• Home  
  • ಕೊಡವೂರು : ಅಪರಾಧ ತಡೆ ಜಾಗೃತಿ ಕಾರ್ಯಕ್ರಮ (Kodavoor: Crime prevention awareness program)
- social service - ಅಪರಾಧ

ಕೊಡವೂರು : ಅಪರಾಧ ತಡೆ ಜಾಗೃತಿ ಕಾರ್ಯಕ್ರಮ (Kodavoor: Crime prevention awareness program)

Share: ಕೊಡವೂರು : ಅಪರಾಧ ತಡೆ ಜಾಗೃತಿ ಕಾರ್ಯಕ್ರಮ ಕೊಡವೂರು ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮ     (Kodavooru) ಕೊಡವೂರು:  ಹಳೆವಿದ್ಯಾರ್ಥಿ ಸಂಘ, ಯುವಕ ಸಂಘ ಕೊಡವೂರು ಹಾಗೂ ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವರ ವತಿಯಿಂದ ಆರಕ್ಷಕ ಠಾಣೆ ಮಲ್ಪೆ ಇವರ ಸಹಯೋಗದಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ  ಕೊಡವೂರು ಶಾಲಾ ಆವರಣದಲ್ಲಿ ಜರುಗಿತು.     ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು ಮಾತನಾಡಿ, ಕಾನೂನಿನ ಬಗ್ಗೆ ಅರಿವು ಹೊಂದಿರುವುದು ಜವಾಬ್ದಾರಿಯುತ […]

   (Kodavooru) ಕೊಡವೂರು:  ಹಳೆವಿದ್ಯಾರ್ಥಿ ಸಂಘ, ಯುವಕ ಸಂಘ ಕೊಡವೂರು ಹಾಗೂ ಕೊಡವೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇವರ ವತಿಯಿಂದ ಆರಕ್ಷಕ ಠಾಣೆ ಮಲ್ಪೆ ಇವರ ಸಹಯೋಗದಲ್ಲಿ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ  ಕೊಡವೂರು ಶಾಲಾ ಆವರಣದಲ್ಲಿ ಜರುಗಿತು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪೊಲೀಸ್ ಉಪಾಧೀಕ್ಷಕ ಡಿ.ಟಿ. ಪ್ರಭು ಮಾತನಾಡಿ, ಕಾನೂನಿನ ಬಗ್ಗೆ ಅರಿವು ಹೊಂದಿರುವುದು ಜವಾಬ್ದಾರಿಯುತ ನಾಗರಿಕರ ಕರ್ತವ್ಯ. ಇದೀಗ ಯುವ ಜನತೆ ಮಾದಕದ್ರವ್ಯ  ಸೇವನೆಗೆ ಬಲಿಯಾಗುತ್ತಿರುವುದು ದೊಡ್ಡ ಸಾಮಾಜಿಕ ದುರಂತ. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಹಾಗೆಯೇ ರಸ್ತೆ ಅಪಘಾತಗಳು ಹೆಚ್ಚುತ್ತಿರುವ ನಿಟ್ಟಿನಲ್ಲಿ ನಾವೆಲ್ಲರೂ ಎಚ್ಚರವಹಿಸಬೇಕಾಗಿದೆ ಎಂದರು.

  ಬಹುರೂಪಿ ಸೈಬರ್ ಅಪರಾಧಗಳಿಗೆ  ಬಹಳಷ್ಟು ವಿದ್ಯಾವಂತರೇ ಬಲಿಪಶುಗಳಾಗುತ್ತಿದ್ದು, ಯಾವುದೇ ಆಮಿಷ, ಬೆದರಿಕೆಗಳಿಗೆ ಬಲಿಯಾಗದೆ ಸೈಬರ್ ಅಪರಾಧಗಳ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕೆಂದರು.

   ಇನ್ನೋರ್ವ ಮುಖ್ಯ ಅತಿಥಿ ಮಲ್ಪೆಯ ಪೊಲೀಸ್ ವೃತ್ತ ನಿರೀಕ್ಷಕ ರಾಮಚಂದ್ರ ನಾಯಕ್ ಮಾತನಾಡಿ, ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣಗಳಗಳನ್ನು ಉಪಯೋಗಿಸುವ ಸಂದರ್ಭದಲ್ಲಿ ಎಚ್ಚರ ವಹಿಸಬೇಕೆಂದರು.

     ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ, ವಕೀಲ ಪ್ರವೀಣ್ ಎಂ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನರ ಹಕ್ಕುಗಳ ರಕ್ಷಣೆಗಿರುವ ಹಲವಾರು ಕಾನೂನು, ಕಾಯ್ದೆಗಳು ದುರುಪಯೋಗವಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ವಿಶೇಷ ಗಮನ ಹರಿಸಬೇಕೆಂದರು.

   ಕೊಡವೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ. ನಾರಾಯಣ ಬಲ್ಲಾಳ್, ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ  ಟಿ.ರಾಘವೇಂದ್ರ ರಾವ್ ಮಾಜಿ ನಗರಸಭಾ ಸದಸ್ಯ ವಿಜಯ ಕೊಡವೂರು,  ಸ್ಥಳೀಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಪೈ, ಶ್ರೀ ಶಂಕರ ನಾರಾಯಣ ಶಿಕ್ಷಣ ಪ್ರತಿಷ್ಟಾನದ ಸದಸ್ಯೆ ಸುಧಾ ನಾರಾಯಣ  ಶೆಟ್ಟಿ, ಕೊಡವೂರು ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಉಪಸ್ಥಿತರಿದ್ದರು.

   ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಸ್ವಾಗತಿಸಿ, ನಿರೂಪಿಸಿದರು. ಯುವಕ ಸಂಘದ ಅಧ್ಯಕ್ಷ ದೀಕ್ಷಿತ್ ದೇವಾಡಿಗ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.