ಕಾಪು : ದಂಡತೀರ್ಥ ವಿದ್ಯಾ ಸಂಸ್ಥೆ: ವಿದ್ಯಾರ್ಥಿವೇತನ ವಿತರಣೆ
(Kaup) ಕಾಪು: ಕಾಪು ದಂಡತೀರ್ಥ ಪದವಿಪೂರ್ವ ಕಾಲೇಜಿನಲ್ಲಿ 2025-26 ನೇ ಸಾಲಿನಲ್ಲಿ ವಿದ್ಯಾರ್ಜನೆ ಗೈಯುತ್ತಿರುವ ಪ್ರತಿಭಾನ್ವಿತ ಮತ್ತು ಬಡ ಕುಟುಂಬದ ವಿದ್ಯಾರ್ಥಿಗಳಿಗೆ ದಿವಂಗತ ಡಾ. ಕೆ. ಪ್ರಭಾಕರ ಶೆಟ್ಟಿಯವರ ಮುತುವರ್ಜಿಯಲ್ಲಿ ಪ್ರಾರಂಭಗೊಂಡ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
ಸಂಸ್ಥೆಯ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿಯವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಅವರು ಮಾತನಾಡಿ, ವಿದ್ಯಾರ್ಥಿಗಳಿಗೆ ಸುಮಾರು 9 ಲಕ್ಷದಷ್ಟು ಮೊತ್ತದ ವಿದ್ಯಾರ್ಥಿವೇತನವನ್ನು ವಿತರಿಸಲಾಗುತ್ತಿದೆ. ಪಾಠ – ಪಾಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಪ್ರತಿಭಾನ್ವಿತರಾಗಿ ಮೂಡಿ ಬನ್ನಿ. ತಮ್ಮ ಕಲಿಕೆಗೆ ಬೇಕಾದ ಎಲ್ಲಾ ಪೂರಕ ವ್ಯವಸ್ಥೆಗಳನ್ನು ಸಂಸ್ಥೆಯ ವತಿಯಿಂದ ಕಲ್ಪಿಸಿ ಕೊಡಲಾಗುವುದು ಎಂಬ ಸಂದೇಶವನ್ನು ನೀಡಿದರು.
ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್ ಮಾತನಾಡಿ, ಹೆತ್ತವರ ಹಾಗೂ ಶಿಕ್ಷಕರ ಹಾಗೂ ಶಾಲೆಯ ಋಣವನ್ನು ಎಂದಿಗೂ ಮರೆಯದೆ ಶಿಸ್ತಿನ ವಿದ್ಯಾರ್ಥಿಗಳಾಗಿ ಮೂಡಿಬನ್ನಿ ಎಂದರು.
ಪ್ರಾಂಶುಪಾಲ ನೀಲಾನಂದ್ ನಾಯ್ಕ್ ಸ್ವಾಗತಿಸಿದರು. ಉಪನ್ಯಾಸಕ ಶಿವಣ್ಣ ಬಾಯರ್ ವಂದಿಸಿದರು.

