ಕಾಪು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ವತಿಯಿಂದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆ
ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸ್ಪರ್ಧೆ
(Kaup) ಕಾಪು: ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಇವರ ವತಿಯಿಂದ ಆಯೋಜಿಸಲಾದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆಯು ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಉಮಾನಾಥ ಕಾಪು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ, ಆದರ್ಶ ಆಸ್ಪತ್ರೆ ಉಡುಪಿಯ ಹೃದ್ರೋಗ ತಜ್ಞರಾದ ಡಾ. ವಿಶು ಕುಮಾರ್ ಭಾಗವಹಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್‌ನ ಸ್ಥಾಪಕರಾದ ಸಾಕ್ಷಾತ್ ಯು.ಕೆ. ನಿರ್ದೇಶಕಿ ಸೌಂದರ್ಯ ಯುಕೆ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ವಿವಿಧ ವಯೋಮಿತಿಯ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದರು.
ಪ್ರಶಸ್ತಿ ವಿಜೇತರ ಪಟ್ಟಿ
ಮುಕ್ತ ವಿಭಾಗ : ಪ್ರಥಮ : ಪ್ರಣವ್ ಪಿ. ಜೆ., ದ್ವಿತೀಯ : ಅಭಿನವ್ ಪಿ., ತೃತೀಯ : ಚಿನ್ಮಯ ಕೃಷ್ಣ, ಬೆಸ್ಟ್ ವೆಟರನ್ ಪ್ಲೇಯರ್ ರಾಮ ಶೇರಿಗಾರ್.
8 ವರ್ಷದೊಳಗಿನ ವಿಭಾಗ : ಪ್ರಥಮ : ಸಾಮ್ರಾಟ್ ಬೆಳ್ಚಡ ಕೆ, ದ್ವಿತೀಯ : ಇಂಚರ ಉಡುಪ, ತೃತೀಯ : ಅಭಯ್ ಉಡುಪ.
12 ವರ್ಷದೊಳಗಿನ ವಿಭಾಗ : ಪ್ರಥಮ : ಡಿಸೋಜ ವಿನೆಲ್ ಲಿಯೋನ್,ದ್ವಿತೀಯ : ಯಾಯಿನ್ ಎಸ್. ಭಟ್, ತೃತೀಯ : ಮಧ್ವ ವ್ಯಾಸರಾಜ್ ತಂತ್ರಿ.
15 ವರ್ಷದೊಳಗಿನ ವಿಭಾಗ : ಪ್ರಥಮ : ರಿಮಾ ರಾವ್ ಯು.ಬಿ., ದ್ವಿತೀಯ : ಅನ್ವಯ್ ಎ. ಕಾಮತ್, ತೃತೀಯ : ಶ್ರೀಪಾದ.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಹಾಗೂ ಪ್ರಶಸ್ತಿ ವಿಜೇತರಿಗೆ ಸಂಘಟಕರು ಅಭಿನಂದನೆ ಸಲ್ಲಿಸಿದರು.

