• Home  
  •  ಕೋಟ: ಗೊಬ್ಬರಬೆಟ್ಟು ನಿವಾಸಿ ಅಕ್ಷಯ ನಾಪತ್ತೆ ಪ್ರಕರಣ, ಮೊಬೈಲ್ ಪತ್ತೆ (Kota Gobbarabettu resident Akshaya missing: Mobile found)
- ಅಪರಾಧ

 ಕೋಟ: ಗೊಬ್ಬರಬೆಟ್ಟು ನಿವಾಸಿ ಅಕ್ಷಯ ನಾಪತ್ತೆ ಪ್ರಕರಣ, ಮೊಬೈಲ್ ಪತ್ತೆ (Kota Gobbarabettu resident Akshaya missing: Mobile found)

Share: ಕೋಟ: ಗೊಬ್ಬರಬೆಟ್ಟು ನಿವಾಸಿ ಅಕ್ಷಯ ನಾಪತ್ತೆ ಪ್ರಕರಣ, ಮೊಬೈಲ್ ಪತ್ತೆ (Kota) ಕೋಟ:  ಕೋಟತಟ್ಟು ಗ್ರಾ. ಪಂ.  ವ್ಯಾಪ್ತಿಯ ಗೊಬ್ಬರಬೆಟ್ಟು ನಿವಾಸಿ ಅಕ್ಷಯ್ (32) ಇವರು ಮೇ. 21ರಿಂದ ಕಾಣೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಷಯ ರವರು ಕೋಟದ ಖಾಸಗಿ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮೇ. 21ರಂದು ರಜೆ ಮಾಡಿ ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೋದವರು ಮಧ್ಯಾಹ್ನ 1 ಗಂಟೆಗೆ ಅವರ ಪತ್ನಿಗೆ ಕೋಟದಲ್ಲಿ ಕಾಣಸಿಕ್ಕಿದ್ದು , […]

ಕೋಟ: ಗೊಬ್ಬರಬೆಟ್ಟು ನಿವಾಸಿ ಅಕ್ಷಯ ನಾಪತ್ತೆ ಪ್ರಕರಣ, ಮೊಬೈಲ್ ಪತ್ತೆ

(Kota) ಕೋಟ:  ಕೋಟತಟ್ಟು ಗ್ರಾ. ಪಂ.  ವ್ಯಾಪ್ತಿಯ ಗೊಬ್ಬರಬೆಟ್ಟು ನಿವಾಸಿ ಅಕ್ಷಯ್ (32) ಇವರು ಮೇ. 21ರಿಂದ ಕಾಣೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಕ್ಷಯ ರವರು ಕೋಟದ ಖಾಸಗಿ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮೇ. 21ರಂದು ರಜೆ ಮಾಡಿ ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೋದವರು ಮಧ್ಯಾಹ್ನ 1 ಗಂಟೆಗೆ ಅವರ ಪತ್ನಿಗೆ ಕೋಟದಲ್ಲಿ ಕಾಣಸಿಕ್ಕಿದ್ದು , ಸ್ವಲ್ಪ ಕೆಲಸ ಇದೆ ಆಮೇಲೆ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಸಹ ಮನೆಗೆ ಬಾರದೇ ಇರುವುದರಿಂದ ಎಲ್ಲಾ ಭಾಗಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬುಧವಾರ ಮೊಬೈಲ್ ಪತ್ತೆ:  ಪೊಲೀಸರು ಅಕ್ಷಯ್ ಅವರ ಮೊಬೈಲ್  ಟವರ್ ಲೊಕೇಶನ್ ಪರಿಶೀಲಿಸಿದಾಗ ಕುಂದಾಪುರ ತಾಲೂಕಿನ ಕೊರವಡಿ ಬಳಿ ತೋರಿಸಿದ್ದು, ಹಾಗೆ ಪೊಲೀಸರು ಹುಡುಕಾಡಿದಾಗ ಕೊರವಡಿ ಬಳಿ ಮುಳ್ಳಿನ ಪೊದೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಕೋಟ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 ಈ ವ್ಯಕ್ತಿ ಕಂಡು ಬಂದಲ್ಲಿ ಈ 9686184490, 9964143822 ಮೊಬೈಲ್ ನಂಬರ್ ಗೆ ತಿಳಿಸಬೇಕಾಗಿ ವಿನಂತಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.