• Home  
  • ಕೇರಳ ಸಿಎಂ ವಿ.ಡಿ. ಸತೀಶನ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ (Kerala CM V.D. Satheeshan visits Kollur Mookambika Temple)
- ಧಾರ್ಮಿಕ

ಕೇರಳ ಸಿಎಂ ವಿ.ಡಿ. ಸತೀಶನ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ (Kerala CM V.D. Satheeshan visits Kollur Mookambika Temple)

Share: ಕೇರಳ ಸಿಎಂ ವಿ.ಡಿ. ಸತೀಶನ್ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ. ದೇವಳದ ಆಡಳಿತ ಮಂಡಳಿಯಿಂದ ವಿಶೇಷ ಗೌರವ ಸ್ವೀಕರಿಸಿದ ಸಿಎಂ ಸತೀಶನ್    (Koluru): ಕೊಲ್ಲೂರು:  ಕೇರಳ ಸಿಎಂ ವಿ.ಡಿ. ಸತೀಶನ್   ಶನಿವಾರ ಮುಂಜಾನೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.   Z-ಪ್ಲಸ್ ಭದ್ರತೆಯಲ್ಲಿ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು.  ಶುಕ್ರವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಸಿಎಂ ಸತೀಶನ್‌, ಮುಂಜಾನೆಯೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.   […]

(Koluru): ಕೊಲ್ಲೂರು:  ಕೇರಳ ಸಿಎಂ ವಿ.ಡಿ. ಸತೀಶನ್   ಶನಿವಾರ ಮುಂಜಾನೆ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ಭೇಟಿ ನೀಡಿ, ದೇವಿಯ ದರ್ಶನ ಪಡೆದರು.

  Z-ಪ್ಲಸ್ ಭದ್ರತೆಯಲ್ಲಿ ಅವರು ದೇವಸ್ಥಾನಕ್ಕೆ ಆಗಮಿಸಿದ್ದರು.

 ಶುಕ್ರವಾರ ರಾತ್ರಿ ಕೊಲ್ಲೂರಿಗೆ ಆಗಮಿಸಿದ ಸಿಎಂ ಸತೀಶನ್‌, ಮುಂಜಾನೆಯೇ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದರು.

  ಬಳಿಕ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅವರಿಗೆ ಗೌರವ ಸಲ್ಲಿಸಲಾಯಿತು.

  ಸತೀಶನ್ ಅವರು ಸಿಎಂ ಆದ ಬಳಿಕ ಮೊದಲ ಭೇಟಿ ಇದಾಗಿದೆ. ಅವರು ಕೊಲ್ಲೂರು ಮೂಕಾಂಬಿಕೆಯ ಅಪಾರ ಭಕ್ತರಾಗಿದ್ದಾರೆ.

   ಪೂಜೆ ಬಳಿಕ ಮಂಗಳೂರು ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಸತೀಶನ್‌ ಅವರು ಆಗಮಿಸಿದ್ದ ಹಿನ್ನೆಲೆ ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

 ದೇವಳದ ಆಡಳಿತಾಧಿಕಾರಿ ಪ್ರಶಾಂತ್‌ ಶೆಟ್ಟಿ ಸಹಿತ ಆಡಳಿತ ಮಂಡಳಿಯ ಸದಸ್ಯರು, ದೇವಳದ ಅರ್ಚಕರು ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.