ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು ಆಯ್ಕೆ
ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಆಯ್ಕೆ ಬಗ್ಗೆ ಪ್ರಕಟಣೆ
(Kodavooru) ಕೊಡವೂರು :ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ ಕೊಡವೂರು ಇವರನ್ನು ವ್ಯವಸ್ಥಾಪನ ಸಮಿತಿ ಆಯ್ಕೆ ಮಾಡಿ ನೇಮಕ ಮಾಡಿದ್ದಾರೆ.
ಈ ಹಿಂದೆ ಇದ್ದ ಕೆ. ಗೋವಿಂದ ಐತಾಳ್ ಅವರು ಸ್ವಯಂ ನಿವೃತ್ತಿ ಘೋಷಿಸಿದ ಕಾರಣ, ಆ ಹುದ್ದೆಗೆ ಜನಾರ್ದನ ಕೊಡವೂರು ಅವರನ್ನು ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

