ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾ ಸಭೆ ಸಂಪನ್ನ
ಅಧ್ಯಕ್ಷರಾಗಿ ಅವಿನಾಶ್ ಶೆಟ್ಟಿ, ಮಹಿಳಾ ಮಂಡಳಿ ಅಧ್ಯಕ್ಷರಾಗಿ ಪ್ರಮೀಳಾ ಶರತ್ ಶೆಟ್ಟಿಗಾರ್ ಆಯ್ಕೆ
(Kaup) ಕಾಪು: ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿಯ ವಾರ್ಷಿಕ ಮಹಾ ಸಭೆ ಬ್ರಹ್ಮಲಿಂಗೇಶ್ವರ ದೇಗುಲದ ಆವರಣದಲ್ಲಿ ಸಂಪನ್ನ ಗೊಂಡಿತು.
ಮಹಾಸಭೆಯಲ್ಲಿ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷ ಸಹಿತ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಭಜನಾ ಮಂಡಳಿ ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರಾಗಿ ಅವಿನಾಶ್ ಶೆಟ್ಟಿ, ಉಪಾಧ್ಯಕ್ಷರಾಗಿ ಅರುಣ್ ರಾವ್, ಭಾಸ್ಕರ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಆಚಾರ್ಯ, ಕಾರ್ಯದರ್ಶಿ ತರುಣ್ ಪೂಜಾರಿ, ಕೋಶಾಧಿಕಾರಿಯಾಗಿ ಯಶವಂತ ಶೆಟ್ಟಿಗಾರ್ ಮತ್ತು ಗೌರವಾಧ್ಯಕ್ಷರಾಗಿ ಕೆ. ಪ್ರೇಮಾನಾಥ ಶೆಟ್ಟಿ ಆಯ್ಕೆಗೊಂಡರು.
ಮಹಿಳಾ ಮಂಡಳಿಯ ಅಧ್ಯಕ್ಷರಾಗಿ ಶ್ರೀಮತಿ ಪ್ರಮೀಳಾ ಶರತ್ ಶೆಟ್ಟಿಗಾರ್, ಉಪಾಧ್ಯಕ್ಷರಾಗಿ ಅನಿತ ಭಾಸ್ಕರ್ ಪೂಜಾರಿ, ಕಾರ್ಯದರ್ಶಿ ದೇವಿಕಾ ಉಲ್ಲಾಸ್ ಚೌಟ ಮತ್ತು ಕೋಶಾಧಿಕಾರಿ ಸುನಂದ ಪ್ರಭಾಕರ್ ಶೆಟ್ಟಿ ಮತ್ತು ಸದಸ್ಯರ ಆಯ್ಕೆ ಪ್ರಕ್ರಿಯೆ ಅವಿರೋಧವಾಗಿ ಜರಗಿತು.

