• Home  
  • ಕಾರ್ಕಳ : ಹಟ್ಟಿಗೆ ಬೆಂಕಿ ತಗಲಿ ಕಂಬಳದ ಜೋಡಿ  ಕೋಣಗಳು ಸಾವು
- ಅಪಘಾತ

ಕಾರ್ಕಳ : ಹಟ್ಟಿಗೆ ಬೆಂಕಿ ತಗಲಿ ಕಂಬಳದ ಜೋಡಿ  ಕೋಣಗಳು ಸಾವು

Share:  ಕಾರ್ಕಳ :  ಹಟ್ಟಿಗೆ ಬೆಂಕಿ ತಗಲಿ ಕಂಬಳದ ಜೋಡಿ ಕೋಣಗಳು ಸಾವು  (Karkala) ಕಾರ್ಕಳ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಬೆಂಕಿ ತಗುಲಿ ಜೋಡಿ ಕಂಬಳದ ಕೋಣಗಳು ಸುಟ್ಟು ಕರಕಲಾದ ದುರ್ಘಟನೆ ಮೇ 30ರ ರಾತ್ರಿ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಸಂಭವಿಸಿದೆ.  2022-23ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಚಾಂಪಿಯನ್ ಪಡೆದ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು. ಕಂಬಳದಲ್ಲಿ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರು ಹೆಸರು […]

 (Karkala) ಕಾರ್ಕಳ : ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಬೆಂಕಿ ತಗುಲಿ ಜೋಡಿ ಕಂಬಳದ ಕೋಣಗಳು ಸುಟ್ಟು ಕರಕಲಾದ ದುರ್ಘಟನೆ ಮೇ 30ರ ರಾತ್ರಿ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ಸಂಭವಿಸಿದೆ.

 2022-23ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಚಾಂಪಿಯನ್ ಪಡೆದ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಸಾವಿಗೀಡಾದ ಕೋಣಗಳು.

ಕಂಬಳದಲ್ಲಿ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರು ಹೆಸರು ಪಡೆದವರು. ಅವರ ಕಂಬಳ ಕೋಣಗಳು ಕಂಬಳ ವಿಭಾಗದಎಲ್ಲಾ ಸ್ಪರ್ಧೆಗಳಲ್ಲಿ ಮೆಡಲ್‌ ಗಳಿಸಿದೆ. ಇಂದು ಮೃತಪಟ್ಟ ಅಪ್ಪು ಮತ್ತು ತೋನ್ಸೆ ಕೋಣಗಳು ಕಂಬಳದಲ್ಲಿ ಖ್ಯಾತಿ ಪಡೆದಿದೆ.

 ಕಂಬಳ ಕೋಣಗಳ ಸಾವಿನಿಂದ ಕಂಬಳ ಪ್ರಿಯರಲ್ಲಿ ದು:ಖ ಮಡುಗಟ್ಟಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.