(Kaup) ಕಾಪು : ಬಿರುವೆರ್ ಕಾಪು ಟ್ರೋಫಿ ಕ್ರಿಕೆಟ್ ಪಂದ್ಯಾಟ ಉದ್ಘಾಟನೆ
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ ಆಶ್ರಯದಲ್ಲಿ ಸಮಾಜ ಸೇವೆಯ ಸಹಾಯಾರ್ಥವಾಗಿ ಕಾಪು ದಂಡತೀರ್ಥ ಮೈದಾನದಲ್ಲಿ ಆಯೋಜಿಸಲಾಗಿರುವ ಬಿರುವೆರ್ ಕಾಪು ಟ್ರೋಫಿ ಎರಡು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ (EX Minister Vinaykumar Sorake) ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಕೋಟಿ ಚೆನ್ನಯರ ಆದರ್ಶ, ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಅನುಸರಿಸಿಕೊಂಡು ಬರುತ್ತಿರುವ ಬಿರುವೆರ್ ಕಾಪು ಸಂಘಟನೆಯು ಕಳೆದ ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಸೇವಾ ಚಟುವಟಿಕೆಗಳು ಎಲ್ಲರಿಗೂ ಮಾದರಿಯಾಗಿವೆ. ಕಾಪುವಿನಲ್ಲಿ ಪ್ರಥಮ ಬಾರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಮೂಲಕ ಬಿಲ್ಲವ ಯುವಕರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಿಕೊಟ್ಟಂತಾಗಿದೆ ಎಂದರು.
ಶಂಕರಪುರ ದ್ವಾರಕಾಮಯಿ ಮಠದ ಧರ್ಮದರ್ಶಿ, ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಾಯಿ ಈಶ್ವರ್ ಗುರೂಜಿ (Sai Eshwar Guruji) ಆಶೀರ್ವಚನ ನೀಡಿದರು.
ಬಿರುವೆರ್ ಕಾಪು ಸೇವಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಆರ್. ಕೋಟ್ಯಾನ್ (Balakrishna R Kotian) ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ವಕೀಲ ಸಂಕಪ್ಪ ಅಮೀನ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ಉದ್ಯಮಿ ದೀಪಕ್ ಕೋಟ್ಯಾನ್ ಇನ್ನ, ವೈ. ಉದಯ್ ಕುಮಾರ್ ಕಟಪಾಡಿ ಶುಭಾಶಂಸನೆಗೈದರು.
ಬಿಸಿಸಿಐ ಪ್ರಾಯೋಜಿತ ೧೯ ವರ್ಷದೊಳಗಿನ ಮಹಿಳೆಯರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿರುವ ತೇಜಸ್ವಿನಿ ಉದಯ್, ಮಸ್ಕತ್ ಸ್ನೇಹ ಫೌಂಡೇಷನ್‌ನ ಸ್ಥಾಪಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರನ್ನು ಸಮ್ಮಾನಿಸಲಾಯಿತು.
ದಂಡತೀರ್ಥ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಡಾ. ಕೆ. ಪ್ರಶಾಂತ್ ಶೆಟ್ಟಿ, ಬಿರುವೆರ್ ಕಾಪು ಟ್ರೋಫಿ ಗೌರವಾಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು, ಮಾಜಿ ಜಿ.ಪಂ. ಸದಸ್ಯೆ ಗೀತಾಂಜಲಿ ಸುವರ್ಣ, ಬಿಲ್ಲವ ಸಂಘಗಳ ಅಧ್ಯಕ್ಷರಾದ ವಿಕ್ರಂ ಕಾಪು, ಪ್ರಭಾಕರ ಪೂಜಾರಿ ಉಚ್ಚಿಲ, ಜಗದೀಶ್ ಪೂಜಾರಿ ಇನ್ನಂಜೆ, ಗೋಪಾಲ ಪೂಜಾರಿ ಶಿರ್ವ, ಗಣ್ಯರಾದ ರಾಘು ಪೂಜಾರಿ ಕಲ್ಮಂಜೆ, ಚಂದ್ರಶೇಖರ ಪೂಜಾರಿ ಕಾಪು, ಮೋಹನ್ ರಾಜ್, ಸಂತೋಷ್ ಎಸ್.ಡಿ., ರವೀಂದ್ರ ಪೂಜಾರಿ ರಟ್ಟಾಡಿ, ನವೀನ್ ಅಮೀನ್ ಶಂಕರಪುರ, ಸಂಜಿತ್ ಶೆಟ್ಟಿ ಕಲ್ಯ, ಪುರಸಭೆ ಸದಸ್ಯರಾದ ಅನಿಲ್ ಕುಮಾರ್, ಸರಿತಾ ಪೂಜಾರಿ, ಶೋಭಾ ಪೂಜಾರಿ, ಶೈಲೇಶ್ ಅಮೀನ್, ಉಮೇಶ್ ಕರ್ಕೇರ, ವಿದ್ಯಾಲತಾ, ಕಾಮರಾಜ್ ಸುವರ್ಣ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿರುವೆರ್ ಕಾಪು ಸಂಘಟನೆಯ ಸದಸ್ಯ ರಾಕೇಶ್ ಕುಂಜೂರು ಸ್ವಾಗತಿಸಿ, ಪ್ರಸ್ತಾವನೆಗೈದರು.
ಪ್ರಧಾನ ಕಾರ್ಯದರ್ಶಿ ವಿಕ್ಕಿ ಪೂಜಾರಿ ಮಡುಂಬು ಸಮ್ಮಾನ ಪತ್ರ ವಾಚಿಸಿದರು. ಸಂಘಟನಾ ಕಾರ್ಯದರ್ಶಿ ಅತಿಥ್ ಸುವರ್ಣ ಪಾಲಮೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

