• Home  
  • ಕಾಪು ರಾಜೀವ ಭವನಕ್ಕೆ ಗೃಹ ಸಚಿವ ಪರಮೇಶ್ವರ್‌  ಭೇಟಿ (Home Minister Parameshwara visits Rajiv Bhavan in Kaup)
- ರಾಜಕೀಯ

ಕಾಪು ರಾಜೀವ ಭವನಕ್ಕೆ ಗೃಹ ಸಚಿವ ಪರಮೇಶ್ವರ್‌  ಭೇಟಿ (Home Minister Parameshwara visits Rajiv Bhavan in Kaup)

Share: ಕಾಪು ರಾಜೀವ ಭವನಕ್ಕೆ ಗೃಹ ಸಚಿವ ಪರಮೇಶ್ವರ್‌  ಭೇಟಿ (Kaup) ಕಾಪು : ಕಾಪು ರಾಜೀವ ಭವನಕ್ಕೆ ಕರ್ನಾಟಕ ಸರಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶನಿವಾರ ಸಂಜೆ ಭೇಟಿ ನೀಡಿದರು. ಕಾಪು ಕಾಂಗ್ರೆಸ್‌ ಕಾರ್ಯಕರ್ತರ ಪರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸನ್ಮಾನಿಸಿ ಅಭಿನಂದಿಸಲಾಯಿತು.   ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿ ಪರಮೇಶ್ವರ್‌, ರಾಜೀವ್ ಗಾಂಧಿಯವರ ಸಹಾಯದಿಂದ ರಾಜಕಾರಣಕ್ಕೆ ಬಂದಿರುತ್ತೇನೆ. ಯಾವುದೇ ಜಿಲ್ಲೆ, ತಾಲೂಕಿಗೆ ಭೇಟಿ ನೀಡಿದರೂ, ಕಾಂಗ್ರೆಸ್ ಕಚೇರಿಗೆ ಭೇಟಿ […]

(Kaup) ಕಾಪು : ಕಾಪು ರಾಜೀವ ಭವನಕ್ಕೆ ಕರ್ನಾಟಕ ಸರಕಾರದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಶನಿವಾರ ಸಂಜೆ ಭೇಟಿ ನೀಡಿದರು.

ಕಾಪು ಕಾಂಗ್ರೆಸ್‌ ಕಾರ್ಯಕರ್ತರ ಪರವಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸನ್ಮಾನಿಸಿ ಅಭಿನಂದಿಸಲಾಯಿತು.

  ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿ ಪರಮೇಶ್ವರ್‌, ರಾಜೀವ್ ಗಾಂಧಿಯವರ ಸಹಾಯದಿಂದ ರಾಜಕಾರಣಕ್ಕೆ ಬಂದಿರುತ್ತೇನೆ. ಯಾವುದೇ ಜಿಲ್ಲೆ, ತಾಲೂಕಿಗೆ ಭೇಟಿ ನೀಡಿದರೂ, ಕಾಂಗ್ರೆಸ್ ಕಚೇರಿಗೆ ಭೇಟಿ ನೀಡುತ್ತೇನೆ. ಕರಾವಳಿಯನ್ನು ಗೌರವಿಸುತ್ತೇನೆ.  ದುರ್ದೈವವಶಾತ್ ಕರಾವಳಿಯಲ್ಲಿ ಕೋಮು ಗಲಭೆಗಳು ಇಲ್ಲಿ ಸಮಸ್ಯೆಯಾಗಿತ್ತು. ಆದರೆ ಮೂರು ತಿಂಗಳಲ್ಲಿ ಎಲ್ಲವೂ ತಿಳಿಯಾಗಿದೆ.

ಸರಕಾರದ ಪ್ರಣಾಳಿಕೆಯಂತೆ ಜನಪರ ಆಡಳಿತ ನಾವು ಕೊಡುತ್ತಾ ಇದ್ದೇವೆ. ಬಡತನ, ಶೋಷಿತರ ಪರವಾಗಿದೆ ಕಾಂಗ್ರೆಸ್. ಗ್ಯಾರಂಟಿಗಳು ಪಕ್ಷಾತೀತವಾಗಿದೆ ಎಂದ, ಗೃಹ ಸಚಿವರು, ಅಂದು ನಡೆಸಿದ ಸಾಮರಸ್ಯದ ಪಾದಯಾತ್ರೆಯನ್ನು ನೆನಪಿಸಿದರು.

   ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ, ಸೌಹಾರ್ದತೆ ಬಿಂಬಿಸುವ ಕಾರ್ಯ ಪರಮೇಶ್ವರ್ ರವರ ಅವಧಿಯಲ್ಲಿ ಮಾಡಿದ್ದಾರೆ. ಸಂಯಮವಿದ್ದವರಿಗೆ ಅಧಿಕಾರ ಬರಲು ಸಾಧ್ಯ. ಗೃಹ ಸಚಿವರ ಭೇಟಿ ಕಾರ್ಯಕರ್ತರಿಗೆ ಉತ್ಸಾಹ ತಂದಿದೆ ಎಂದರು.

 ಈ ಸಂದರ್ಭ ಕಾಂಗ್ರೆಸ್ ಪ್ರಮುಖರಾದ ಎಂ.ಎ.ಗಫೂರ್, ಅಶೋಕ್ ಕುಮಾರ್, ಕಿಶನ್ ಹೆಗ್ಡೆ, ನವೀನ್‌ಚಂದ್ರ ಜೆ ಶೆಟ್ಟಿ, ಹರಿಪ್ರಸಾದ್ ರೈ, ದಿವಾಕರ ಶೆಟ್ಟಿ, ಶಾಂತಲತಾ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಸಂತೋಷ್ ಕುಲಾಲ್, ವೈ ಸುಕುಮಾರ್‌, ನಿಯಾಝ್, ಅನಿಲ್, ದೀಪಕ್‌ ಎರ್ಮಾಳು, ಜೀತೇಂದ್ರ ಫುರ್ಟಾಡೋ, ಡೇವಿಡ್‌ ಡಿಸೋಜಾ, ನವೀನ್‌ ಎನ್‌ ಶೆಟ್ಟಿ, ಶರ್ಫುದ್ದೀನ್‌ ಶೇಖ್‌, ಮುನೀರ್ ಜನ್ಸಾಲ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.