ಕಾರಣಿಕ ಪ್ರಸಿದ್ಧ ಮುಳೂರು ದಡ್ಡಿನ ಗುಜ್ಜಿ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜನ ಕೋಲ.
(Udupi) ಉಡುಪಿ: ದಿವಂಗತ ಅಶೋಕ್ ಪೂಜಾರಿಯವರ ಕುಟುಂಬಿಕರು ಆರಾಧಿಸಿಕೊಂಡು ಬರುತ್ತಿರುವ ಕಾರಣಿಕ ಪ್ರಸಿದ್ಧ ಕಾಪು ತಾಲೂಕಿನ ಮುಳೂರು ದಡ್ಡಿನಗುಜ್ಜಿ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜ ದೈವದ ನೇಮೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಸಂಜೆ ಭಂಡಾರ ಇಳಿದ ಬಳಿಕ ನೇಮೋತ್ಸವ ನೆರವೇರಿತು.
ಕೊರಗಜ್ಜನ ಕೋಲಕ್ಕೆ ಸ್ಥಳೀಯರು ಹಾಗೂ ಅವಿಭಜಿತ ದ. ಕ ಜಿಲ್ಲೆ ಸಹಿತ ಹಲವಾರು ಗ್ರಾಮಗಳಿಂದ ಭಕ್ತರು ಆಗಮಿಸಿ ಕೊರಗಜ್ಜನ ಕರಿಗಂಧ ಪ್ರಸಾದ ಸ್ವೀಕರಿಸಿ ಕೃತಾರ್ಥರಾಗಿದ್ದಾರೆ.
ಈ ಸಂದರ್ಭ ದಿವಂಗತ ಅಶೋಕ್ ಪೂಜಾರಿ ಕುಟುಂಬಿಕರು, ಅರ್ಚಕರು, ಗ್ರಾಮಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.
