• Home  
  •   ಕೋಟ ಶ್ರೀನಿವಾಸ ಪೂಜಾರಿ ಗೆಲುವು ಖಚಿತ : ಕಾಪುವಿನಲ್ಲಿ ಗುರ್ಮೆ ಸುರೇಶ್‌ ಶೆಟ್ಟಿ (Kota Shrinivasa Poojary Victory is certain : Gurme Suresh Shetty)
- ರಾಜಕೀಯ - ವಿಡಿಯೋ

  ಕೋಟ ಶ್ರೀನಿವಾಸ ಪೂಜಾರಿ ಗೆಲುವು ಖಚಿತ : ಕಾಪುವಿನಲ್ಲಿ ಗುರ್ಮೆ ಸುರೇಶ್‌ ಶೆಟ್ಟಿ (Kota Shrinivasa Poojary Victory is certain : Gurme Suresh Shetty)

Share:   ಕೋಟ ಶ್ರೀನಿವಾಸ ಪೂಜಾರಿ ಗೆಲುವು ಖಚಿತ : ಕಾಪುವಿನಲ್ಲಿ ಗುರ್ಮೆ ಸುರೇಶ್‌ ಶೆಟ್ಟಿ (Kaup) ಕಾಪು: ಬಿಜೆಪಿಯ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು (Udupi Chikka magaluru BJP Candidate Kota Srinivasa Poojary)  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಎದುರು ಪ್ರಚಂಡ ವಿಜಯ ಸಾಧಿಸುತ್ತಾರೆ ಎಂದು ಕಾಪು ಶಾಕ ಗುರ್ಮೆ ಸುರೇಶ್‌ ಶೆಟ್ಟಿ (Kaup MLA Gurme Suresh Shetty) ಹೇಳಿದ್ದಾರೆ. ಅವರು ಶುಕ್ರವಾರ ಕಾಪುವಿನ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ […]

  ಕೋಟ ಶ್ರೀನಿವಾಸ ಪೂಜಾರಿ ಗೆಲುವು ಖಚಿತ : ಕಾಪುವಿನಲ್ಲಿ ಗುರ್ಮೆ ಸುರೇಶ್‌ ಶೆಟ್ಟಿ

(Kaup) ಕಾಪು: ಬಿಜೆಪಿಯ ಉಡುಪಿ- ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರು (Udupi Chikka magaluru BJP Candidate Kota Srinivasa Poojary)  ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯ ಎದುರು ಪ್ರಚಂಡ ವಿಜಯ ಸಾಧಿಸುತ್ತಾರೆ ಎಂದು ಕಾಪು ಶಾಕ ಗುರ್ಮೆ ಸುರೇಶ್‌ ಶೆಟ್ಟಿ (Kaup MLA Gurme Suresh Shetty) ಹೇಳಿದ್ದಾರೆ.

ಅವರು ಶುಕ್ರವಾರ ಕಾಪುವಿನ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

  ಎ. 21 ರಂದು ಯುವಮೋರ್ಚಾ, ಮಹಿಳಾ ಮೋರ್ಚಾದ ನೇತೃತ್ವದಲ್ಲಿ ಕಾಪುವಿನ ಶ್ರೀ ಜನಾರ್ದನ‌ ದೇವಸ್ಥಾನದಿಂದ ಕಾಪು ಪೇಟೆ ವರೆಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಪಾದಯಾತ್ರೆಯಲ್ಲಿ ಪ್ರಾಮುಖ್ಯವಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ (MP Prathap Simha) ಭಾಗಿ ಆಗಲಿದ್ದು, ಸಾವಿರಾರು ಬಿಜೆಪಿ ಬೆಂಬಲಿಗರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

  ಬಿಜೆಪಿಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದು, ರಸ್ತೆ, ನೀರು, ಕರೆಂಟ್‌ ವಿಷಯ ಮರೆತು ದೇಶಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ ಬೇಕು, ಮೋದಿ ಮತ್ತೊಮ್ಮೆ ಬರಬೇಕು ಎಂದು ಮತದಾರರು ಸಂಕಲ್ಪಿಸಿದ್ದಾರೆ.

 ನರೇಂದ್ರ ಮೋದಿ ಸರಕಾರದ 10 ವರ್ಷಗಳ ಸಾವಿರಾರು ಕಾರ್ಯಕ್ರಮಗಳು ಭಾರತದ ಭವಿಷ್ಯಕ್ಕೆ ಪೂರಕವಾಗಲಿದೆ. ಕರಾವಳಿ ಜನ ವಿದ್ಯಾವಂತರಾಗಿದ್ದು, ಪ್ರಧಾನಿ ನರೇಂದ್ರ ಮೋದಿ (PM Narendra Modi) ಸರಕಾರದ ಯೋಜನೆಗಳಿಂದ ಪ್ರೇರಿತರಾಗಿ ಶೇ. 20 ರಷ್ಟು ಹೆಚ್ಚುವರಿ ಮತಗಳು ಬರಲಿವೆ.

  ಮೋದಿ ಸಂಕಲ್ಪ, ಭ್ರಷ್ಟಾಚಾರ ಸಹಿತವಾದ ಆಡಳಿತ, 2014 ರ ಹಿಂದಿನ, ನಂತರದ ಭಾರತ ಹೇಗಿದೆ ಎನ್ನುವುದನ್ನು ಜನ ಗಮನಿಸುತ್ತಿದ್ದಾರೆ.

  ಆರ್ಥಿಕವಾಗಿ 5 ಪ್ರಬಲ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಉಡುಪಿ ಮತ್ತು ಮಂಗಳೂರಿನಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಗುರ್ಮೆ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಆದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಸರಕಾರ ಸಂಪೂರ್ಣ ವಿಫಲವಾಗಿದೆ. ಸಿದ್ದರಾಮಯ್ಯ ಸರಕಾರ ಆರ್ಥಿಕವಾಗಿ  ದಿವಾಳಿಯಾಗಿದೆ. ಒಂದೇ ಒಂದು ದೈವಸ್ಥಾನ, ದೇವಸ್ಥಾನ ಅಭಿವೃದ್ಧಿ ಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಅಭಿವೃದ್ಧಿಗೆ ಹಣ ಸಿಗುತ್ತಿಲ್ಲ. ಅಧಿವೇಶನದಲ್ಲೂ ಕೇಳಿದ್ದೇನೆ. ಅದಕ್ಕೂ ಉತ್ತರ ನೀಡಿಲ್ಲ ಎಂದೂ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದರು.

ಕರಾವಳಿಯಲ್ಲಿ ಬಿಲ್ಲಬ ಮತ್ತು ಬಂಟ ಜಾತಿ ಸಮೀಕರಣದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಗುರ್ಮೆ ಸುರೇಶ್‌ ಶೆಟ್ಟಿ, ಜಾತಿ ರಾಜಕೀಯ ಇಲ್ಲಿ ನಡೆಯದು. ಇಲ್ಲಿ ಜಾತಿ ಸಮೀಕರಣ ನಡೆದಿದ್ದರೆ ನಾನು ಗೆಲ್ಲುತ್ತಿರಲಿಲ್ಲ. ನನಗೆ ಎಲ್ಲರೂ ಮತನೀಡಿದ್ದಾರೆ. ಹಾಗಾಗಿ ಗೆದ್ದಿದ್ದೇನೆ. ಯಾರೂ ಅರ್ಜಿ ಹಾಕಿ ನಿರ್ದಿಷ್ಟ ಜಾತಿಯಲ್ಲಿ ಹುಟ್ಟಿಲ್ಲ. ಯಾವ ರಾಜಕೀಯವೂ ನಡೆಯದೆ ಕೋಟ ಶ್ರೀನಿವಾಸ ಪೂಜಾರಿ ಗೆಲು ಖಚಿತ ಎಂದ ಗುರ್ಮೆ ಸುರೇಶ್‌ ಶೆಟ್ಟಿ, ಕೋಟಾರವರು ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿತ್ವ. ಅವರ ಅಧಿಕಾರವಾಧಿಯಲ್ಲಿ ಸಣ್ಣ ಸಣ್ಣ ದೈವಸ್ಥಾನದಿಂದ ಹಿಡಿದು ದೊಡ್ಡ ದೇವಸ್ಥಾನಗಳಿಗೂ ಅನುದಾನ ನೀಡಿದ್ದಾರೆ. ಜನರು ಜಾತಿ ನೋಡದೆ ಖಚಿತವಾಗಿ ಅವರನ್ನು ಗೆಲ್ಲಿಸುತ್ತಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಜಿತೇಂದ್ರ ಶೆಟ್ಟಿ (Kaup BJP President Jitendra Shetty), ಚುನಾವಣಾ ಪ್ರಭಾರಿ ಮರಳೀಧರ ಪೈ, ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ವಕ್ತಾರ ನವೀನ್ ಎಸ್.ಕೆ., ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್, ಯುವ ಮೋರ್ಚಾ ಅಧ್ಯಕ್ಷ ಸೋನು ಪಾಂಗಾಳ, ಬಿಜೆಪಿ ರೈತ ವಿಭಾಗದ ಅಧ್ಯಕ್ಷ ಕೃಷ್ಣ ರಾವ್ ಕರಂದಾಡಿ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.