• Home  
  • ಕೋಟ ಪಂಚವರ್ಣ ಸಂಸ್ಥೆಯಿಂದ ಅಂಬೇಡ್ಕರ್ ಜಯಂತೋತ್ಸವ (Ambedkar Jayanthotsav by Kota Panchavarna Organization)
- ಪ್ರಚಲಿತ

ಕೋಟ ಪಂಚವರ್ಣ ಸಂಸ್ಥೆಯಿಂದ ಅಂಬೇಡ್ಕರ್ ಜಯಂತೋತ್ಸವ (Ambedkar Jayanthotsav by Kota Panchavarna Organization)

Share: ಕೋಟ ಪಂಚವರ್ಣ ಸಂಸ್ಥೆಯಿಂದ ಅಂಬೇಡ್ಕರ್ ಜಯಂತೋತ್ಸವ ಅಂಬೇಡ್ಕರ್ ಶಿಕ್ಷಣ ಕ್ರಾಂತಿಯು ಕೆಳ, ಮಧ್ಯಮ ವರ್ಗದವರ ಕಣ್ಣು ತೆರೆಸಿದೆ -ಹೆರಿಯ ಮಾಸ್ಟರ್ (Kota)ಕೋಟ: ಅಂಬೇಡ್ಕರ್ ಅನುಭವಿಸಿದ ಯಾತನೆ ಸಮಾಜದ ಕಣ್ಣು ತೆರೆಯಿಸಿತಲ್ಲದೆ, ಕೆಳ ಮತ್ತು ಮಧ್ಯಮ ವರ್ಗದವರ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆಯಿತು ಎಂದು ಶಿಕ್ಷಕ ಹೆರಿಯ ಮಾಸ್ಟರ್ ಹೇಳಿದರು.  ಅವರು ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ. […]

(Kota)ಕೋಟ: ಅಂಬೇಡ್ಕರ್ ಅನುಭವಿಸಿದ ಯಾತನೆ ಸಮಾಜದ ಕಣ್ಣು ತೆರೆಯಿಸಿತಲ್ಲದೆ, ಕೆಳ ಮತ್ತು ಮಧ್ಯಮ ವರ್ಗದವರ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆಯಿತು ಎಂದು ಶಿಕ್ಷಕ ಹೆರಿಯ ಮಾಸ್ಟರ್ ಹೇಳಿದರು.

 ಅವರು ಕೋಟ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾ ಬಳಗ ಮಣೂರು ಸಹಕಾರದೊಂದಿಗೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ 135 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಅಸ್ಪರ್ಶತೆ ಸಮಾನತೆಯ ಬಗ್ಗೆ ಸತತವಾಗಿ ಹೋರಾಟ ಮಾಡಿ, ಈ ದೇಶಕ್ಕೆ ಒಂದು ಸುಂದರ ಅರ್ಥಗರ್ಭಿತ ಸಂವಿಧಾನವನ್ನು ನೀಡಿದ ಹೆಮ್ಮೆ ಅಂಬೇಡ್ಕರ್ ರವರಿಗೆ ಸಲ್ಲುತ್ತದೆ. ಅವರು ಬದುಕಿನ ಆಯಾಮಗಳನ್ನು ಗಮನಿಸಿದರೆ ಅತ್ಯಂತ ಕ್ಲಿಷ್ಟಕರ ಸಮಸ್ಯೆಗಳನ್ನು ಅನುಭವಿಸಿ ತನ್ನಂತೆ ಎಲ್ಲರೂ ಅನುಭವಿಸಬಾರದು ಎಂಬ ಚಿಂತನೆಗಳೊಂದಿಗೆ ಆ ಕಾಲದಲ್ಲಿ ಸಂವಿಧಾನದ ಮೂಲಕ ನ್ಯಾಯ ದೊರಕಿಸಿದ್ದಾರೆ. ಇದರ ಪರಿಣಾಮ ನೀವು ನಾವು ಇಂದು ಸಮಾಜದಲ್ಲಿ ಮುಂಚೂಣಿಯಲ್ಲಿ ನಿಂತು ಕಾರ್ಯಾಚರಿಸುವಂತೆ ಮಾಡಿದೆ. ಪಂಚವರ್ಣದ  ಈ ಕಾರ್ಯಕ್ರಮ ಇತರ ಸಂಘಟನೆಗಳಿಗೆ ಸ್ಪೂರ್ತಿಯಾಗಿದೆ ಎಂದರು.

  ವೇದಿಕೆಯಲ್ಲಿದ್ದ ಗಣ್ಯರು ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

 ಇಂಡಿಕಾ ಕಲಾ ಬಳಗದ ಸಂಚಾಲಕ ಪ್ರಭಾಕರ್ ಪಡುಕರೆ ಪ್ರಾಸ್ತಾವನೆ ಸಲ್ಲಿಸಿದರು.

ಸಭಾಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಮನೋಹರ್ ಪೂಜಾರಿ ವಹಿಸಿದ್ದರು.

 ಮುಖ್ಯ ಅತಿಥಿಗಳಾಗಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ತಾರಾನಾಥ ಹೊಳ್ಳ,ಪಂಚವರ್ಣದ ಸಂಚಾಲಕ ಅಮೃತ್ ಜೋಗಿ ಉಪಸ್ಥಿತರಿದ್ದರು.

  ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಯುವಕ ಮಂಡಲದ ಸದಸ್ಯ ಪ್ರಶಾಂತ್ ಪಡುಕರೆ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.