• Home  
  • ಕಾಂಗ್ರೆಸ್‌ನ ಹಿರಿಯ ನಾಯಕಿ, ಶಿರ್ವ ನಿವಾಸಿ ಲೀನಾ ಮಥಾಯಸ್ ಅಪಘಾತದಲ್ಲಿ ಸಾವು (Senior Congress leader and Shirva resident Leena Mathayus dies in accident)
- ಅಪಘಾತ - ನಿಧನ

ಕಾಂಗ್ರೆಸ್‌ನ ಹಿರಿಯ ನಾಯಕಿ, ಶಿರ್ವ ನಿವಾಸಿ ಲೀನಾ ಮಥಾಯಸ್ ಅಪಘಾತದಲ್ಲಿ ಸಾವು (Senior Congress leader and Shirva resident Leena Mathayus dies in accident)

Share: ಕಾಂಗ್ರೆಸ್‌ನ ಹಿರಿಯ ನಾಯಕಿ, ಶಿರ್ವ ನಿವಾಸಿ ಲೀನಾ ಮಥಾಯಸ್ ಅಪಘಾತದಲ್ಲಿ ಸಾವು (Shirva) ಶಿರ್ವ: ಶಿರ್ವ ಇರ್ಮಿಜಿ ಚರ್ಚ್ ಬಳಿ ಇರುವ ರೇಚಲ್ ರೆಸ್ಟೋರೆಂಟ್ ಬಳಿ ಮೇ 11 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕಿ, ಶಿರ್ವ ನಿವಾಸಿ ಲೀನಾ ಮಥಾಯಸ್ ಮೃತಪಟ್ಟಿದ್ದಾರೆ.   ಬೆಳ್ಳಣ್ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಕಾರು ಅಲ್ಲೇ ನಿಂತಿದ್ದ ಲೀನಾ ಮಥಾಯಸ್‌ರವರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ […]

(Shirva) ಶಿರ್ವ: ಶಿರ್ವ ಇರ್ಮಿಜಿ ಚರ್ಚ್ ಬಳಿ ಇರುವ ರೇಚಲ್ ರೆಸ್ಟೋರೆಂಟ್ ಬಳಿ ಮೇ 11 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಂಗ್ರೆಸ್ನ ಹಿರಿಯ ನಾಯಕಿ, ಶಿರ್ವ ನಿವಾಸಿ ಲೀನಾ ಮಥಾಯಸ್ ಮೃತಪಟ್ಟಿದ್ದಾರೆ.

  ಬೆಳ್ಳಣ್ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಕಾರು ಅಲ್ಲೇ ನಿಂತಿದ್ದ ಲೀನಾ ಮಥಾಯಸ್‌ರವರಿಗೆ ಢಿಕ್ಕಿ ಹೊಡೆಯಿತೆನ್ನಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಮೃತಪಟ್ಟರು ಎಂದು ತಿಳಿದುಬಂದಿದೆ.

ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಲೀನಾ ಮಥಾಯಸ್, ರಾಜ್ಯ ಮಹಿಳಾ ಕಾಂಗ್ರೆಸ್ ನ ಕಾರ್ಯದರ್ಶಿ, ‌  ಜಿಲ್ಲಾ ಪಂಚಾಯತ್‌ನ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ ಶಿರ್ವ ಗ್ರಾಮ ಪಂಚಾಯತ್ ನ ಮಾಜಿ ಸದಸ್ಯೆಯಾಗಿದ್ದರು.

ಲೀನಾರವರ ನಿಧನಕ್ಕೆ ಮಾಜಿ ಸಚಿವ ವಿನಯಕುಮಾರ್‌ ಸೊರಕೆ ಮತ್ತು ಕಾಂಗ್ರೆಸ್‌ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.