• Home  
  • ಕಾಪು : ಸ್ಕೂಟಿ ಹಿಂಬದಿಗೆ ಬಸ್ ಡಿಕ್ಕಿ: ಬಾಲಕಿ ಸಾವು(Kaup: Bus hits the back of a scooty: Girl dies)
- Uncategorised - ಅಪಘಾತ

ಕಾಪು : ಸ್ಕೂಟಿ ಹಿಂಬದಿಗೆ ಬಸ್ ಡಿಕ್ಕಿ: ಬಾಲಕಿ ಸಾವು(Kaup: Bus hits the back of a scooty: Girl dies)

Share: ಕಾಪು : ಸ್ಕೂಟಿ ಹಿಂಬದಿಗೆ ಬಸ್ ಡಿಕ್ಕಿ: ಬಾಲಕಿ ಸಾವು ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು (Kaup) ಕಾಪು : ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಷ್ಟೊಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಹ ಸವಾರೆಯಾಗಿದ್ದ ಬಾಲಕಿ ಸಾತ್ವಿ ಶೆಟ್ಟಿ (8) ತೀವ್ರಗಾಯಗಳೊಂದಿಗೆ ಮೃತಪಟ್ಟ ಘಟನೆ ಮಂಗಳವಾರ ಘಟಿಸಿದೆ  ಮೃತ ಸಾತ್ವಿ ತನ್ನ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾಳೆ.  ದುಬಾಯಿಯಲ್ಲಿ […]

(Kaup) ಕಾಪು : ಕಾಪು ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸುತ್ತಿದ್ದ ತಡೆರಹಿತ ಬಷ್ಟೊಂದು ಕಾಪು ಸಾಯಿ ಸರ್ವಿಸ್ ಸ್ಟೇಶನ್ ಬಳಿ ಸ್ಕೂಟಿಯೊಂದಕ್ಕೆ ಹಿಂಬದಿಯಿಂದ ಢಿಕ್ಕಿಯಾದ ಪರಿಣಾಮ ತಂದೆಯೊಂದಿಗೆ ಸಹ ಸವಾರೆಯಾಗಿದ್ದ ಬಾಲಕಿ ಸಾತ್ವಿ ಶೆಟ್ಟಿ (8) ತೀವ್ರಗಾಯಗಳೊಂದಿಗೆ ಮೃತಪಟ್ಟ ಘಟನೆ ಮಂಗಳವಾರ ಘಟಿಸಿದೆ

 ಮೃತ ಸಾತ್ವಿ ತನ್ನ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾಳೆ.

 ದುಬಾಯಿಯಲ್ಲಿ ವಾಸವಿದ್ದ ಈ ಕುಟುಂಬವು ಮುಂದೆ ಊರಿನಲ್ಲಿಯೇ ನೆಲೆಸುವ ಸಿದ್ಧತೆಯಲ್ಲಿತ್ತು. ಸಾತ್ವಿಗಾಗಿ  ಇಂದು ಆಕೆಯ ಹೆತ್ತವರು ಉಡುಪಿಯ ಖಾಸಗಿ ಶಾಲೆಯಲ್ಲಿ ಪ್ರವೇಶಾತಿಯನ್ನೂ ಮುಗಿಸಿದ್ದರು.

 ಬುಧವಾರ ಆಕೆಯ ತಂದೆ ನಿತ್ಯಾನಂದ ಶೆಟ್ಟಿ ಅವರು ಮಾತ್ರ ದುಬಾಯಿಗೆ ತೆರಳುವರಿದ್ದು, ಕಾಪು ಪೇಟೆಗೆ ಕೆಲ ವಸ್ತುಗಳನ್ನು ತರಲು ಹೋಗಿ ವಾಪಾಸಾಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತಾಣಕ್ಕೂ ಅವರ ಪೂವಣಿಗುತ್ತು ಮನೆಗೂ ಕೇವಲ ಅರ್ಧ ಕಿ.ಮೀ.ದೂರವಷ್ಟೇ ಬಾಕಿ ಇತ್ತು.

  ಸ್ಕೂಟಿ ಸವಾರ ನಿತ್ಯಾನಂದ ಶೆಟ್ಟಿ ಅವರಿಗೂ ತೀವ್ರ ಗಾಯವಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

 ಕಾಪು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.