• Home  
  • ಕಂಬಳದ ಕೋಣಗಳ ಹೆಸರುಗಳೇ ವಿಶೇಷ (The names of the rooms in Kambala are special.)
- ಕ್ರೀಡೆ

ಕಂಬಳದ ಕೋಣಗಳ ಹೆಸರುಗಳೇ ವಿಶೇಷ (The names of the rooms in Kambala are special.)

Share: ಕಂಬಳದ ಕೋಣಗಳ ಹೆಸರುಗಳೇ ವಿಶೇಷ ಮೋಡ, ಕಾಲೆ, ಬೊಲ್ಲೆ, ಕಾಜೆ, ಕಾಟಿ, ಪಾಂಚ, ರಾಬರ್ಟ್, ಮುದ್ದು, ನಾಗು……… (Yermal) ಎರ್ಮಾಳು: ಕಂಬಳದ ಕೋಣಗಳ ಹೆಸರುಗಳೇ ಬಹಳ ವಿಶೇಷ ಆಕರ್ಷಣೆ ಹೊಂದಿದೆ. ಇಲ್ಲಿದೆ ಹೆಸರಿನ ವಿಷೇಶ.   ಮೋಡ, ಕಾಲೆ, ಬೊಲ್ಲೆ, ಕಾಜೆ, ಕಾಟಿ, ಪಾಂಚ ಮುಂತಾದ ಹೆಸರುಗಳು ಕೋಣಗಳ ಸ್ವಭಾವ, ದೇಖಿಯಿಂದ ಬಂದರೆ, ಕೆಲವು ಕೋಣಗಳಿಗೆ ಅವುಗಳಿದ್ದ ಊರಿನ ಹೆಸರನ್ನೇ ಇಡುತ್ತಾರೆ. ಫರಂಗಿಪೇಟೆ ಎಂಬ ಹೆಸರಿನ ಒಂದು ಕೋಣ ಇತ್ತು, ಬೊಟ್ಟಿಮಾರ್ (ಕಡಂದಲೇ ಬೊಟ್ಟಿಮಾರ್ ), ಧೋನಿ […]

(Yermal) ಎರ್ಮಾಳು: ಕಂಬಳದ ಕೋಣಗಳ ಹೆಸರುಗಳೇ ಬಹಳ ವಿಶೇಷ ಆಕರ್ಷಣೆ ಹೊಂದಿದೆ. ಇಲ್ಲಿದೆ ಹೆಸರಿನ ವಿಷೇಶ.

  ಮೋಡ, ಕಾಲೆ, ಬೊಲ್ಲೆ, ಕಾಜೆ, ಕಾಟಿ, ಪಾಂಚ ಮುಂತಾದ ಹೆಸರುಗಳು ಕೋಣಗಳ ಸ್ವಭಾವ, ದೇಖಿಯಿಂದ ಬಂದರೆ, ಕೆಲವು ಕೋಣಗಳಿಗೆ ಅವುಗಳಿದ್ದ ಊರಿನ ಹೆಸರನ್ನೇ ಇಡುತ್ತಾರೆ. ಫರಂಗಿಪೇಟೆ ಎಂಬ ಹೆಸರಿನ ಒಂದು ಕೋಣ ಇತ್ತು, ಬೊಟ್ಟಿಮಾರ್ (ಕಡಂದಲೇ ಬೊಟ್ಟಿಮಾರ್ ), ಧೋನಿ (ಧೋನಿಮನೆ) ಇನ್ನು ಕೆಲವು ಕೋಣಗಳಿಗೆ ಪ್ರೀತಿಯಿಂದ ಹೆಸರು ಇಡುತ್ತಾರೆ.

   ಉದಾಹರಣೆಗೆ : ಚೆನ್ನ, ಚಿನ್ನು, ರಾಜೆ, ತಾಟೆ, ಅಪ್ಪು, ಪಾಂತೆ, ಬಾಬು, ಕರ್ಣ, ಜಿಂಕೆ, ರಾಬರ್ಟ್, ಮುದ್ದು, ನಾಗು, ರಾಮೇ, ಪಾಂಡು, ದೂಜ, ಪುಟ್ಟ, ಕುಟ್ಟಿ, ಮ್ಯಾಕ್ಸಿ, ಮುತ್ತು, ಸೋಮು, ಭದ್ರಿ, ಚಂದ್ರೆ, ಮಂಜು, ಹೊನ್ನು, ಮಣಿ, ಜಯೇ, ಗುಂಡು, ಬಲರಾಮ, ಕಲ್ಕಿ, ದಾಸ, ಬಾಲು, ಭಗೀರ, ಜನ್ನ, ಕೋಟಿ, ಬೆಂಕಿ, ಬುಗುರಿ, ಲಕ್ಕಿ, ನಾಗರಾಜ, ಪವನ್, ಗೂಗ್ಲಿ, ಸಂತು, ಗೋಪಾಲೆ, ರುದ್ರ, ಮಿನ್ನು, ದೇವದಾಸೆ, ಮುನ್ನೆ, ಶಂಕರ, ಶಂಭು, ಮುಕೇಶ, ರಾಮ, ಲಕ್ಷ್ಮಣ .. ಒಂದ ಎರಡಾ. ಇನ್ನು ಹಲವಾರು ಹೆಸರು ಇದೆ.   

   ಕೆಲವು ಕೋಣಗಳಿಗೆ ವಿಶೇಷ ಹೆಸರನ್ನು ಇಟ್ಟಿದ್ದಾರೆ. ಶಿವಾಜಿ ಮಹಾರಾಜರ ಕುದುರೆ ಭಾರ್ಗಿ ಹೆಸರಲ್ಲಿ ಒಂದು ಕೋಣ ಭಾರ್ಗಿ ಅಂತಾ ಇದೆ. ಬೊಲೆರೋದಲ್ಲಿ ತೆಗದುಕೊಂಡು ಬಂದಿದ್ದಕ್ಕೆ ಬೊಲೆರೋ ಅಂತಾ ಒಂದು ಕೋಣಕ್ಕೆ ಹೆಸರಿಟ್ಟಿದ್ದರು. ಕೋ

  ಕೋಣಗಳ ಯಜಮಾನ ಮಿಜಾರ್ ಶಕ್ತಿ ಪ್ರಸಾದ್ ಶೆಟ್ಟಿ ತಮ್ಮ ಮಕ್ಕಳ ನಿಕ್ ನೇಮ್ ಅಪ್ಪು, ಪಕ್ಕು ಹೆಸರನ್ನೇ ತಮ್ಮ ಕೋಣಗಳಿಗೆ ಇಟ್ಟಿದ್ದಾರೆ. ಶಬರಿಶ ಅಂತಾ ಒಬ್ಬ ಹುಡುಗನ ಬಳಿ ಇದ್ದ ಕೋಣಕ್ಕೆ ನಕ್ರೆ ಮಹೋದರ ನಿವಾಸದವ್ರು ಅದೇ ಹೆಸರನ್ನು ಕೋಣಕ್ಕೆ ಇಟ್ಟಿದ್ದಾರೆ.

  ಅದೇ ಕೊಣಗಳ ಹೆಸರಿನ ಪಟ್ಟಿಗೆ ಹೊಸ ಸೇರ್ಪಡೆ ಲಕ್ಕಿ ಮತ್ತು ಡಿಪ್ಪು ಈ ಕೋಣದ ಮರಿಗಳ ಹೆಸರು ಲಕ್ಕಿ ಮತ್ತು ಡಿಪ್ಪು. ಎರ್ಮಾಳಿನ ತೆಂಕ – ಬಡಾ ಕಂಬಳದಲ್ಲಿ ಲಕ್ಕಿ ಡಿಪ್ ನಲ್ಲಿ ಸಿಕ್ಕಿದ ಕೋಣಗಳಿಗೆ ಲಕ್ಕಿ, ಡಿಪ್ಪು ಅಂತಾನೇ ಹೆಸರು ಇಟ್ಟಿದ್ದಾರೆ.

ಈ ಬಾರಿಯ ಎರ್ಮಾಳು ತೆಂಕ – ಬಡಾ ಜೋಡುಕರೆ ಕಂಬಳದಲ್ಲಿ ನೇಗಿಲು ಕಿರಿಯ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಎರ್ಮಾಳು ಪುಚ್ಚೊಟ್ಟು ಬೀಡು ಬಾಲಚಂದ್ರ ಶೆಟ್ಟಿಯವರ ಮಾಲೀಕತ್ವದ ಕೋಣಗಳ ಹೆಸರು “ಜಿಂಕೆ” ಮತ್ತು “ಜನ್ನೆ”.

ಹೇಗಿದೆ ನಮ್ಮ ಕರಾವಳಿಯ ಹೆಮ್ಮೆ ಕಂಬಳದಲ್ಲಿ ಓಡುವ ಕೋಣಗಳ ಹೆಸರು.

Leave a comment

Your email address will not be published. Required fields are marked *

eMedia Kannada  @2025. All Rights Reserved.