• Home  
  • ಕಾಪು : ಮಲ್ಲಾರು ಯುವಕ ಮಂಡಲದ ವತಿಯಿಂದ ಇಂದು 78 ನೇ ಸ್ವಾತಂತ್ರತ್ಯೋತ್ಸವ ಆಚರಣೆ (78th Indipendent Celebration by Mallaru Yuvaka mandala)
- fastival

ಕಾಪು : ಮಲ್ಲಾರು ಯುವಕ ಮಂಡಲದ ವತಿಯಿಂದ ಇಂದು 78 ನೇ ಸ್ವಾತಂತ್ರತ್ಯೋತ್ಸವ ಆಚರಣೆ (78th Indipendent Celebration by Mallaru Yuvaka mandala)

Share: ಕಾಪು : ಮಲ್ಲಾರು ಯುವಕ ಮಂಡಲದ ವತಿಯಿಂದ ಇಂದು 78 ನೇ ಸ್ವಾತಂತ್ರತ್ಯೋತ್ಸವ ಆಚರಣೆ (Kaup) ಕಾಪು:  ಮಲ್ಲಾರು ಯುವಕ ಮಂಡಲದ ವತಿಯಿಂದ 78 ನೇ ಸ್ವಾತಂತ್ರತ್ಯೋತ್ಸವ ಆಚರಣೆಯನ್ನುವನ್ನು  ವಿಜೃಂಭಂಣೆಯಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಭಂಡಾರಿಯವರು ನೆರವೇರಿಸಿದರು. ಸಭಾ ಕಾರ್ಯಕ್ರಮದಲ್ಲಿ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ನಾಗಭೂಷಣ ರಾವ್, ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು – ಮಲ್ಲಾರ್ ನ ಧರ್ಮಗುರುಗಳಾದ ಮೌಲಾನ ಅಬ್ದುಲ್ ರಶೀದ್ ಸಖಾಫಿ,  ಇಮ್ಮ್ಯಾನುವಲ್ ಟ್ರಸ್ಟ್ ನ […]

ಕಾಪು : ಮಲ್ಲಾರು ಯುವಕ ಮಂಡಲದ ವತಿಯಿಂದ ಇಂದು 78 ನೇ ಸ್ವಾತಂತ್ರತ್ಯೋತ್ಸವ ಆಚರಣೆ

(Kaup) ಕಾಪು:  ಮಲ್ಲಾರು ಯುವಕ ಮಂಡಲದ ವತಿಯಿಂದ 78 ನೇ ಸ್ವಾತಂತ್ರತ್ಯೋತ್ಸವ ಆಚರಣೆಯನ್ನುವನ್ನು  ವಿಜೃಂಭಂಣೆಯಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಭಂಡಾರಿಯವರು ನೆರವೇರಿಸಿದರು.

ಸಭಾ ಕಾರ್ಯಕ್ರಮದಲ್ಲಿ ದುರ್ಗಾ ಪರಮೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷ ನಾಗಭೂಷಣ ರಾವ್, ಬದ್ರಿಯಾ ಜುಮ್ಮಾ ಮಸ್ಜಿದ್ ಮಜೂರು – ಮಲ್ಲಾರ್ ನ ಧರ್ಮಗುರುಗಳಾದ ಮೌಲಾನ ಅಬ್ದುಲ್ ರಶೀದ್ ಸಖಾಫಿ,  ಇಮ್ಮ್ಯಾನುವಲ್ ಟ್ರಸ್ಟ್ ನ ಅಧ್ಯಕ್ಷ ಸುನೀಲ್ ಫಾಸ್ಟರ್ ರವರು ಸಂದೇಶ ನೀಡಿದರು.

 ಯುವಕ ಮಂಡಲದ ಸಲಹೆಗಾರರಾದ ಅನ್ವರ್ ಅಲಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿದರು.

 ಗೌರವ ಅಧ್ಯಕ್ಷರು ಸುಧಾಕರ ಶೆಟ್ಟಿ, ಪುರಸಭಾ ಸದಸ್ಯರಾದ ಉಮೇಶ್ ಕರ್ಕೇರಾ, ವಿದ್ಯಾಲತಾ, ನಸೀರ್ ಅಹಮದ್ ರವರು ಸಭಿಕರನ್ನು  ಉದ್ದೇಶಿಸಿ ಮಾತಾಡಿದರು.

ಸಮಾಜದಲ್ಲಿ ಇರುವ ನಾವೆಲ್ಲರೂ ಒಂದೇ ತಾಯಿಯ ಮಕ್ಕಳು, ಪರಸ್ಪರ ಸಹೋದರ, ಸಹೋದರಿಯರು ಎಂಬ ಭಾವನೆಯೊಂದಿಗೆ ಜೀವನ ಸಾಗಿಸಿದರೆ, ನಮಗೆ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಬೆಲೆ ಬರುತ್ತದೆ ಎಂದು ಅಧ್ಯಕ್ಷರು ರಾಜೇಶ್ ಭಂಡಾರಿಯವರು ತಿಳಿಸಿದರು.

ವೇದಿಕೆಯಲ್ಲಿ ನಿತ್ಯಾನಂದ ಕಾಮತ್, ವೇಲು ಮಲ್ಲಾರ್, ಮುಹಮ್ಮದ್ ಸಾದಿಕ್ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಸಿಹಿ ತಿಂಡಿ ವಿತರಿಸಲಾಯಿತು.    ಉಪಾಧ್ಯಕ್ಷ ಹಸನ್ ಅಬ್ದುಲ್ ಖಾದರ್ ರವರ ನೇತೃತ್ವದಲ್ಲಿ ಆಟೋಟ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು.

ರೇಖಾ ಸಂತೋಷ್ ರವರು ಅತಿಥಿಗಳನ್ನು ಸ್ವಾಗತಿಸಿದರು. ಅಂಗನವಾಡಿ ಕಾರ್ಯಕರ್ತೆ ವಿದ್ಯಾ ಪ್ರಶಾಂತ್ ರವರು ಕಾರ್ಯಕ್ರಮ  ನಿರೂಪಿಸಿದರು. ಕಾರ್ಯದರ್ಶಿ ನಾರಾಯಣ ರವರು ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.