ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ
ದುರ್ಗಾ ಮಿತ್ರ ವೃಂದದ ನೇತೃತ್ವದಲ್ಲಿ ವಿವಿಧ ಭಜನೆಗಳ ಮಂಡಳಿಗಳಿಂದ ಕುಣಿತ ಭಜನೆ
(Kunjooru) ಕುಂಜೂರು : ಪುರಾಣ ಪ್ರಸಿದ್ಧ ಕುಂಜೂರು ಶ್ರೀ ದುರ್ಗಾ ದೇವಸ್ಥಾನದಲ್ಲಿ ಸೆಪ್ಟಂಬರ್ 22 ರಿಂದ ಅಕ್ಟೋಬರ್ 1 ವರೆಗೆ ಶರನ್ನಾವರಾತ್ರಿ ಮಹೋತ್ಸವ ನಡೆಯಲಿದೆ.
ದೇವಳದಲ್ಲಿ ಉಷಾ ಕಾಲ ಪೂಜೆ, ವೇದಪಾರಾಯಣ ಅಲಂಕಾರ ಪೂಜೆ ಮಹಾ ಅನ್ನ ಸಂತರ್ಪಣೆ ನಡೆಯುತ್ತಿದೆ.
ಪ್ರತಿ ದಿನ ಸಂಜೆ ದುರ್ಗಾ ಮಿತ್ರ ವೃಂದದ ನೇತೃತ್ವದಲ್ಲಿ ವಿವಿಧ ಭಜನೆಗಳ ಮಂಡಳಿಗಳಿಂದ ಕುಣಿತ ಭಜನೆ ನೆರವೇರಲಿದೆ.
ಪ್ರತಿದಿನ ಹೂವಿನ ಪೂಜೆ ಅಲಂಕಾರ ಸೇವೆ ನಡೆಯಲಿದೆ.
ಶ್ರೀ ದೇವಳದಲ್ಲಿ ಅಕ್ಟೋಬರ್ 1ರ ಬುಧವಾರ ಮಹಾ ನವಮಿಯಂದು ಮಹಾಚಂಡಿಕಾಯಾಗ, ಮಹಾ ಅನ್ನಸಂತರ್ಪಣೆ ನೆರವೇರಲಿದೆ ಎಂದು ದೇವಳದ ಆಡಳಿತ ಮಂಡಳಿ ತಿಳಿಸಿದೆ.

