ಕುಮಟಾ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠ ಮತ್ತು ರಾಷ್ಟ್ರೀಯ ಈಡಿಗ ಮಹಾಮಂಡಳಿಯ ಸಂಯುಕ್ತ ಆಶ್ರಯದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ನಾಮಧಾರಿ ಸಭಾಭವನದಲ್ಲಿ ನಡೆಯಿತು.
ಈಡಿಗ ಬಿಲ್ಲವ ನಾಮಧಾರಿ ಚಿಂತನ ಸಭೆ ಶನಿವಾರ ಸಂಜೆ ಪ್ರಾರಂಭ ಗೊಂಡಿತು.
ಪರಮಪೂಜ್ಯ ಡಾಕ್ಟರ್ ಶ್ರೀ ಪ್ರಣವಾನಂದ ಸ್ವಾಮೀಜಿ ರವರು ಹಳದಿ ಬಾವುಟವನ್ನು ಧ್ವಜಾರೋಹಣ ಮಾಡಿದರು.
ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪೂಜಾರಿ ಉದ್ಘಾಟನೆ ನೆರವೇರಿಸಿದರು.
ಸಭೆಯಲ್ಲಿ ನಾಮಧಾರಿ ಸಮಾಜದ ನಾಯಕರುಗಳು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಎರಡು ದಿನಗಳ ಕಾಲದ ಈಡಿಗ ಬಿಲ್ಲವ ನಾಮಧಾರಿ ಸಮಾಜದ ಚಿಂತನ ಸಭೆ ಯಲ್ಲಿ ರಾಜಕೀಯ ಆಧ್ಯಾತ್ಮಿಕ ಮತ್ತು ಸಂಘಟನೆ ಮಾಡುವ ವಿಷಯಗಳು ಚರ್ಚೆಗೆ ಬರಲಿದೆ.
ಸಭೆಯಲ್ಲಿ ವಿವಿಧ ವಿಷಯದ ಬಗ್ಗೆ ಸಮಾಜದ ಮುಖಂಡರುಗಳಾದ ಜೆಡಿ ನಾಯ್ಕ್, ರವೀಂದ್ರ ನಾಯ್ಕ್, , ಶ್ರೀ ಎಂಎನ್ ನಾಯ್ಕ್, ವೀರಭದ್ರ ನಾಯ್ಕ್, ಹೆಚ್ ವೈ ಆನಂದಪ್ಪ, ಮತ್ತು ಸಂತೋಷ್ ಕುಮಾರ್, ಕರ್ನಾಟಕ ರಾಜ್ಯ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯಾಧ್ಯಕ್ಷ ವಸಂತ್ ನಾಯ್ಕ್, ಸಚಿನ್ ನಾಯ್ಕ್, ಗುರುರಾಜು, ಜನಾರ್ದನ್, ಮಂಚೇಗೌಡ, ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಕಾರ್ಯದರ್ಶಿಗಳಾದ ರವಿಕುಮಾರ್ ಮುಖ್ಯ ಅತಿಥಿಯಾಗಿದ್ದರು.
ಸಭೆಯಲ್ಲಿ ನಾಲ್ಕು ಜಿಲ್ಲೆಗಳಾದ ಶಿವಮೊಗ್ಗ, ಉಡುಪಿ, ಕಾರವಾರ ಮತ್ತು ದ.ಕ ಜಿಲ್ಲೆಯ 150 ಪ್ರಮುಖ ಮುಖಂಡರು ಭಾಗವಹಿಸಿದ್ದಾರೆ. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಮಹಾನಗರ ಪಾಲಿಕೆ, ಎಂಪಿ, ಚುನಾವಣೆಗಳಲ್ಲಿ ಸಮಾಜ ತೆಗೆದುಕೊಳ್ಳಬೇಕಾದ ನಿಲುವುಗಳ ಬಗ್ಗೆ ಕೂಡ ಚರ್ಚೆ ಮಾಡಲಾಯಿತು

