ಕಾರ್ಕಳ : ಚಿಕಿತ್ಸೆಗೆ ಬಂದಿದ್ದ ಮಹಿಳೆ ಸಾವು, ವೈದ್ಯರ ನಿರ್ಲಕ್ಷ್ಯ ಆರೋಪಿಸಿ ಆಸ್ಪತ್ರೆಗೆ ಮುತ್ತಿಗೆ
(Karkala) ಕಾರ್ಕಳ : ವೈದ್ಯರ ನಿರ್ಲಕ್ಷ್ಯ ಆರೋಪ- ಆಸ್ಪತ್ರೆಗೆ ಜಮಾಯಿಸಿ ವೈದ್ಯರನ್ನು ತರಾಟೆಗೆತ್ತಿಕೊಂಡ ಸಂಬಂಧಿಕರು.
ಗೆಡ್ಡೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ
ಮಹಿಳೆಯೋರ್ವರು ಸಾವನ್ನಪ್ಪಿದ ದಾರುಣ ಘಟನೆ ಮೇ 14ರಂದು ಕಾರ್ಕಳದ ಸ್ಪಂದನಾ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಕಾರ್ಕಳದ ಜುಬೇದಾ (54) ಮೃತಪಟ್ಟ ಮಹಿಳೆ.
ಜುಬೇದಾ ಕಳೆದ ನಾಲ್ಕು ದಿನಗಳಿಂದ ಗೆಡ್ಡೆ ಚಿಕಿತ್ಸೆಗಾಗಿ ಸ್ಪಂದನಾ ಆಸ್ಪತ್ರೆಗೆ ಬರುತ್ತಿದ್ದು ಇಂದು ಕಾಯಿಲೆ ಉಲ್ಬಣಗೊಂಡ ಹಿನ್ನೆಲೆ ವೈದ್ಯರು ಉಡುಪಿ ಆಸ್ಪತ್ರೆಗೆ ಹೋಗಲು ತಿಳಿಸಿದ್ದರು. ಆದರೆ, ಬಳಿಕ ಅಲ್ಲಿಯೇ ಶಸ್ತ್ರಚಿಕಿತ್ಸೆಗೆ ಮುಂದಾಗಿದ್ದು, ಈ ವೇಳೆ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ಮುತ್ತಿಗೆ
ಜುಬೇದಾ ಅವರ ಸಾವಿನ ಸುದ್ದಿ ಕೇಳಿ ಸಂಬಂಧಿಕರು ಸ್ಪಂದನಾ ಆಸ್ಪತ್ರೆಗೆ ಮುತ್ತಿಗೆ ಹಾಕಿದ್ದು, ವೈದ್ಯರ ನಿರ್ಲಕ್ಷ್ಯವೇ ಜುಬೇದಾ ಅವರ ಸಾವಿಗೆ ಕಾರಣವೆಂದು ಆರೋಪಿಸಿದ್ದಾರೆ.
ಅಲ್ಲದೆ ಡಾ. ಕೆ.ಎಸ್. ರಾವ್ ಹಾಗೂ ಅವರ ಪತ್ನಿ ಡಾ. ನಾಗರತ್ನ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.
ವಿಷಯ ತಿಳಿದು ಕಾರ್ಕಳ ನಗರ ಠಾಣೆ ಪೊಲೀಸರು ಆಸ್ಪತ್ರೆಗೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ.
ಜುಬೇದಾ ಸ್ಪಂದನಾ ಆಸ್ಪತ್ರೆಯ ಬಳಿಯೇ ಬಾಡಿಗೆ ಮನೆಯಲ್ಲಿ ವಾಸವಿದ್ದರು.

