ಕಟಪಾಡಿ : ಕಟಪಾಡಿ ಓವರ್ ಪಾಸ್ ನಿರ್ಮಾಣದ ಬಗ್ಗೆ ಜಿಲ್ಲಾಧಿಕಾರಿಯವರೊಂದಿಗೆ ಸೊರಕೆ ಸಭೆ
8 ಗ್ರಾಮ ಪಂಚಾಯತ್ ವ್ಯಾಪ್ತಿಯ ಜನಪ್ರತಿನಿಧಿಗಳೊಂದಿಗೆ ಜಿಲ್ಲಾಧಿಕಾರಿ ಸೌಹಾರ್ದ ಮಾತುಕತೆ
(Udupi) ಉಡುಪಿ: ಮಾಜಿ ಸಚಿವರು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಯವರು ಕರೆದ ಸಭೆಯಲ್ಲಿ ಆಸುಪಾಸಿನ ಕೋಟೆ, ಕಟಪಾಡಿ, ಕುರ್ಕಾಲು, ಶಿರ್ವ ಇನ್ನಂಜೆ, ಮಣಿಪುರ ಅಲೆವೂರು, ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಮತ್ತು ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಚರ್ಚೆ ನಡೆಸಿದರು.
ಕಟಪಾಡಿ ಒವರ್ ಬ್ರಿಡ್ಜ್ ಕಾಮಗಾರಿಗೆ ಸಂಬಂಧಪಟ್ಟಂತೆ 8 ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಬೇಡಿಕೆಯಂತೆ ಓವರ್ ಬ್ರಿಡ್ಜ್ ಕಾಮಗಾರಿ ಆರಂಭವಾಗುವ ಸಮಯದಲ್ಲಿ ಜನಸಾಮಾನ್ಯರಿಗೆ, ಶಾಲಾ ವಿದ್ಯಾರ್ಥಿಗಳಿಗೆ, ಪಾದಚಾರಿಗಳಿಗೆ, ಅಟೋ, ಟ್ಯಾಕ್ಸಿ, ಮುಂತಾದ ವಾಹನ ಸಂಚಾರಗಳಿಗೆ ಯಾವುದೇ ತೊಂದರೆ ಆಗದಂತೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಮನವಿ ನೀಡಲಾಗಿದೆ.
ಸೋಮವಾರ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾಜಿ ಸಚಿವ ಸೊರಕೆ ಮತ್ತು ಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ಜತ್ತನ್ನ ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಬಿ ಶೆಟ್ಟಿ ಕುರ್ಕಾಲು ಗ್ರಾಮಪಂಚಾಯತ್ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಶಿರ್ವ ಗ್ರಾಮಪಂಚಾಯತ್ ಅಧ್ಯಕ್ಷೆ ಸವಿತಾ, ಮಣಿಪುರ ಗ್ರಾಮಪಂಚಾಯತ್ ಅಧ್ಯಕ್ಷೆ ಕುಮಾರಿ ಚೈತ್ರಾ, ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಯತೀಶ್ ಕುಮಾರ್, ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ನಿತಿನ್ ಜೆ ಸಾಲಿಯಾನ್, ಪ್ರಮುಖರಾದ ಕಟಪಾಡಿ ಎಸ್ ವಿ ಎಸ್ ವಿದ್ಯಾಸಂಸ್ಥೆ ಮುಖ್ಯಸ್ಥ ಸತ್ಯೇಂದ್ರ ಪೈ, ವೆಂಕಟರಮಣ ದೇವಸ್ಥಾನದ ಮುಖ್ಯಸ್ಥರಾದ ಎಂ ದಿನೇಶ್ ಕಿಣಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ವಕೀಲರಾದ ವಿಲ್ಸನ್ ರಾಡ್ರಿಗಸ್ ಶಿರ್ವ ಮೆಲ್ವಿನ್ ಡಿಸೋಜ ಶಿರ್ವ, ಪ್ರಸಾದ್ ಶೆಟ್ಟಿ ಮಣಿಪುರ, ಕಟಪಾಡಿ ರಿಕ್ಷಾ ಯೂನಿಯನ್ ಅಧ್ಯಕ್ಷರಾದ ಪ್ರೇಮ್ ಕುಮಾರ್ ಕಟಪಾಡಿ ಮುಂತಾದವರು ಈ ಹಿಂದೆ ಜಿಲ್ಲಾಧಿಕಾರಿಯವರು ಹೊರಡಿಸಿದ ಸಂಚಾರ ಮಾರ್ಗ ಅಧಿಸೂಚನೆಯನ್ನು ಮಾರ್ಪಡಿಸಿ ಸಾರ್ವಜನಿಕರಿಗೆ ತೊಂದರೆಯಾಗದ ಸುಗಮ ಸಂಚಾರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿರುತ್ತಾರೆ.
ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು, ಪೋಲೀಸ್ ಅಧಿಕಾರಿಗಳು, ತಹಶಿಲ್ದಾರರು, ತಾಲೂಕು ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಲೋಕೋಪಯೋಗಿ ಇಂಜಿನಿಯರ್, ಅಪರ ಜಿಲ್ಲಾಧಿಕಾರಿಯವರು, ವೈ ಸುಕುಮಾರ್, ಸುನೀಲ್ ಬಂಗೇರ ಮಟ್ಟು, ನಯೀಂ ಕಟಪಾಡಿ, ಸರಸು ಬಂಗೇರ, ಗೌರೀಶ್ ಕೋಟ್ಯಾನ್, ಸೌರಭ್ ಬಲ್ಲಾಳ್, ಅರ್ಜುನ್ ನಾಯರಿ, ಕಿರಣ್ ಕುಮಾರ್ ಉದ್ಯಾವರ, ಶಬರೀಶ್ ಸುವರ್ಣ, ಪುಷ್ಪ ಅಂಚನ್, ಜಲ್ಲೇಶ್ ಶೆಟ್ಟಿ, ಸುರೇಶ್ ಪೂಜಾರಿ ಕುರ್ಕಾಲು, ಮಹೇಶ್ ಶೆಟ್ಟಿ ಕುರ್ಕಾಲು, ಶ್ಯಾಮಲ ಸುಧಾಕರ್, ಕಿರಣ್ ಲೂವಿಸ್ ಮುಂತಾದವರು ಉಪಸ್ಥಿತರಿದ್ದರು.

