ಕಾಪು ಬಂಟರ ಸಂಘ : ಮಹಿಳಾ ವಿಭಾಗದ ಆಟಿಯ ನೆನಹು ಮತ್ತು ಪ್ರತಿಭಾ ಪುರಸ್ಕಾರ
(Kaup) ಕಾಪು: ಕಾಪು ಬಂಟರ ಸಂಘದ ಮಹಾಸಭೆ ಹಾಗೂ ಮಹಿಳಾ ವಿಭಾಗದ ವಿಶಿಷ್ಠ, ಶಿಷ್ಠ ಕಾರ್ಯಕ್ರಮಗಳು, 12 ಗ್ರಾಮಗಳ ಬಂಟ ಬಂಧುಗಳ ಸಮಾಗಮ ಮತ್ತು ಸಹಕಾರದೊಂದಿಗೆ ಕಾಪು ಲಕ್ಷ್ಮೀ ಜನಾರ್ದನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಅನಿವಾಸಿ ಭಾರತೀಯ ಮಲ್ಲಾರ್ ಶಶಿಧರ ಶೆಟ್ಟಿ ಉದ್ಘಾಟಿಸಿದರು.
ಅವರು ಮಾತನಾಡಿ, ಆಟಿ ತಿಂಗಳು ಹಾಳಲ್ಲ ಅದು ನಮ್ಮ ಬಾಳು ಬೆಳಗಿಸುವ ತಿಂಗಳು. ನಮ್ಮೆಲ್ಲ ಉದ್ಧಾರಕ್ಕೆ ಅದು ಹೆದ್ದಾರಿ ಎಂದರು.
ಮುಖ್ಯ ಅತಿಥಿಯಾಗಿ ಮುಂಬೈ ಉದ್ಯಮಿ ಉದಯ ಸುಂದರ ಶೆಟ್ಟಿಯವರು ಶುಭ ಹಾರೈಸಿ, ಇಂತಹ ಕಾರ್ಯ ಕ್ರಮಗಳಿಂದ ಕಿರಿಯರಿಗೆ ಸಂಸ್ಕೃತಿಯ ದರ್ಶನ ಮಾಡಿದಂತಾಗುತ್ತದೆ ಎಂದರು.
ಆಟಿ ತಿಂಗಳ ಬಗ್ಗೆ ಗೋವಿಂದ ದಾಸ ಕಾಲೇಜಿನ ಉಪನ್ಯಾಸಕಿ ಅಕ್ಷತಾ ಶೆಟ್ಟಿ ಸಮರ್ಪಕವಾಗಿ ಮಾತನಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ 90% ಕ್ಕಿoತ ಹೆಚ್ಚಿನ ಅಂಕ ಪಡೆದ 12 ಗ್ರಾಮಗಳ ವಿದ್ಯಾರ್ಥಿಗಳಿಗೆ ದಿ. ರಾಧಾ ಸುಂದರ ಶೆಟ್ಟಿಯವರ ಸ್ಮರಣೆಯಲ್ಲಿ ಮನೋಹರ ಎಸ್ ಶೆಟ್ಟಿಯವರು ವಿದ್ಯಾರ್ಥಿ ವೇತನ ವಿತರಿಸಿ, ವಿದ್ಯಾರ್ಥಿಗಳು ಭವಿಷ್ಯವನ್ನು ಉಜ್ವಲ ಗೊಳಿಸಿ ಎಂದು ಹಾರೈಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ರಿತಿಕ ಆರ್ ಶೆಟ್ಟಿ, ಮಜೂರು ಇವಳಿಗೆ ಡಾ. ಪ್ರಭಾಕರ್ ಶೆಟ್ಟಿ ಸ್ಮರಣಾರ್ಥ ಚಿನ್ನದ ಪದಕವನ್ನು ಡಾ. ಪ್ರಶಾಂತ್ ಶೆಟ್ಟಿಯವರು ನೀಡಿ, ಶುಭ ಹಾರೈಸಿದರು.
ಕಾರ್ಯಕ್ರಮದ ಆಯೋಜಕಿ ಮಹಿಳಾ ಘಟಕದ ಸಂಚಾಲಕಿ ಜಯಲಕ್ಷ್ಮಿ ಸುರೇಶ್ ಶೆಟ್ಟಿ ಅಯೋಧ್ಯರವರು ಸ್ವಾಗತಿಸಿ, ಆಟಿಯ ನೆನಪಿನ ಊಟದ ವಿವಿಧ ಖಾದ್ಯಗಳನ್ನು ಮನೆ ಮನೆಯಲ್ಲಿ ತಯಾರಿಸಿ ನಮ್ಮ ಮನಮನಗಳಲ್ಲಿ ಸವಿರುಚಿ ಹೆಚ್ಚಿಸಿದ ಸಹೋದರಿಯರಿಗೆ ಹೂವು ನೀಡಿ ಅಭಿನಂದಿಸಿದರು.
ಸಂಘದ ಕಾರ್ಯದರ್ಶಿ ಯೋಗೇಶ್ ಶೆಟ್ಟಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಭಾಧ್ಯಕ್ಷತೆಯನ್ನು ಪಿ .ರವಿರಾಜ್ ಶೆಟ್ಟಿ ವಹಿಸಿದ್ದರು.
ಸಂಘದ ಜೊತೆ ಕೋಶಾಧಿಕಾರಿ ದಿವಾಕರ ಡಿ ಶೆಟ್ಟಿ ಕಳತ್ತೂರು ಲೆಕ್ಕಪತ್ರ ಮಂಡನೆ ಗೈದರು.
ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ಸಂಯೋಜಿಸಿದರು.
ಆಟಿಯ ನೆನಹು ಸಭಾ ಕಾರ್ಯಕ್ರಮದಲ್ಲಿ ಭಾನು ಶೆಟ್ಟಿ ಮತ್ತು ವಿನೋದ ಆರ್ ಶೆಟ್ಟಿ ಪ್ರಾರ್ಥಿಸಿದರು. ಕವಿತಾ ಶೆಟ್ಟಿ ಉಳಿಯಾರುಗೋಳಿ ವಂದಿಸಿದರು. ಕಳತ್ತೂರು ಸುಮಾ ಎನ್ ಶೆಟ್ಟಿ ಅತಿಥಿಗಳ ಪರಿಚಯಿಸಿದರು. ಪ್ರತಿಮಾ ವಿ ಶೆಟ್ಟಿ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ತುಳು ಒಗಟುಗಳ ಸ್ಪರ್ಧೆಯನ್ನು ಸಾರಿಕಾ ಶೆಟ್ಟಿ ನಡೆಸಿ ಕೊಟ್ಟರು.
ಕಾರ್ಯಕ್ರಮದ ಊಟ ವಿತರಿಸುವ ವ್ಯವಸ್ಥೆಯ ಉಸ್ತುವಾರಿಯಾಗಿ ಶ್ರೀಕರ ಶೆಟ್ಟಿ ಕಲ್ಯಾ 12 ಗ್ರಾಮಗಳ ಯುವ ತಂಡದೊಂದಿಗೆ ಸಹಕರಿಸಿದರು.
ಮಾಲಿನಿ ಶೆಟ್ಟಿ ಇನ್ನಂಜೆ ಹಾಗೂ ಅನಿತಾ ಶೆಟ್ಟಿ ಉಳಿಯಾರಗೋಳಿ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು.
ಆಟಿ ಖಾದ್ಯಗಳ ಗ್ರಾಮವಾರು ಪಟ್ಟಿಯನ್ನು ಮಮತಾ ಶೆಟ್ಟಿ ವಾಚಿಸಿದರು. ಸ್ಥಾಪಕ ಮಹಿಳಾ ವಿಭಾಗದ ಸಂಚಾಲಕಿ ಶಾಂತಲತ ಎಸ್ ಶೆಟ್ಟಿ ಕಾರ್ಯಕ್ರಮವನ್ನುಕ್ಕೆ ನಿರ್ದೇಶಿಸಿದ್ದರು.

