• Home  
  • ಕುಂದಾಪುರ : ಆಹಾರ ಅರಸಿ ಬಂದ ಅಪರೂಪದ ಕರಿಚಿರತೆ ಬಾವಿಗೆ, ರಕ್ಷಣಾ ಕಾರ್ಯಾಚರಣೆ (Kundapura: Resque operation of Black Cheethah)
- PROBLEMS

ಕುಂದಾಪುರ : ಆಹಾರ ಅರಸಿ ಬಂದ ಅಪರೂಪದ ಕರಿಚಿರತೆ ಬಾವಿಗೆ, ರಕ್ಷಣಾ ಕಾರ್ಯಾಚರಣೆ (Kundapura: Resque operation of Black Cheethah)

Share:   ಕುಂದಾಪುರ : ಆಹಾರ ಅರಸಿ ಬಂದ ಅಪರೂಪದ ಕರಿಚಿರತೆ ಬಾವಿಗೆ ; ರಕ್ಷಣಾ ಕಾರ್ಯಾಚರಣೆ  (Kundapura) ಕುಂದಾಪುರ: ಬೇಟೆ ಅರಸಿ ಬಂದ ಕರಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ನಡೆದಿದೆ.  ಸ್ಥಳೀಯ ಕೃಷ್ಣ ನಾಯ್ಕ ಎಂಬವರ ಜಾಗ ದಲ್ಲಿರುವ ತೆರೆದ ಬಾವಿಗೆ ಶುಕ್ರವಾರ ತಡರಾತ್ರಿ ಕರಿ ಚಿರತೆ ಬಿದ್ದಿತ್ತು.  ಚಿರತೆ ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.   ಸ್ಥಳಕ್ಕೆ ಆಗಮಿಸಿದ ಅರಣ್ಯ […]

  ಕುಂದಾಪುರ : ಆಹಾರ ಅರಸಿ ಬಂದ ಅಪರೂಪದ ಕರಿಚಿರತೆ ಬಾವಿಗೆ ; ರಕ್ಷಣಾ ಕಾರ್ಯಾಚರಣೆ

 (Kundapura) ಕುಂದಾಪುರ: ಬೇಟೆ ಅರಸಿ ಬಂದ ಕರಿ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಮಂದರ್ತಿ ಸಮೀಪದ ಶಿರೂರು ಹೆಮ್ಮಣಿಕೆ ಎಂಬಲ್ಲಿ ನಡೆದಿದೆ.

 ಸ್ಥಳೀಯ ಕೃಷ್ಣ ನಾಯ್ಕ ಎಂಬವರ ಜಾಗ ದಲ್ಲಿರುವ ತೆರೆದ ಬಾವಿಗೆ ಶುಕ್ರವಾರ ತಡರಾತ್ರಿ ಕರಿ ಚಿರತೆ ಬಿದ್ದಿತ್ತು.  ಚಿರತೆ ಬಿದ್ದ ಬಗ್ಗೆ ತಿಳಿದ ತಕ್ಷಣ ಶೇಖರ್ ಶೆಟ್ಟಿ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು.

  ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ಬಾವಿ ಸುತ್ತ ಬಲೆ ಹಾಕಿ ಕರಿ ಚಿರತೆ ರಕ್ಷಣೆಗೆ ಮುಂದಾದರು. ಆದರೆ ಕಾರ್ಯಾಚರಣೆ ವೇಳೆ ಚಿರತೆ ಬಲೆಯಿಂದ ಸರಿದು ಸಮೀಪದ ತೋಟದೊಳಕ್ಕೆ ಓಡಿ ಹೋಗಿದೆ.

 ಈ ಮೂಲಕ ಕರಿ ಚಿರತೆ ಸುರಕ್ಷಿತವಾಗಿ ಬಾವಿಯಿಂದ ಮೇಲಕ್ಕೆ ಬಂದು ಕಾಡು ಪ್ರದೇಶ ಸೇರಿದೆ ಎಂದು ತಿಳಿದುಬಂದಿದೆ.

 ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ಪೂಜಾರಿ ನಿರ್ದೇಶನದಲ್ಲಿ ಶಂಕರ ನಾರಾಯಣ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ, ಉಪವಲಯ ಅರಣ್ಯಾಧಿ ಕಾರಿ ನಾಗರಾಜ ಮತ್ತು ಸಿಬ್ಬಂದಿ, ಸ್ಥಳೀಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.