• Home  
  • ಕಾರ್ಕಳ – ಮೂಡುಬೆಳ್ಳೆ – ಉಡುಪಿ ಸರಕಾರಿ ಬಸ್ಸು ಪುನ: ಆರಂಭಕ್ಕೆ ಸಚಿವರಿಗೆ ಮನವಿ  (A request to the minister for re-starting of Karkala – Moodubella – Udupi government bus)
- help - ಸಂಘ, ಸಂಸ್ಥೆಗಳು

ಕಾರ್ಕಳ – ಮೂಡುಬೆಳ್ಳೆ – ಉಡುಪಿ ಸರಕಾರಿ ಬಸ್ಸು ಪುನ: ಆರಂಭಕ್ಕೆ ಸಚಿವರಿಗೆ ಮನವಿ  (A request to the minister for re-starting of Karkala – Moodubella – Udupi government bus)

Share: ಕಾರ್ಕಳ – ಮೂಡುಬೆಳ್ಳೆ – ಉಡುಪಿ ಸರಕಾರಿ ಬಸ್ಸು ಪುನ: ಆರಂಭಕ್ಕೆ ಸಚಿವರಿಗೆ ಮನವಿ  ಉಡುಪಿ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ (Karkala) ಕಾರ್ಕಳ : ಕಾರ್ಕಳ – ಬೈಲೂರು – ಕಣಂಜಾರ್ – ಪಳ್ಳಿ – ಮೂಡುಬೆಳ್ಳೆ – ಉಡುಪಿ ಮಾರ್ಗವಾಗಿ ಸಂಚರಿಸುತಿದ್ದ ಸರಕಾರಿ ಬಸ್ಸು ನಾಲ್ಕೈದು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಪುನರಾರಂಭಿಸಲು ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್  ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ […]

ಉಡುಪಿ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌

(Karkala) ಕಾರ್ಕಳ : ಕಾರ್ಕಳ – ಬೈಲೂರು – ಕಣಂಜಾರ್ – ಪಳ್ಳಿ – ಮೂಡುಬೆಳ್ಳೆ – ಉಡುಪಿ ಮಾರ್ಗವಾಗಿ ಸಂಚರಿಸುತಿದ್ದ ಸರಕಾರಿ ಬಸ್ಸು ನಾಲ್ಕೈದು ತಿಂಗಳಿನಿಂದ ಸ್ಥಗಿತಗೊಂಡಿದ್ದು, ಪುನರಾರಂಭಿಸಲು ಪಳ್ಳಿ – ನಿಂಜೂರು ಗ್ರಾಮೀಣ ಕಾಂಗ್ರೆಸ್  ಸಮಿತಿ ವತಿಯಿಂದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಮನವಿ ಸಲ್ಲಿಸಲಾಯಿತು.  

    ಸಾರಿಗೆ ಇಲಾಖೆಯು ಸರಕಾರಿ ಬಸ್ಸು ಸ್ಥಗಿತಗೊಳಿಸಿದ  ಪರಿಣಾಮ, ದಿನ ಕೆಲಸಕ್ಕೆ, ತಾಲೂಕು ಹಾಗೂ ಜಿಲ್ಲಾ ಕಚೇರಿಗೆ, ಆಸ್ಪತ್ರೆಗೆ, ದೇವಸ್ಥಾನಕ್ಕೆ, ಇನ್ನಿತರ ಖಾಸಗಿ ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ, ಇತರ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದೆ.

   ಇದರ ಬಗ್ಗೆ ತಾವು ಸಂಬಂಧಪಟ್ಟ ಇಲಾಖೆಗೆ ಬಸ್ಸು ಪುನರಾರಂಭಿಸಲು ಸೂಚನೆ ನೀಡಬೇಕು ಎಂದು ಮನವಿ ಸಲ್ಲಿಸಲಾಯಿತು.

    ಸಚಿವರು ತಮ್ಮ ಮನವಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಯನ್ನು ಅರ್ಥಮಾಡಿಕೊಂಡು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆ ನೀಡಿದರು.

   ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಉಪಾಧ್ಯಕ್ಷ ದಿನಕರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವನಾಥ ಭಂಡಾರಿ ನಿಂಜೂರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ವಿಲ್ಸನ್ ಲೋಬೊ ಪಳ್ಳಿ, ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಜಯಂತಿ ಆಚಾರ್ಯ ಪಳ್ಳಿ, ಕಾರ್ಕಳ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್ ಶೆಟ್ಟಿ ನಿಂಜೂರು, ಪಳ್ಳಿ ಗ್ರಾಮ ಪಂಚಾಯತ್ ಸದಸ್ಯ ವಿಜಯ ಎಮ್ ಶೆಟ್ಟಿ ಪಳ್ಳಿ, ಬೂತ್ ಕಮಿಟಿ ಅಧ್ಯಕ್ಷ ಪ್ರಶಾಂತ್  ಶೆಟ್ಟಿ ಪಳ್ಳಿ ಇನ್ನಿತರ ಗ್ರಾಮೀಣ ಕಾಂಗ್ರೆಸ್ ಮುಖಂಡರು, ಗ್ರಾಮೀಣ ಸಮಿತಿ ಸದಸ್ಯರು, ಪಳ್ಳಿ- ನಿಂಜೂರು ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.