ಕುತ್ತ್ಯಾರು ಆನೆಗುಂದಿ ಮಠಕ್ಕೆ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ. ಸನ್ಮಾನ.
ಉಡುಪಿ\ಕುತ್ಯಾರು: ಕುತ್ತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಕ್ಕೆ ಶುಕ್ರವಾರ ಮಧ್ಯಾಹ್ನ ಉಡುಪಿ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ ನೀಡಿ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರಿಂದ ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ವಿಶ್ವಕರ್ಮ ಸಮಾಜವು ಉನ್ನತ ಮಟ್ಟದಲ್ಲಿದ್ದು ಪ್ರಪಂಚದ ಸೃಷ್ಟಿಗೆ ಕಾರಣಕರ್ತರಾಗಿದ್ದಾರೆ. ಅವರು ಯಾವತ್ತೂ ಹಿಂದುಳಿದವರಲ್ಲ ಎಂದರು.
ಕಾಳಹಸ್ತೇಂದ್ರ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ನಾವು ಮುಂದಾದರೂ, ಆರ್ಥಿಕವಾಗಿ ನಾವು ಹಿಂದುಳಿದಿದ್ದೇವೆ ನಮ್ಮ ಸಮಾಜವನ್ನು ಸರ್ಕಾರ ಮೇಲೆತ್ತಬೇಕಾಗಿದೆ ಎಂದರು.
ಈ ಸಂದರ್ಭ ಶ್ರೀ ಮಠದ ವತಿಯಿಂದ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಗಂಗಾಧರ ಆಚಾರ್ಯ, ಅಧ್ಯಕ್ಷ ವಿ ಶ್ರೀಧರ್ ಆಚಾರ್ಯ, ಕಾರ್ಯದರ್ಶಿ ಲೊಕೇಶ್ಎಂ ಬಿ. ಆಚಾರ್ಯ, ಕಾಪು ತಹಸಿಲ್ದಾರ್ ನಾಗರಾಜ್ ನಾಯ್ಗಡ, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ವಸಂತ್ ಬೆರ್ನಾಡಿ, ನವೀನ್ ಚಂದ್ರ ಜೆ ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ ಕಾರ್ಕಳ, ಸಂಧ್ಯಾ ಆಚಾರ್ಯ, ಕೋಶಾಧಿಕಾರಿ ಅರವಿಂದ್ ಆಚಾರ್ಯ, ಹಾಗೂ ಪದಾಧಿಕಾರಿಗಳು ಸಮಿತಿ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.
