• Home  
  • ಕೌಟುಂಬಿಕ ಕಲಹ ಹಿನ್ನೆಲೆ : ಪತಿಯಿಂದಲೇ ಪತ್ನಿಗೆ ಮಾರಣಾಂತಿಕ ಹಲ್ಲೆ, ಮಹಿಳೆ ಗಂಭೀರ (Family dispute: Husband fatally attacks wife, woman in serious condition)
- ಅಪರಾಧ

ಕೌಟುಂಬಿಕ ಕಲಹ ಹಿನ್ನೆಲೆ : ಪತಿಯಿಂದಲೇ ಪತ್ನಿಗೆ ಮಾರಣಾಂತಿಕ ಹಲ್ಲೆ, ಮಹಿಳೆ ಗಂಭೀರ (Family dispute: Husband fatally attacks wife, woman in serious condition)

Share: ಕೌಟುಂಬಿಕ ಕಲಹ ಹಿನ್ನೆಲೆ : ಪತಿಯಿಂದಲೇ ಪತ್ನಿಗೆ ಮಾರಣಾಂತಿಕ ಹಲ್ಲೆ, ಮಹಿಳೆ ಗಂಭೀರ ನೂರಾಳ್ ಬೆಟ್ಟವಿನ ಗೀತಾ ಹಲ್ಲೆಗೊಳಗಾದ ಮಹಿಳೆ (Karkal) ಕಾರ್ಕಳ : ಪತಿಯೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ಎಂಬಲ್ಲಿ ಘಟಿಸಿದ್ದು, ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.     ನೂರಾಳ್ ಬೆಟ್ಟವಿನ ಗೀತಾ ಹಲ್ಲೆಗೊಳಗಾದ ಮಹಿಳೆ. ಗೀತಾ ಮತ್ತು ಪತಿ ಸುನೀಲ್ ಕುಮಾರ್ ನಡುವೆ ಮಂಗಳವಾರ ಬೆಳಗ್ಗೆ ಜಗಳ […]

ನೂರಾಳ್ ಬೆಟ್ಟವಿನ ಗೀತಾ ಹಲ್ಲೆಗೊಳಗಾದ ಮಹಿಳೆ

(Karkal) ಕಾರ್ಕಳ : ಪತಿಯೇ ಪತ್ನಿಗೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ಎಂಬಲ್ಲಿ ಘಟಿಸಿದ್ದು, ಗಂಭೀರ ಗಾಯಗೊಂಡ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.

    ನೂರಾಳ್ ಬೆಟ್ಟವಿನ ಗೀತಾ ಹಲ್ಲೆಗೊಳಗಾದ ಮಹಿಳೆ. ಗೀತಾ ಮತ್ತು ಪತಿ ಸುನೀಲ್ ಕುಮಾರ್ ನಡುವೆ ಮಂಗಳವಾರ ಬೆಳಗ್ಗೆ ಜಗಳ ನಡೆದಿದ್ದು, ಜಗಳ ತಾರಕಕ್ಕೇರಿ ಸುನೀಲ್ ಕುಮಾರ್ ಪತ್ನಿಗೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

   ಹಲ್ಲೆಯಿಂದ ಗೀತಾ ಅವರಿಗೆ ಎದೆಯ ಮೂಳೆಗಳು ಮುರಿದು, ಹೊಟ್ಟೆಯ ಒಳಭಾಗದಲ್ಲಿ ಗಂಭೀರ ಗಾಯಗಳಾಗಿದೆ.

 ತೀವ್ರಗಾಯಗೊಂಡ ಗೀತಾರವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

  ಈ ಕುರಿತು ಗೀತಾ ಅವರ ಸಹೋದರ ಅಶೋಕ ಪೂಜಾರಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.