• Home  
  • ಕಟೀಲು ಕ್ಷೇತ್ರದಲ್ಲಿ ೩೧ ವರ್ಷಗಳ ಬಳಿಕ ಜಲಕ್ಷಾಮ,ಶಾಲಾ ಮಕ್ಕಳ ಬಿಸಿಯೂಟ ನಿಲುಗಡೆ:ಗೋವುಗಳಿಗೆ ನೀರಿನ ಬರ
- ಕರಾವಳಿ

ಕಟೀಲು ಕ್ಷೇತ್ರದಲ್ಲಿ ೩೧ ವರ್ಷಗಳ ಬಳಿಕ ಜಲಕ್ಷಾಮ,ಶಾಲಾ ಮಕ್ಕಳ ಬಿಸಿಯೂಟ ನಿಲುಗಡೆ:ಗೋವುಗಳಿಗೆ ನೀರಿನ ಬರ

Share:  ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದವಾದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ರಾಜ್ಯದಲ್ಲಿ ಕೋಟಿಗೂ ಮಿಕ್ಕಿ ಆದಾಯವನ್ನು ಒಳಗೊಂಡಿರುವ ಎ ಗ್ರೇಡ್ ದೇವಲವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಈ ಬಾರಿ  ಜಲ ಕ್ಷಾಮ ಕಂಡು ಬಂದಿದೆ.   ಇದರಿಂದ ಪ್ರತಿದಿನ ಸುಮಾರು ೧೫೦೦೦ ಕ್ಕೂ ಮಿಕ್ಕಿ ಆಗಮಿಸುವ ಭಕ್ತರಿಗೆ ಹಾಗೂ ದೇವಳದಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ತೆಗೆ ಸಮಸ್ಯೆ ಉಂಟಾಗಿದೆ.   ಶಿಕ್ಷಣ ಸಂಸ್ಥೆಗೆ ಮಧ್ಯಾಹ್ನದ ಬಳಿಕ ರಜೆಯನ್ನು ನಿಡಲಾಗುತ್ತಿದೆ.  ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ೧೯೯೨ರಲ್ಲಿ ಈ […]

 ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಪ್ರಸಿದ್ದವಾದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೊಳಪಟ್ಟ ರಾಜ್ಯದಲ್ಲಿ ಕೋಟಿಗೂ ಮಿಕ್ಕಿ ಆದಾಯವನ್ನು ಒಳಗೊಂಡಿರುವ ಎ ಗ್ರೇಡ್ ದೇವಲವಾಗಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಈ ಬಾರಿ  ಜಲ ಕ್ಷಾಮ ಕಂಡು ಬಂದಿದೆ.

  ಇದರಿಂದ ಪ್ರತಿದಿನ ಸುಮಾರು ೧೫೦೦೦ ಕ್ಕೂ ಮಿಕ್ಕಿ ಆಗಮಿಸುವ ಭಕ್ತರಿಗೆ ಹಾಗೂ ದೇವಳದಿಂದ ನಡೆಸಲ್ಪಡುತ್ತಿರುವ ಶಿಕ್ಷಣ ಸಂಸ್ತೆಗೆ ಸಮಸ್ಯೆ ಉಂಟಾಗಿದೆ.

  ಶಿಕ್ಷಣ ಸಂಸ್ಥೆಗೆ ಮಧ್ಯಾಹ್ನದ ಬಳಿಕ ರಜೆಯನ್ನು ನಿಡಲಾಗುತ್ತಿದೆ.

 ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ೧೯೯೨ರಲ್ಲಿ ಈ ರೀತಿ ಜಲ ಕ್ಷಾಮ ಕಂಡುಬಂದಿದ್ದು  ಸುಮಾರು ೩೧ ವರ್ಷಗಳ ಬಳಿಕ ಊಈ ಬಾರಿ ದೇವಳದಲ್ಲಿ ಜಲ ಕ್ಷಾಮ ಕಂಡು ಬಂದಿದೆ.

ನಂದಿನಿ ನದಿಯು ಸುತ್ತ ಬೋರ್ಗರೆಯುತ್ತ ಮಧ್ಯದಲ್ಲಿ ನೆಲೆಸಿರುವ ಜಲ ವಾಸಿನಿ ಕಟೀಲು ದುರ್ಗೆಯ ದೇವಳದ ಸುತ್ತಲಿನ ನಂದಿನಿ ನದಿಯಲ್ಲಿ ನೀರು ಬತ್ತಿ  ಕಲ್ಲು,ಹೊಯಿಗೆ ಗಳು ಕಾಣುತ್ತಿದೆ.

 ಕಟೀಲು ದೇವಳಕ್ಕೆ ಸುಮಾರು ೭ ಲಕ್ಷ ಲೀಟರ್‌ ನೀರಿನಷ್ತು ಅಗತ್ಯವಿದ್ದು ದೇವಳದಲ್ಲಿ  ಮೂರು ಬಾವಿಗಳು ಹಾಗೂ ೩  ಬೋರ್ ವೆಲ್ ಗಳಿದೆ.

  ಇದರಿಂದ ನಿರ್ವಹಣೆ ನಡೆಯುತ್ತಿದ್ದು ಇದೀಗ ಬೋರ್ ವೆಲ್ ಹಾಗೂ ಬಾವಿಗಳಲ್ಲಿ ನೀರಿಲ್ಲದ ಕಾರಣ ಸಮಸ್ಯೆಯಾಗಿದೆ.

ಪ್ರತಿ ದಿನ ೧೫ರಿಂದ ೨೦ ನಿಮಿಷ ನೀರು ಬರುತ್ತಿದ್ದು  ಆಡಳಿತ ಮಂಡಳಿಯು ಉದ್ಯಮಿಗಳಿಂದ ಟ್ಯಾಂಕರ್ ಮೂಲಕ ನೀರು ಪೂರ್‍ಯೆಕೆಗೆ ವಿನಂತಿಸಿದ್ದು ಲಭ್ಯತೆಯ ಮೇರೆಗೆ ಕೆಲವರು ನೀರು ಪೂರ್‍ಯೆಸುತ್ತಿದ್ದಾರೆ.

ಕಟೀಲು ದೇವಳಕ್ಕೆ ಪ್ರತಿದಿನ ಸುಮಾರು ೧೫೦೦೦ ಕ್ಕೂ ಮಿಕ್ಕಿ ಭಕ್ತರು ರಾಜ್ಯದ ವಿವಿಧ ಕಡೆಗಳಿಂದ ದೇವಳಕ್ಕೆ ಆಗಮಿಸುತ್ತಿದ್ದಾರೆ.

 ದೇವಳದ ಮುಂಭಾಗದಲ್ಲಿ ಕೈ ಕಾಲು ತೊಳೆಯುವ ವ್ಯವಸ್ತೆಯಿದ್ದು ಇದೀಗ ನಿಲ್ಲಿಸಲಾಗಿದೆ.

  ದೇವಳದಲ್ಲಿ ಪ್ರತಿ ದಿನ ಬೆಳಿಗ್ಗೆ ಗಂಜಿ ಊಟ, ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತಿದೆ. ನೀರಿನ ಸಮಸ್ಯೆಯಿಂದಾಗಿ  ಬಟ್ಟಲಿನಲ್ಲಿ ಅನ್ನದಾನದ ಬದಲಿಗೆ ಯೂಸ್ ಆಂಡ್ ತ್ರೋ  ಹಾಳೆ ತಟ್ಟೆಯನ್ನು ಉಪಯೋಗಿಸಲಾಗುತ್ತಿದೆ.

 ದೇವಳದಿಂದ ನಡೆಸಲ್ಪಡುವ ಶಿಕ್ಷಣ ಸಂಸ್ತೆಯಲ್ಲಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಫ್ರೌಢ, ಪದವಿಪೂರ್ವ, ಪದವಿ ಸೇರಿದಂತೆ ಒಂದನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ  ಸಿಬಂದಿ, ಶಿಕ್ಷಕರು, ವಿದ್ಯಾರ್ಥಿಗಳು ಸೇರಿ  ಸುಮಾರು ೩೦೦೦ ಕ್ಕೂ ಮಿಕ್ಕಿ ಮಂದಿಯಿದ್ದಾರೆ.

 ಎಲ್ಲರಿಗೂ  ಮಧ್ಯಾಹ್ನ ದೇವಳದಿಂದ ಅನ್ನ ಪ್ರಸಾದ ನೀಡಲಾಗುತ್ತಿದೆ. ಇದೀಗ ನೀರಿನ ಸಮಸ್ಯೆಯಿಂದ ಶಿಕ್ಷಣ ಸಂಸ್ತೆಯ ಮಕ್ಕಳಿಗೆ ಮಧ್ಯಾಹ್ನದ ಅನ್ನದಾನ ನೀಡಲು ಅಸಾಧ್ಯವಾಗಿರುವುದರಿಂದ ಮಧ್ಯಾಹ್ನದ ಬಳಿಕ ರಜೆ ನೀಡಲಾಗುತ್ತಿದೆ.

 ಶೌಚಾಲಯ, ಅತಿಥಿ ಗೃಹಗಳಿಗೆ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗಿ ಸಮಸ್ಯೆಯಾಗಿದೆ.

  ಕಟೀಲು ದೇವಸ್ಥಾನದಿಂದ ನಡೆಸಲ್ಪಡುವ ಗೋಶಾಲೆಗಳಿಗೂ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ನಲ್ಲಿ ನೀರು ತರಿಸಲಾಗುತ್ತಿದೆ.

ದೇವಸ್ಥಾನವನ್ನು ಸುತ್ತುವರಿದು ಹರಿಯುವ ನಂದಿನಿ ನದಿ ಪೂರ್ತಿಯಾಗಿ ಬತ್ತಿ ಹೋಗಿದ್ದು, ನೀರಿನ ಸಂಪನ್ಮೂಲ ಕಂಡುಕೊಳ್ಳಲು ಮತ್ತೆ ಬಾವಿ ಕೊರೆಯಲು ದೇವಸ್ಥಾನದ ಆಡಳಿತ ಮಂಡಳಿ ಚಿಂತನೆ ನಡೆಸಿದೆ.

ಮಳೆ ಬರುವವರೆಗೆ ಕಟೀಲು ದೇವಳದಲ್ಲಿ ನೀರಿನ ಸಮಸ್ಯೆಯನ್ನು ನಿಭಾಯಿಸಲು ಆಡಳಿತ ಮಂಡಳಿ ಪ್ರಯತ್ನ ಪಡುತ್ತಿದೆ.

  ಜಿಲ್ಲಾಕಾರಿಯವರು ಕಿನ್ನಿಗೋಳಿ ಪಟ್ಟಣ ಪಂಚಾಯತ್ ಗೆ ಕಟೀಲು ದೇವಳಕ್ಕೆ ಹಾಗೂ ದೇವಳದ ಗೋ ಶಾಲೆಗೆ ನೀರು ಸರಬರಾಜು ಮಾಡಲು ಆದೇಶಿಸಿದ್ದಾರೆ.  ಆದರೆ ಇವರೆಗೆ  ಜಾರಿಯಾಗಿಲ್ಲ.

ಶಿಕ್ಷಣ ಸಂಸ್ತೆಯಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಹಾಗೂ ಇಲಾಖೆಗಳ ಗಮನಕ್ಕೆ ತಂದಿದೆ.

  ಶಿಕ್ಷಣ ಸಂಸ್ಥೆಗಳಿಗೆ  ರಜೆ ನೀಡಿ ಸಮಸ್ಯೆ ಬಗೆಹರಿದ ಬಳಿಕ ಶಾಲೆ ಆರಂಭಿಸುವಂತೆ  ಮನವಿ ಮಾಡಲಾಗಿದೆ.

ಖಾಸಗಿಯವರು ಟ್ಯಾಂಕರ್ ಮೂಲಕ ನೀರು ನೀಡುತ್ತಿರುವುದು  ಸಾಕಾಗುತ್ತಿಲ್ಲ. ಮಳೆ ಬಂದರೆ ನೀರಿನ ಸಮಸ್ಯೆ ಬಗೆಹರಿಯಲು ಸಾದ್ಯ, ನದಿಗೆ ಅಣೆಕಟ್ಟು ನಿರ್ಮಿಸಿ ದೇವಳ ಸುತ್ತ ನೀರನ್ನು ಉಳಿಸುವ ಬಗ್ಗೆ ಚಿಂತನೆ ನಡೆಸಬೇಕಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.