಿಸರಂತಹ ರಾಜಕಾರಿಣಿ ಕಾಣಸಿಗಲು ಸಾಧ್ಯವಿಲ್ಲ. ಅವರು ರಾಜಕಾರಣದಲ್ಲಿ ತನ್ನ ಪಕ್ಷವನ್ನು ಪ್ರೀತಿಯನ್ನು ಮುಂದಿಟ್ಟು, ಭಾವನಾತ್ಮಕವಾಗಿ ಕಟ್ಟಿದ್ದಾರೆ. ಹಾಗಾಗಿ ಪಕ್ಷ ಸಂಘಟನೆ ಬಲಯುತವಾಗಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಪಾಂಗಾಳ ಹರೀಶ್ ಶೆಟ್ಟಿಯವರು ಹೇಳಿದರು. ಅವರು 2017 ಸಾಲಿನ ಉಡುಪಿ […]

(Udupi) ಉಡುಪಿ : ಇಂದಿನ ರಾಜಕೀಯ ಕ್ಷೇತ್ರದಲ್ಲಿ  ಓಸ್ಕರ್ ಫೆರ್ನಾಂಡಿಸರಂತಹ ರಾಜಕಾರಿಣಿ ಕಾಣಸಿಗಲು ಸಾಧ್ಯವಿಲ್ಲ. ಅವರು ರಾಜಕಾರಣದಲ್ಲಿ ತನ್ನ ಪಕ್ಷವನ್ನು ಪ್ರೀತಿಯನ್ನು ಮುಂದಿಟ್ಟು, ಭಾವನಾತ್ಮಕವಾಗಿ ಕಟ್ಟಿದ್ದಾರೆ. ಹಾಗಾಗಿ ಪಕ್ಷ ಸಂಘಟನೆ ಬಲಯುತವಾಗಿತ್ತು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಪಾಂಗಾಳ ಹರೀಶ್ ಶೆಟ್ಟಿಯವರು ಹೇಳಿದರು.

ಅವರು 2017 ಸಾಲಿನ ಉಡುಪಿ ಜಿಲ್ಲಾ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿದ, ರಾಷ್ಟ್ರನಾಯಕ, ಸಂಸ್ಥೆಯ ಗೌರವಾಧ್ಯಕ್ಷರಾಗಿದ್ದ ದಿ. ಓಸ್ಕರ್ ಫೆರ್ನಾಂಡಿಸ್ ರವರ  ನಾಲ್ಕನೇ ಪುಣ್ಯತಿಥಿ ಆಚರಣೆಯ ಸಂದರ್ಭ ಅವರ ಭಾವ ಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಸಲ್ಲಿಸಿ ನುಡಿ ನಮನ ಸಲ್ಲಿಸಿದರು.

ಓಸ್ಕರ್‌ ಅಂತಹ ಪ್ರಾಮಾಣಿಕ ರಾಜಕಾರಣಿಗಳು ಇಂದು  ಯಾರೂ ಇಲ್ಲ. ಹಾಗಾಗಿ ಓಸ್ಕರಣ್ಣನಂತಹ ಪ್ರಾಮಾಣಿಕ, ಸಜ್ಜನ ರಾಜಕಾರಣಿ ಇಂದು ದುರ್ಲಭ. ಇದನ್ನು ಮನಗಂಡಾಗ ನಾವು ಎಂತಹ ವ್ಯಕ್ತಿತ್ವವನ್ನು ಕಳ ಕೊಂಡಿದ್ದೇವೆ ಎಂದು ನಮಗೆ ಅರಿವಾಗುತ್ತದೆ ಎಂದೂ ಹರೀಶ್‌ ಶೆಟ್ಟ ಹೇಳಿದರು.

  ಉಡುಪಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಸೆಲ್ ಉಪಾಧ್ಯಕ್ಷ  ಶೇಖರ ಕೆ. ಕೋಟ್ಯಾನ್ ಅವರು ಓಸ್ಕರ್ ರವರ ಸರಳ ನಡವಳಿಕೆಯನ್ನು ಸ್ಮರಿಸಿದರು.

  ಓಸ್ಕರ್ ಫೆರ್ನಾಂಡಿಸ್ ರವರ ಆಪ್ತ ಕಾರ್ಯದರ್ಶಿಯಾಗಿದ್ದ ಮತ್ತು ಸಂಸ್ಥೆಯ ಗೌರವಾಧ್ಯಕ್ಷ  ಉದ್ಯಾವರ ನಾಗೇಶ್ ಕುಮಾರ್ ರವರು ತಮ್ಮ ಮತ್ತು ಓಸ್ಕರಣ್ಣನ ಸಂಬಂಧವನ್ನು ಮೆಲುಕು ಹಾಕಿದರು.

  ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯರಾದ  ಗಿರೀಶ್ ಕುಮಾರ್, ಪಂಚಾಯತ್ ಸದಸ್ಯರಾದ ರಿಯಾಝ್ ಪಳ್ಳಿ ಮಾತನಾಡಿದರು.

  ಈ ಸಂದರ್ಭದಲ್ಲಿ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ನಿತಿನ್ ಜೆ. ಸಾಲಿಯಾನ್, ಮಾಜಿ ಅಧ್ಯಕ್ಷ ತಿಲಕರಾಜ್ ಸಾಲಿಯಾನ್ ಕೋಶಾಧಿಕಾರಿ ಸತೀಶ್ ಡಿ. ಸಾಲಿಯಾನ್, ಕಾರ್ಯದರ್ಶಿ  ಶ್ರೀಮತಿ ಆಶಾವಾಸು, ಸದಸ್ಯರಾದ ಶ್ರೀಮತಿ ಸರೋಜ ಅನುಪ್, ಸೋಮಶೇಖರ ಸುರತ್ಕಲ್, ಯು. ಅಜಿತ್ ಮೆಂಡನ್, ನಿರ್ದೇಶಕರಾದ ಯು. ಪದ್ಮನಾಭ ಕಾಮತ್, ಉಪಸ್ಥಿತರಿದ್ದರು.

 ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಸುಹೇಲ್ ರಹಮತ್ತುಲ್ಲ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.