• Home  
  • ಮೂಳೂರು ತೊಟ್ಟಂ ಕಡಲ್ಕೊರೆತಕ್ಕೆ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಹಾರದ ಭರವಸೆ (Revenue Minister Krishna Byre Gowda visits the area for Mooloor Thottam sea drilling, promises relief)
- ಕಾಪು ತಾಲೂಕು ಆಡಳಿತ - ಜಿಲ್ಲಾಡಳಿತ - ರಾಜಕೀಯ

ಮೂಳೂರು ತೊಟ್ಟಂ ಕಡಲ್ಕೊರೆತಕ್ಕೆ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಹಾರದ ಭರವಸೆ (Revenue Minister Krishna Byre Gowda visits the area for Mooloor Thottam sea drilling, promises relief)

Share: ಮೂಳೂರು ತೊಟ್ಟಂ ಕಡಲ್ಕೊರೆತಕ್ಕೆ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಭೇಟಿ, ಪರಹಾರದ ಭರವಸೆ   (Kaup) ಕಾಪು: ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಒಂದು ದಿನದ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಆ ಪ್ರಯುಕ್ತ ಬುಧವಾರ ಕಾಪು ತಾಲೂಕು ವ್ಯಾಪ್ತಿಯ ಮೂಳೂರು ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದರು.  ಸಚಿವರು ಕಡಲ್ಕೊರೆತದಿಂದ ಉಂಟಾದ ಹಾನಿ ವೀಕ್ಷಣೆ ಮಾಡಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ  ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು. […]

(Kaup) ಕಾಪು: ಕಂದಾಯ ಸಚಿವ ಕೃಷ್ಣ ಬೈರೇಗೌಡರವರು ಒಂದು ದಿನದ ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಆ ಪ್ರಯುಕ್ತ ಬುಧವಾರ ಕಾಪು ತಾಲೂಕು ವ್ಯಾಪ್ತಿಯ ಮೂಳೂರು ತೊಟ್ಟಂ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿದರು.

 ಸಚಿವರು ಕಡಲ್ಕೊರೆತದಿಂದ ಉಂಟಾದ ಹಾನಿ ವೀಕ್ಷಣೆ ಮಾಡಿ ಸ್ಥಳೀಯರಿಂದ ಮಾಹಿತಿಯನ್ನು ಪಡೆದು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ  ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಿದರು.

 ಕಡಲ್ಕೊರೆತ ಸ್ಥಳವನ್ನು ವೀಕ್ಷಿಸಿ ಸಮುದ್ರದ ಅಲೆಗಳಿಂದ ಉಂಟಾಗಿರುವ ಅನಾಹುತದ ಬಗ್ಗೆ ಕೈಗೊಂಡಿರುವ ಯೋಜನೆಗಳನ್ನು ಮಾಧ್ಯಮದವರೊಂದಿಗೆ ಹೇಳಿದ ಸಚಿವರು, ಕಡಲ್ಕೊರೆತ ನಿರಂತರ ಸಮಸ್ಯೆಯಾಗಿರುವುದರಿಂದ ಪರಿಹಾರ ಕ್ರಮಕೈಗೊಳ್ಳುವಲ್ಲಿ ಮುಖ್ಯಮಂತ್ರಿ ಅವರ ನಿರ್ದೇಶನದ ಮೇರೆಗೆ ಮೂರು ಜಿಲ್ಲೆಗಳಿಗೆ ಸುಮಾರು 300 ಕೋಟಿ ಅನುದಾನ ನೀಡಲಾಗುವುದು.

ಹೆಚ್ಚು ಸಮಸ್ಯೆ ಉಂಟಾದ ಸ್ಥಳಗಳಿಗೆ ಪರಿಹಾರ ನೀಡುವ ಸಲುವಾಗಿ 300 ಕೋಟಿ ಯೋಜನೆಗಳನ್ನು ರೂಪಿಸಿ ಅದನ್ನು ವಿನಿಯೋಗಿಸಲಾಗುವುದು. ಉಡುಪಿ ಜಿಲ್ಲೆಗೆ 100 ಕೋಟಿ ವೆಚ್ಚದಲ್ಲಿ ಯೋಜನೆಗಳನ್ನು ಹೊಸದಾಗಿ ನಿರ್ಮಿಸಲು ಹಾಗೂ ದುರಸ್ತಿ ಕಾಮಗಾರಿ ಆಗಿದ್ದ ಸ್ಥಳಗಳಿಗೆ ಪುನರ್ ನಿರ್ಮಾಣಕ್ಕೆ 100 ಕೋಟಿಯನ್ನು ಮೀಸಲಿಡಲಾಗುವುದು. 

 ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ ಕೆ, ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪ್ರಸಾದ್ ರಾಜ್ ಕಾಂಚನ್,  ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಕುಮಾರ್, ಕಾಪು ದಿವಾಕರ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಜು ಪೂಜಾರಿ, ಕಾಪು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ನಿಯಾಝ್ ಹಾಗೂ  ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.