• Home  
  • ಗಲ್ಫ್ ರಾಷ್ಟ್ರದಿಂದ ಬಂದ ಮಗ ತನ್ನ ತಾಯಿಗೆ ನೀಡಿದ ಸರ್ಪ್ರೈಸ್ ಸಾಮಾಜಿಕ‌ ಜಾಲ ತಾಣದಲ್ಲಿ ಈಗ ವೈರಲ್
- ಕರಾವಳಿ - ವಿಡಿಯೋ

ಗಲ್ಫ್ ರಾಷ್ಟ್ರದಿಂದ ಬಂದ ಮಗ ತನ್ನ ತಾಯಿಗೆ ನೀಡಿದ ಸರ್ಪ್ರೈಸ್ ಸಾಮಾಜಿಕ‌ ಜಾಲ ತಾಣದಲ್ಲಿ ಈಗ ವೈರಲ್

Share: ಗಲ್ಫ್ ರಾಷ್ಟ್ರದಿಂದ ಬಂದ ಮಗ ತನ್ನ ತಾಯಿಗೆ ನೀಡಿದ ಸರ್ಪ್ರೈಸ್ ಸಾಮಾಜಿಕ‌ ಜಾಲ ತಾಣದಲ್ಲಿ ಈಗ ವೈರಲ್ ಉಡುಪಿ / ಬೈಂದೂರು : ಮೂರು ವರ್ಷಗಳ ಬಳಿಕ ತಾಯಿನಾಡಿಗೆ ಮರಳಿದ ಯುವಕನೋರ್ವ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ತೆರಳಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು.ಮನೆಯವರಿಗೆ,ಮಿತ್ರರಿಗೆ ಸರ್ಪ್ರೈಸ್ ನೀಡುವ ನಿಟ್ಟಿನಿಂದ ತಾವು ಬರುವ ಕುರಿತು ಯಾವುದೇ ಮಾಹಿತಿ ನೀಡದೆ […]

ಗಲ್ಫ್ ರಾಷ್ಟ್ರದಿಂದ ಬಂದ ಮಗ ತನ್ನ ತಾಯಿಗೆ ನೀಡಿದ ಸರ್ಪ್ರೈಸ್ ಸಾಮಾಜಿಕ‌ ಜಾಲ ತಾಣದಲ್ಲಿ ಈಗ ವೈರಲ್

ಉಡುಪಿ / ಬೈಂದೂರು :

ಮೂರು ವರ್ಷಗಳ ಬಳಿಕ ತಾಯಿನಾಡಿಗೆ ಮರಳಿದ ಯುವಕನೋರ್ವ ತನ್ನ ತಾಯಿಗೆ ಸರ್ಪ್ರೈಸ್ ನೀಡಲು ತೆರಳಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಗಂಗೊಳ್ಳಿ ನಿವಾಸಿ ರೋಹಿತ್ ಮೂರು ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು.
ಮನೆಯವರಿಗೆ,ಮಿತ್ರರಿಗೆ ಸರ್ಪ್ರೈಸ್ ನೀಡುವ ನಿಟ್ಟಿನಿಂದ ತಾವು ಬರುವ ಕುರಿತು ಯಾವುದೇ ಮಾಹಿತಿ ನೀಡದೆ ಊರಿಗೆ ಮರಳಿದ್ದರು. ಮನೆಗೆ ಮರಳಿದಾಗ ಮನೆಯವರೆಲ್ಲ ರೋಹಿತ್ ನನ್ನು ಎದುರುಗೊಂಡರು ತಾಯಿ ಮನೆಯಲ್ಲಿ ಇರದಿರುವುದನ್ನು ಕಂಡು ಬೇಸರಗೊಂಡಿದ್ದ ರೋಹಿತ್, ನೇರವಾಗಿ ಗಂಗೊಳ್ಳಿ ಬಂದರು ಬಳಿ ತಾಯಿ ಮೀನು ಮಾರುವ ಸ್ಥಳಕ್ಕೆ ತೆರಳಿದ್ದಾರೆ. ತಾಯಿ ಸುಮಿತ್ರ ಮೀನು ಮಾರುತ್ತಿದ್ದಲ್ಲಿಗೆ ತೆರಳಿದ್ದ ರೋಹಿತ್ ತಲೆಗೆ ಟೋಪಿ ಹಾಕಿ ಮುಖಕ್ಕೆ ಕರವಸ್ತ್ರ ಕಟ್ಟಿ ಕನ್ನಡಕ ಹಾಕಿ ಮೀನು ಖರೀದಿಯ ನಾಟಕವಾಡಿದ್ದಾನೆ. ತನ್ನ ಬಳಿ ನೀನು ಖರಿದಿಸಲು ಬಂದ ವ್ಯಕ್ತಿಯ ಹಾವಭಾವ ಗಮನಿಸಿದ ತಾಯಿಗೆ, ಇದು ತನ್ನ ಮಗನೇ ಎಂದು ಹೆತ್ತು ಕರುಳು ಹೇಳಿದೆ. ತಕ್ಷಣ ತನ್ನ ಮಗನನ್ನು ಬಿಗಿದಪ್ಪಿ ಆನಂದ ಭಾಷ್ವ ಹರಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಮೂರು ವರ್ಷಗಳ ಬಳಿಕ ಮುಖ ಮರೆಮಾಡಿಕೊಂಡು ಬಂದರು, ಕೂಡ ತಾಯಿ ಮಗನನ್ನು ಗುರುತಿಸಿರುವುದು ನೆಟ್ಟಿಗರಿಗೆ ಸಖತ್ ಇಷ್ಟವಾಗಿದ್ದು, ತಾಯಿ ಮಗನ ಹೆಸರಿನಲ್ಲಿ ವಿಡಿಯೋ ವೈರಲ್ ಆಗುತ್ತಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.