• Home  
  • ಕ್ರಾಸ್ ಕಂಟ್ರಿ: ಆಳ್ವಾಸ್ ಮೂಡಬಿದ್ರಿ ಸತತ ೨೦ನೇ ವರ್ಷ ಚಾಂಪಿಯನ್ (Cross Country Race – Alvas Moodabidri Champion)
- ಶಾಲಾ ಕಾಲೇಜು

ಕ್ರಾಸ್ ಕಂಟ್ರಿ: ಆಳ್ವಾಸ್ ಮೂಡಬಿದ್ರಿ ಸತತ ೨೦ನೇ ವರ್ಷ ಚಾಂಪಿಯನ್ (Cross Country Race – Alvas Moodabidri Champion)

Share: ಕ್ರಾಸ್ ಕಂಟ್ರಿ: ಆಳ್ವಾಸ್ ಮೂಡಬಿದ್ರಿ ಸತತ ೨೦ನೇ ವರ್ಷ ಚಾಂಪಿಯನ್  ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನವೆಂಬರ್ ೪ ಮತ್ತು ೫ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ ಕಂಟ್ರಿ (Mangaluru University Cross Country Race) ಚಾಂಪಿಯನ್‌ಶಿಫ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ ೨೦ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡಿದ್ದಾರೆ. […]

ಕ್ರಾಸ್ ಕಂಟ್ರಿ: ಆಳ್ವಾಸ್ ಮೂಡಬಿದ್ರಿ ಸತತ ೨೦ನೇ ವರ್ಷ ಚಾಂಪಿಯನ್

 ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನವೆಂಬರ್ ೪ ಮತ್ತು ೫ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ ಕಂಟ್ರಿ (Mangaluru University Cross Country Race) ಚಾಂಪಿಯನ್‌ಶಿಫ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ ೨೦ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಪುರುಷರ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಚಂದನ್ ಯಾದವ್ (ಪ್ರಥಮ), ಅಂಕಿತ್ ದೇಶ್ವಾಲ್ (ದ್ವಿತೀಯ), ಆಸಿಫ್ ಖಾನ್ (ತೃತೀಯ), ಸುನಿಲ್ ಕುಮಾರ್ (೪ನೇ ಸ್ಥಾನ), ಅಕ್ಷಯ್ ಕುಮಾರ್ (೫ನೇ ಸ್ಥಾನ), ಅರವಿಂದ್ ಯಾದವ್ (೬ನೇ ಸ್ಥಾನ) ಪಡೆದಿದ್ದಾರೆ.

ಮಹಿಳೆಯರ ವಿಭಾಗದಲ್ಲಿ ಸೋನುನೆ ಪೂನಂ ದಿನಕರ್ (ಪ್ರಥಮ), ಬಸಂತಿ ಕುಮಾರಿ (ದ್ವಿತೀಯ), ಕೆ.ಎಂ.ಸೋನಿಯಾ (ತೃತೀಯ), ಚೈತ್ರಾ ದೇವಾಡಿಗ (೪ನೇ ಸ್ಥಾನ), ದಿಶಾ ಬೋರ್ಶೆ (೬ನೇ ಸ್ಥಾನ), ಕೆ.ಎಂ. ಅಂಜಲಿ (೭ನೇ ಸ್ಥಾನ) ಪಡೆದಿದ್ದಾರೆ. 

ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ (DR. M Mohan alva)ಶ್ಲಾಘಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.