ಕೋಟೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷರಾಗಿ ಪ್ರಮೀಳಾ ಜತ್ತನ್ನ, ಉಪಾಧ್ಯಕ್ಷರಾಗಿ ಯೋಗೀಶ್ ಆಯ್ಕೆ
ಕೋಟೆ: ಕಾಪು ತಾಲೂಕು ಕೋಟೆ ಗ್ರಾಮ ಪಂಚಾಯತ್‌ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪ್ರಮೀಳಾ ಜತ್ತನ್ನ ಹಾಗೂ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಯೋಗೀಶ್ ಆಯ್ಕೆಯಾಗಿದ್ದಾರೆ.
೧೫ ಸದಸ್ಯ ಬಲದ ಕೋಟೆ ಗ್ರಾ. ಪಂ. ನಲ್ಲಿ ೭ ಬಿಜೆಪಿ ಬೆಂಬಲಿತ, ೮ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್ ಬೆಂಬಲಿತ ಸದಸ್ಯೆಯೋರ್ವರು ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದ ಕಾರಣ ಅಧಿಕಾರ ಬಿಜೆಪಿಗೆ ಒಲಿಯಬೇಕಿತ್ತು.
ಆದರೆ ಬಿಜೆಪಿ ಬೆಂಬಲಿತ ಸದಸ್ಯರೊಬ್ಬರು ಅಧ್ಯಕ್ಷರ ಮತಕ್ಕೆ ಅಡ್ಡ ಮತದಾನ ಮಾಡಿದ ಪರಿಣಾಮ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಿಕಟಪೂರ್ವ ಉಪಾಧ್ಯಕ್ಷೆ ಪ್ರಮೀಳಾ ಜತ್ತನ್ನ ಅವರು ಬಿಜೆಪಿಯ ಪ್ರೇಮಾ ಕುಂದರ್ ವಿರುದ್ದ ೧ ಮತದ ಅಂತರದಿAದ ಗೆದ್ದು ಅಧ್ಯಕ್ಷ ಗಾಧಿಗೇರಿದರು.
ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಯೋಗೀಶ್ ಕಾಂಗ್ರೆಸ್ ಬೆಂಬಲಿತ ಶಾಲಿನಿ ವಿರುದ್ಧ ೧ ಮತದ ಅಂತರದಿAದ ಜಯ ಪಡೆದುಕೊಂಡರು.
ಅಕ್ಷರ ದಾಸೋಹ ಇಲಾಖೆಯ ಸಹಾಯ ನಿರ್ದೇಶಕರು ವಿವೇಕಾನಂದ ವಿ ಗಾಂವ್ಕರ್ ಜುಣಾವಣಾಕಾರಿಯಾಗಿದ್ದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ. ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್, ಗ್ರಾ.ಪಂ ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್ ಅಂಬಾಡಿ, ಮಾಜಿ ಅಧ್ಯಕ್ಷರುಗಳಾದ ದಯಾನಂದ ವಿ ಬಂಗೇರ, ಪ್ರಶಾಂತ್ ಜತ್ತನ್ನ, ಮಾಜಿ ಉಪಾಧ್ಯಕ್ಷ ಗಣೇಶ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.

