ಕಾಪು: ಗ್ರಾವಿಟಿ ಡ್ಯಾನ್ಸ್ ಗ್ರೂಪ್ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ
(Kaup)ಕಾಪು: ಗ್ರಾವಿಟಿ ಡ್ಯಾನ್ಸ್ ಗ್ರೂಪ್ ಕಾಪು ಇದರ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವು ಕಾಪು ಜೆ.ಸಿ.ಐ ಭವನದಲ್ಲಿ ಡ್ಯಾನ್ಸ್ ಗ್ರೂಪ್ ಅಧ್ಯಕ್ಷರಾದ ರೋಶನ್ ಕಾಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ನ ಆಡಳಿತ ನಿರ್ದೇಶಕ ಕಾಪುವಿನ ಖ್ಯಾತ ಸಮಾಜ ಸೇವಕ ಫಾರೂಕ್ ಚಂದ್ರನಗರ (Farook Chandranagara)ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಗ್ರಾವಿಟಿ ಡ್ಯಾನ್ಸ್ ಗ್ರೂಪ್ ಕಳೆದ ಹಲವಾರು ವರ್ಷಗಳಿಂದ 4 ವರ್ಷದ ಮಗುವಿನ ಪ್ರತಿಭೆಯಿಂದ ಹಿಡಿದು ದೊಡ್ಡ ಮಕ್ಕಳಿಗೂ ಡ್ಯಾನ್ಸ್ ಕ್ಲಾಸ್ ಕಲಿಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಪುವಿನ ಹೆಸರು ಬೆಳೆಸುವಲ್ಲಿ ಯಶಸ್ವಿಯಾದ ಸಂಸ್ಥೆ ಅಭಿನಂದನೆಗೆ ಪಾತ್ರವಾಗಿದೆ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಬೇಸಿಗೆ ಶಿಬಿರದ ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಿದರು.
ವೇದಿಕೆಯಲ್ಲಿ ಮಕ್ಕಳ ಆಟೋಟ ಸ್ಪರ್ಧೆ, ಯಕ್ಷಗಾನ, ಡ್ಯಾನ್ಸ್, ಹಾಗೂ ಇನ್ನಿತರ ಸ್ಪರ್ಧೆ ನಡೆಯಿತು.
ಈ ಸಂದರ್ಭದಲ್ಲಿ ಗ್ರಾವಿಟಿ ಡ್ಯಾನ್ಸ್ ಗ್ರೂಪ್ ಕಾಪು ಇದರ ಗೌರವಾಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು, ಡ್ಯಾನ್ಸ್ ಗ್ರೂಪ್ ಸದಸ್ಯರಾದ ಮೋಹನ್ ಕಾಪು, ಕೀರ್ತಿನ್, ಕಾವ್ಯ, ಮಾನ್ಯ ಹಾಗೂ ಎಲ್ಲಾ ಸದಸ್ಯರು ಮಕ್ಕಳ ಕುಟುಂಬಸ್ಥರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.

