ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕ್ರೀಡಾಪಟುವಿಗೆ ಬೇಕಿದೆ ಸರಕಾರದ ಉದ್ಯೋಗದ ಹಸ್ತ
ಅಂತಾರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಪಿಯನ್‌ಷಿಪ್‌ನಲ್ಲಿ ತ್ರಿವಿಧ ಜಿಗಿತದ ದ್ವಿತೀಯ ಸುತ್ತಿನ ಜಿಗಿತದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಒರಿಸ್ಸಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋಟದ ರಾಷ್ಟ್ರೀಯ ಅಥ್ಲೆಟಿಕ್ ಪಟು ಅಖಿಲೇಶ್ ರವರಿಗೆ ಬೇಕಾಗಿದೆ ಉದ್ಯೋಗದ ಆಸರೆ.
ಕೋಟದ ನಿವಾಸಿ ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಪ್ರಸ್ತುತ ರಾಷ್ಟ್ರೀಯ ಅಥ್ಲೆಟಿಕ್ ಪಟು ಅಖಿಲೇಶ್ ಏಷ್ಯನ್ ಗೇಮ್ಸ್ ಆಯ್ಕೆಯ ಟ್ರಯಲ್‌ಗಾಗಿ ಒಡಿಶಾದ ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ಜೂ.೧೯ರವರೆಗೆ ನಡೆದ ೬೨ನೇ ರಾಷ್ಟ್ರೀಯ ಅಂತಾರಾಜ್ಯ ಸೀನಿಯರ್ ಅಥ್ಲೆಟಿಕ್ ಚಾಪಿಯನ್‌ಷಿಪ್‌ನಲ್ಲಿ ತ್ರಿವಿಧ ಜಿಗಿತದ ದ್ವಿತೀಯ ಸುತ್ತಿನ ಜಿಗಿತದ ಸಂದರ್ಭ ಆಕಸ್ಮಿಕವಾಗಿ ಬಿದ್ದು ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಒರಿಸ್ಸಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಸಾಮಾನ್ಯವಾಗಿ ಸರಕಾರ ಬೇರೆ ಬೇರೆ ರಂಗದ ಸಾಧಕರಿಗೆ ಸಾಕಷ್ಟು ಸಹಾಯ ಚಾಚುತ್ತದೆ. ಅದೇ ರೀತಿ ಕ್ರೀಡಾಕ್ಷೇತ್ರ ತಳಮಟ್ಟದ ಕ್ರೀಡಾಪಟುಗಳ ಕ್ಷೇಮಾಭಿವೃದ್ಧಿ ಬಗ್ಗೆ ಚಿಂತಿಸುವ ಅಗತ್ಯತೆ ಇದೆ.
ರಾಷ್ಟ್ರೀಯ ಕ್ರೀಡಾಪಟು ಅಖಿಲೇಶ್ ತನ್ನ ಪ್ರಾಥಮಿಕ ಶಾಲಾ ದಿನಗಳಿಂದ ಆರಂಭಿಸಿಕೊಂಡು ಇಲ್ಲಿಯವರೆಗೂ ಕ್ರೀಡಾ ಕ್ಷೇತ್ರದಲ್ಲಿ ತನ್ನ ಛಾಪನ್ನು ಪದರ್ಶಿಸಿದ್ದಾರೆ.
ಅಲ್ಲದೆ ಅವರ ತುಡಿತದಂತೆ ಈ ದೇಶದ ಕೀರ್ತಿ ಪತಾಕೆಯನ್ನು ವಿಶ್ವಕ್ಕೆ ಪಸರಿಸಲು ತನ್ನ ತಂದೆ, ತಾಯಿ, ಸಹೋದರರ ಪ್ರೋತ್ಸಾಹದೊಂದಿಗೆ ಅಣಿಯಾಗಿ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೆರಿಸಿ ಕೊಂಡಿದ್ದಾರೆ.
ಇದೀಗ ಅಖಿಲೇಶ್ ಮೂಳೆಮುರಿತಕ್ಕೆ ಒಳಗಾಗಿ ತನ್ನ ಕ್ಷೇತ್ರದಿಂದ ಹೊರಗುಳಿದ್ದಿದ್ದಾರೆ. ಆದರೆ ಇವರು ಇದೀಗ ಚೇತರಿಸಿಕೊಳ್ಳುತ್ತಿದ್ದು, ಪುನಹ ಕ್ರೀಡಾಕ್ಷೇತ್ರಕ್ಕೆ ಧುಮುಕಲು ಸಾಕಷ್ಟು ಸಮಯ ಪಡದುಕೊಳ್ಳಲಿದೆ. ಆದರೆ ಇವರಿಗೆ ಸರಕಾರದ ಮಟ್ಟದಿಂದ ನೆರವಿನ ನಿರೀಕ್ಷೆ ಇದ್ದು ಉದ್ಯೋಗ ಅಥವಾ ಆರ್ಥಿಕ ಸಹಕಾರದ ಮೊರೆ ಇಡುತ್ತಿದ್ದಾರೆ.
ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಅಖಿಲೇಶ ತನ್ನ ನಿರಂತರ ಪರಿಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ ಅಲ್ಲದೆ ಇದೇ ಜು. ೨೮ರಿಂದ ಅಗಸ್ಟ್ ೮ರರೆಗೆ ಚೀನಾದ ಚೆಂಗ್ಡುವಿನಲ್ಲಿ ನಡೆಯುವ ಅಂತಾರಾಷ್ಟ್ರೀಯ ವಡ್೯ ಯೂನಿವರ್ಸಿಟಿ ಅಥ್ಲೇಟಿಕ್ ಚಾಂಪಿಯನ್ಷಿಪ್‌ಗೆ ಭಾರತವನ್ನು ಪ್ರತಿನಿಧಿಸಬೇಕಿದ್ದು, ಅದೃಷ್ಟವಶಾತ್ ಕಾಲಿನ ಮೂಳೆ ಮುರಿತಕ್ಕೆ ಒಳಗಾಗಿ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಸರಕಾರಿ ನೌಕರಿ ಬೇಡಿಕೆ
ಅಖಿಲೇಶ್ ಕೋಟ ತನ್ನ ಈ ವರೆಗೆ ಕ್ರೀಡಾಕ್ಷೇತದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸಾಕಷ್ಟು ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿದ್ದಾರೆ ಆದರೆ ಪ್ರಸ್ತುತ ಎದುರಾದ ಸಮಸ್ಯೆಗೆ ಸರಕಾರ ಸ್ಪಂದಿಸಿ ಅವರಿಗೆ ಉದ್ಯೋಗ ನೀಡಿದರೆ ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಬೆಳೆಯಲು ಪ್ರೇರಣೆಯಾಗಲಿದೆ.

