• Home  
  •  ಕೀಳಂಜೆ ದೇವಸ್ಥಾನ : ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆ ಸಮರ್ಪಣೆ (Kilanje Temple: Mushti Kanike)
- Uncategorised

 ಕೀಳಂಜೆ ದೇವಸ್ಥಾನ : ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆ ಸಮರ್ಪಣೆ (Kilanje Temple: Mushti Kanike)

Share: ಕೀಳಂಜೆ ದೇವಸ್ಥಾನ : ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆ ಸಮರ್ಪಣೆ    (Udupi) ಉಡುಪಿ: ಪುರಾಣ ಪ್ರಸಿದ್ಧ 8 ನೇ ಶತಮಾನದ ಗಾಲವ ಋಷಿ  ತಪಸ್ಸು ಮಾಡಿದ್ದ ಕೀಳಂಜೆ  ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಪ್ರಾಯಶ್ಚಿತ್ತ ಹೋಮಾದಿಗಳು ಉಡುಪಿ  ಪೇಜಾವರ  ಮಠದ  ಶ್ರೀ ಶ್ರೀ  ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ನೆರವೇರಿತು.   ಸೋಮವಾರ ಬೆಳಿಗ್ಗೆ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಭದ್ರದೀಪ ಸಮರ್ಪಣೆ, ಮುಷ್ಟಿ ಕಾಣಿಕೆ […]

ಕೀಳಂಜೆ ದೇವಸ್ಥಾನ : ಜೀರ್ಣೋದ್ಧಾರ ಪ್ರಯುಕ್ತ ಮುಷ್ಟಿ ಕಾಣಿಕೆ ಸಮರ್ಪಣೆ  

 (Udupi) ಉಡುಪಿ: ಪುರಾಣ ಪ್ರಸಿದ್ಧ 8 ನೇ ಶತಮಾನದ ಗಾಲವ ಋಷಿ  ತಪಸ್ಸು ಮಾಡಿದ್ದ ಕೀಳಂಜೆ  ಶ್ರೀ ಮಹಾವಿಷ್ಣು ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಹರಿಹರ ತೀರ್ಥದ ಸಮಗ್ರ ಜೀರ್ಣೋದ್ಧಾರ ಪ್ರಯುಕ್ತ ಪ್ರಾಯಶ್ಚಿತ್ತ ಹೋಮಾದಿಗಳು ಉಡುಪಿ  ಪೇಜಾವರ  ಮಠದ  ಶ್ರೀ ಶ್ರೀ  ವಿಶ್ವಪ್ರಸನ್ನ ತೀರ್ಥ ಶ್ರೀ ಪಾದಂಗಳವರ ಆಶೀರ್ವಾದದೊಂದಿಗೆ ನೆರವೇರಿತು.

  ಸೋಮವಾರ ಬೆಳಿಗ್ಗೆ ಗಂಟೆಗೆ ಸಾಮೂಹಿಕ ಪ್ರಾರ್ಥನೆ, ಗಣಹೋಮ, ಭದ್ರದೀಪ ಸಮರ್ಪಣೆ, ಮುಷ್ಟಿ ಕಾಣಿಕೆ

ಸಮರ್ಪಣೆ ಹಾಗೂ ಇತರ  ಧಾರ್ಮಿಕ  ವಿಧಿಗಳೊಂದಿಗೆ ಪ್ರಾರಂಭಗೊಂಡಿತು.

ಅಂದು  ಜೈನ  ಮುನಿ  ಗಾಲವ  ಋಷಿ  ತಪಸ್ಸು  ಮಾಡಿದ್ದ ಗುಹೆ – “ದಾಸನಗುಳಿ “ಎಂಬಲ್ಲಿ ಊರಿನ  ಸರ್ವ ಭಕ್ತರು  ಸೇರಿ ದೀಪ ಪ್ರಜ್ವಲಿಸಿ ಸಾಮೂಹಿಕ ಪ್ರಾರ್ಥನೆ  ಸಲ್ಲಿಸಿದರು.

  ಮಂಗಳವಾರದಂದು ಬೆಳಿಗ್ಗೆ ನವಕ ಪ್ರಧಾನ ಹೋಮ, ನವಗ್ರಹ  ಶಾಂತಿ, ಮಧ್ಯಾಹ್ನ ಮಹಾಅನ್ನ ಸಂತರ್ಪಣೆ, ಸಂಜೆ ದುರ್ಗಾ ನಮಸ್ಕಾರ ಪೂಜೆ  ನೆರವೇರಿತು.

 ಹಾಗೆಯೇ 31.01.2024 ರ ಬುಧವಾರ ಸರ್ಪ ಸಂಸ್ಕಾರ ಕ್ರಿಯೆಯ ಮಂಗಳ, ಆಶ್ಲೇಷ  ಬಲಿ ಹಾಗೂ ಪ್ರಸಾದ  ವಿತರಣೆ ನಡೆಯಲಿದೆ  ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.