• Home  
  • ಕಾಪು ಲೈಟ್‌ ಹೌಸ್ ಬೀಚ್‌ : ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರ ಪಾಲು (Kapu Lighthouse Beach: Two youths who went for a swim lost to the sea)
- ಅವಘಡ

ಕಾಪು ಲೈಟ್‌ ಹೌಸ್ ಬೀಚ್‌ : ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರ ಪಾಲು (Kapu Lighthouse Beach: Two youths who went for a swim lost to the sea)

Share: ಕಾಪು ಲೈಟ್‌ ಹೌಸ್ ಬೀಚ್‌ : ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರ ಪಾಲು ಹೊಸನಗರ ನಿವಾಸಿ ಸಮೀರ್ ಬಾಷಾ, ಅಹಮ್ಮದಿ ನಗರದ ಮಲ್ಲಿಕ್ ರಿಹಾನ್ ನಾಪತ್ತೆ (Kaup) ಕಾಪು : ಕಾಪು ಲೈಟ್‌ ಹೌಸ್ ಬೀಚ್‌ನಲ್ಲಿ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.   ಸಮುದ್ರ ಪಾಲಾದವರನ್ನು ಶಿವಮೊಗ್ಗ ಜಿಲ್ಲೆಯ ಮಾವಿನಕೊಪ್ಪ ಹೊಸನಗರ ನಿವಾಸಿ ಸಮೀರ್ ಬಾಷಾ (20) ಹಾಗೂ ದಾವಣಗೆರೆ ಜಿಲ್ಲೆಯ ಅಹಮ್ಮದಿ ನಗರದ ನಿವಾಸಿ […]

(Kaup) ಕಾಪು : ಕಾಪು ಲೈಟ್‌ ಹೌಸ್ ಬೀಚ್‌ನಲ್ಲಿ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಸಮುದ್ರಪಾಲಾಗಿರುವ ಘಟನೆ ಭಾನುವಾರ ಸಂಜೆ ಸಂಭವಿಸಿದೆ.

  ಸಮುದ್ರ ಪಾಲಾದವರನ್ನು ಶಿವಮೊಗ್ಗ ಜಿಲ್ಲೆಯ ಮಾವಿನಕೊಪ್ಪ ಹೊಸನಗರ ನಿವಾಸಿ ಸಮೀರ್ ಬಾಷಾ (20) ಹಾಗೂ ದಾವಣಗೆರೆ ಜಿಲ್ಲೆಯ ಅಹಮ್ಮದಿ ನಗರದ ನಿವಾಸಿ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ.

  ದಾವಣಗೆರೆಯಿಂದ ಜಿಯಾವುಲ್ಲಾ ಹಾಗೂ ಅವರ ಸಂಬಂಧಿಕರ ಸುಮಾರು 10–12 ಕುಟುಂಬಗಳ ಸದಸ್ಯರು ಪ್ರವಾಸದ ನಿಮಿತ್ತ ಕಾಪು ಬೀಚ್‌ಗೆ ಆಗಮಿಸಿದ್ದರು. ಸಂಜೆ ಸುಮಾರು 4:30 ಗಂಟೆಗೆ ಕುಟುಂಬದ ಮಕ್ಕಳು ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಇಸಾಕ್, ಸಮೀರ್ ಭಾಷಾ ಹಾಗೂ ಮಲ್ಲಿಕ್ ರಿಯಾನ್ ಎಂಬವರು ಸಮುದ್ರದ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ.

  ತಕ್ಷಣ ಸ್ಥಳೀಯರು ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಇಸಾಕ್‌ನನ್ನು ರಕ್ಷಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

  ಐದು ಮಂದಿ ಕಾಪು ಲೈಟ್‌ಹೌಸ್ ಬೀಚ್‌ಗೆ ತೆರಳಿ ಸಮುದ್ರದಲ್ಲಿ ಈಜುತ್ತಿದ್ದರು. ಈ ವೇಳೆ ಅಲೆಗಳ ಹೊಡೆತಕ್ಕೆ ಸಿಲುಕಿ ಇಬ್ಬರು ಸಮುದ್ರಪಾಲಾಗಿದ್ದಾರೆ.

  ಮೂವರನ್ನು ಸ್ಥಳೀಯರು ಮತ್ತು ಲೈಫ್ ಗಾಡ್೯ ಸಿಬ್ಬಂದಿ ರಕ್ಷಿಸಿದ್ದಾರೆ.

  ಮುಳುಗು ತಜ್ಞ ಈಶ್ವರ್ ಮಲ್ಪೆ ತಂಡವು  ನಾಪತ್ತೆಯಾದ ಇಬ್ಬರ ಹುಡುಕಾಟ ನಡೆಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.